Shivamogga Crime News: ಶಿಕಾರಿಪುರ ತಾಲೂಕಿನ ಶಿರಳಕೊಪ್ಪದಲ್ಲಿ ಉದ್ಯಮಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಶಿವಮೊಗ್ಗ (ಆ. 27) : ಶಿಕಾರಿಪುರ ತಾಲೂಕಿನ ಶಿರಳಕೊಪ್ಪದಲ್ಲಿ ಉದ್ಯಮಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿರಾಳಕೊಪ್ಪದ ವಿಜಯಾ ಟ್ರೇಡರ್ಸ್ ಮಾಲೀಕ ಎ.ಆರ್. ದಯಾನಂದ (70) ಹತ್ಯೆಗೀಡಾದ ದುರ್ದೈವಿ. ಸೊರಬ ತಾಲ್ಲೂಕಿನ ಮಾವಳಿ ಚನ್ನಾಪುರದ ಕೋಟೇಶ್ ಕೊಲೆ ಆರೋಪಿ. ಎಂದಿನಂತೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವಾಗ ಆರೋಪಿ ಏಕಾಏಕಿ ಅಂಗಡಿಯೊಳಗೆ ನುಗ್ಗಿ ಚಾಕುವಿನಿಂದ ದಯಾನಂದ ಹಾಗೂ ಅವರ ಪುತ್ರ ರಾಘವೇಂದ್ರ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾನೆ.
ಚಾಕು ಇರಿತಕ್ಕೆ ಒಳಗಾದ ದಯಾನಂದ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಅವರ ಪುತ್ರ ರಾಘವೇಂದ್ರ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೂತನ ಬಿಲ್ಡಿಂಗ್ ಕಟ್ಟಿಸಿದ ಹಣಕಾಸು ವ್ಯವಹಾರದಲ್ಲಿ ಹಣ ನೀಡದೇ ದಯಾನಂದ ಸತಾಯಿಸುತ್ತಿದ್ದರು ಎನ್ನಲಾಗಿದೆ. ಬೆಸತ್ತ ಕೊಟೇಶ್ ಹೊಸ ಬಿಲ್ಡಿಂಗ್ ನಲ್ಲಿಯೇ ದಯಾನಂದರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ
ದಯಾನಂದ್ ಮತ್ತವರ ಪುತ್ರ ರಾಘವೇಂದ್ರ ಅವರು ಶಿರಾಳಕೊಪ್ಪದಲ್ಲಿ ವ್ಯಾಪಾರ ಮಾಡಿಕೊಂಡಿದ್ದರು. ಅಲ್ಲದೆ ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿ ತೊಡಗಿಕೊಂಡಿದ್ದರು. ಶಿರಾಳಕೊಪ್ಪ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಿಸಿದ್ದ ಸಾಲ ವಾಪಸ್ ಕೇಳಿದ ಬಾಲ್ಯ ಗೆಳಯನ ಹೊಡೆದು ಹತ್ಯೆ: ತಾವು ನೀಡಿದ್ದ .7.5 ಲಕ್ಷ ಸಾಲ ಮರಳಿಸುವಂತೆ ಮನೆ ಬಳಿ ಬಂದು ಕೇಳಿದ ರೈತರೊಬ್ಬರನ್ನು ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ ರಿಯಲ್ ಎಸ್ಟೇಟ್ ಏಜೆಂಟ್‌ನನ್ನು ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆ್ಯಕ್ಸಿಡೆಂಟ್ ಆದ ರೀತಿಯಲ್ಲಿ ಶವ ಪತ್ತೆ : ವ್ಯಕ್ತಿ ಸಾವಿನ ಹಿಂದೆ ಅನುಮಾನದ ಮೂಟೆ..!
ಮುನೇಕೊಳಲು ಸಮೀಪದ ಜೆಎಂಆರ್ ಪಲ್‌ರ್ ಅಪಾರ್ಚ್‌ಮೆಂಟ್ ನಿವಾಸಿ ಕೆ.ಶಿವಪ್ಪ ಬಂಧಿತನಾಗಿದ್ದು, ಮೂರು ದಿನಗಳ ಹಿಂದೆ ತಮ್ಮ ಮನೆಗೆ ಸಾಲ ವಸೂಲಿಗೆ ಬಂದಿದ್ದ ಹೊಸಕೋಟೆ ತಾಲೂಕಿನ ಬಾಗೂರು ಗ್ರಾಮದ ಕೃಷಿಕ ವೆಂಕಟೇಶಪ್ಪ (60) ಮೇಲೆ ಆರೋಪಿ ಹಲ್ಲೆ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ನೇಹ ತಂದ ಆಪತ್ತು: ಹೊಸಕೋಟೆ ತಾಲೂಕಿನ ಒಂದೇ ಗ್ರಾಮದವರಾದ ಶಿವಪ್ಪ ಹಾಗೂ ವೆಂಕಟೇಶಪ್ಪ ಬಾಲ್ಯ ಸ್ನೇಹಿತರು. ಹದಿನೈದು ವರ್ಷಗಳ ಹಿಂದೆ ಊರು ತೊರೆದು ನಗರಕ್ಕೆ ಬಂದು ಶಿವಪ್ಪ ನೆಲೆಸಿದ್ದ. ಈ ಗೆಳೆತನದಲ್ಲೇ ಇಬ್ಬರು ಪಾಲುದಾರಿಕೆಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಕೂಡಾ ನಡೆಸಿದ್ದರು. ಈ ಗೆಳೆಯರ ನಡುವೆ ಹಣಕಾಸು ವ್ಯವಹಾರ ಇತ್ತು.
ಇದೇ ವಿಶ್ವಾಸದಲ್ಲೇ ಕೆಲವು ಪರಿಚಿತರಿಂದ ಶಿವಪ್ಪನಿಗೆ ವೆಂಕಟೇಶಪ್ಪ ಸಾಲ ಕೊಡಿಸಿದ್ದರು. ಇದರಲ್ಲಿ .7.5 ಲಕ್ಷ ಬಾಕಿ ಉಳಿಸಿಕೊಂಡಿದ್ದ ಆರೋಪಿ, ಸಾಲ ಮರಳಿಸಲು ಏನೇನೋ ಸಬೂಬು ಹೇಳಿ ಕಾಲದೂಡುತ್ತಿದ್ದ. ವೆಂಕಟೇಶಪ್ಪ ಮಾತ್ರವಲ್ಲದೆ ಬೇರೆಯವರಿಂದಲೂ ಶಿವಪ್ಪ ಸಾಲ ಪಡೆದು ಸಮಸ್ಯೆ ಮಾಡಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.