Muruga Matha: ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ವಿದ್ಯಾರ್ಥಿನಿಯರ ವೈದ್ಯಕೀಯ ಪರೀಕ್ಷೆ

By Sharath Sharma  |  First Published Aug 27, 2022, 1:07 PM IST

Muruga Mutt Shivamurthi Sharana Seer: ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ದೂರು ನೀಡಿರುವ ಮೈಸೂರಿನಲ್ಲಿರುವ ವಿದ್ಯಾರ್ಥಿನಿಯರ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ.


ಮೈಸೂರು (ಆ.27): ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ದೂರು ದಾಖಲಾದ ನಂತರ ಹಲವು ಬೆಳವಣಿಗೆಗಳು ನಡೆಯುತ್ತಿವೆ. ಮಠದ ಮಾಜಿ ಆಡಳಿತಾಧಿಕಾರಿ ಕೆಎಸ್‌ ಬಸವರಾಜನ್‌ ಮತ್ತು ಅವರ ಪತ್ನಿಯ ಸೌಭಾಗ್ಯ ವಿರುದ್ಧ ಮಠದ ಮಹಿಳಾ ವಾರ್ಡನ್‌ ಅತ್ಯಾಚಾರ ಯತ್ನ ಪ್ರಕರಣ ದಾಖಲಿಸಿದ್ದಾರೆ. ಇತ್ತ ಲೈಂಗಿಕ ದೌರ್ಜನ್ಯ ದೂರು ನೀಡಿದ ವಿದ್ಯಾರ್ಥಿನಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಮಠದ ಪರ ವಕೀಲರು ಆರೋಪವನ್ನು ಅಲ್ಲಗಳೆದಿದ್ದು, ಮಠಧ ವಿರೋಧಿ ಶಕ್ತಿಗಳು ನಡೆಸುತ್ತಿರುವ ಷಡ್ಯಂತ್ರ ಎಂದು ಹೇಳುತ್ತಿದ್ದಾರೆ.

ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ, ಸುವರ್ಣ ನ್ಯೂಸ್‌ ಜತೆ ಮಾತನಾಡಿ 'ಹೆಣ್ಣು ಮಕ್ಕಳು ನಮ್ಮ ಮೇಲೆ ನಂಬಿಕೆ ಇಟ್ಟು ಇಲ್ಲಿಗೆ ಬಂದಿದ್ದಾರೆ. ಮಕ್ಕಳ ಹೇಳಿಕೆ ಆಧರಿಸಿ ದೂರು ದಾಖಲಿಸಲಾಗಿದೆ. ಮಕ್ಕಳ ಮೆಡಿಕಲ್ ಟೆಸ್ಟ್ ನಡೆಯಬೇಕು. ಆರೋಪಿಗಳು ಪ್ರಭಾವಿಗಳಾದ ಕಾರಣ ಸರ್ಕಾರ ನ್ಯಾಯಾಂಗ ತನಿಖೆ ನಡೆಸಬೇಕು. ಸಾಮಾನ್ಯವಾಗಿ ಇಂಥ ಪ್ರಕರಣದಲ್ಲಿ ಆರೋಪಿಗಳಿಗೆ 10 ವರ್ಷಗಳಿಗೂ ಹೆಚ್ಚು ಕಾಲ ಶಿಕ್ಷೆ ಆಗುತ್ತೆ. ಈಗಲೇ ಮಕ್ಕಳ ವೈದ್ಯಕೀಯ ಪರೀಕ್ಷೆ ಆಗಬೇಕು ಎಂದೇನೂ ಇಲ್ಲ. ಸಾಕಷ್ಟು ದಿನಗಳಿಂದ ಮಕ್ಕಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಅಪ್ರಾಪ್ತೆಯರ ಮೇಲೆ ದೌರ್ಜನ್ಯ ನಡೆದಿದೆ. 8-10 ವರ್ಷದ ಮಕ್ಕಳ ಮೇಲೂ ದೌರ್ಜನ್ಯ ನಡೆದಿರುವ
ಭಯಾನಕ ಪ್ರಕರಣವಿದು. ಇದರ ನ್ಯಾಯಾಂಗ ತನಿಖೆ ನಡೆಯಲಿ,'  ಎಂದು ಆಗ್ರಹಿಸಿದ್ದಾರೆ. 

Tap to resize

Latest Videos

ಬಾಲಕಿಯರ ವೈದ್ಯಕೀಯ ಪರೀಕ್ಷೆ:
ಮೂಲಗಳ ಪ್ರಕಾರ ಕೆಲವೇ ಕ್ಷಣಗಳಲ್ಲಿ ಒಡನಾಡಿ ಸಂಸ್ಥೆಯಿಂದ ವೈದ್ಯಕೀಯ ಪರೀಕ್ಷೆಗೆ ಪೊಲೀಸರು ಕರೆದೊಯ್ಯಲಿದ್ದಾರೆ. ಆರೋಪದ ಪ್ರಕಾರ ಘಟನೆ ನಡೆದು ಹಲವು ದಿನಗಳಾಗಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆಯಲ್ಲಿ ಯಾವ ರೀತಿಯ ಸಾಕ್ಷಿ ಸಿಗುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಆದರೂ ಕಾನೂನಿವ ಅನ್ವಯ ಪರೀಕ್ಷೆ ನಡೆಯಲಿದೆ. 

ಇದನ್ನೂ ಓದಿ: ಮಠದ ಮಾಜಿ ಆಡಳಿತಾಧಿಕಾರಿ ವಿರುದ್ಧ ಅತ್ಯಾಚಾರ ಯತ್ನ ದೂರು ನೀಡಿದ Muruga Matha ವಾರ್ಡನ್‌

ಮಾಜಿ ಆಡಳಿತಾಧಿಕಾರಿ ವಿರುದ್ಧವೂ ದೂರು:
ಮುರುಘಾ ಮಠದ ಶಿವಮೂರ್ತಿ ಶರಣ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಾದ ಬೆನ್ನಲ್ಲೇ ಮಠದ ಮಾಜಿ ಆಡಳಿತಾಧಿಕಾರಿ ಮತ್ತು ಮಾಜಿ ಸಚಿವ ಎಸ್‌.ಕೆ. ಬಸವರಾಜನ್‌ ಮತ್ತು ಪತ್ನಿ ಸೌಭಾಗ್ಯ ವಿರುದ್ಧ ಅತ್ಯಾಚಾರ ಯತ್ನ ಪ್ರಕರಣ ದಾಖಲಾಗಿದೆ. ಮೂಲಗಳ ಪ್ರಕಾರ ಬೃಹನ್ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್‌ ಅವರ ಬಳಿ ಶರಣರು ಲೈಂಗಿಕ ದೌರ್ಜನ್ಯ ಮಾಡಿರುವ ವಿಡಿಯೋ ಸಾಕ್ಷಿಯಿದೆ. ಆಶ್ರಮದ ಮಹಿಳಾ ವಾರ್ಡನ್‌ ಬಸವರಾಜನ್ ಮತ್ತು ಪತ್ನಿ ಸೌಭಾಗ್ಯ ಅವರ ವಿರುದ್ಧ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶರಣರು ಮತ್ತು ಬಸವರಾಜನ್‌ ನಡುವಿನ ಗಲಾಟೆ ಮುನ್ನೆಲೆಗೆ ಬಂದು ಬಹಳ ಕಾಲವಾಗಿದೆ. ಆದರೆ ಮಠದ ಪ್ರಕಾರ ವೈಷಮ್ಯದಿಂದ ಮಠದ ವಿರೋಧಿಗಳು ಶ್ರೀಗಳ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. 

ಇದನ್ನೂ ಓದಿ: ಮುರುಘಾ ಮಠ ಶ್ರೀಗಳಿಂದ ಲೈಂಗಿಕ ದೌರ್ಜನ್ಯ; ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು

ಶರಣರ ಮೇಲಿನ ಆರೋಪವೇನು?:
ಮುರುಘಾ ಶರಣರಿಗೆ ಹಣ್ಣು ನೀಡಲು ಒಬ್ಬೊಬ್ಬ ಹೆಣ್ಣು ಮಕ್ಕಳನ್ನು ಮಠದ ಹಾಸ್ಟೆಲ್‌ ವಾರ್ಡನ್ ರೂಮಿಗೆ ಕಳುಹಿಸುತ್ತಿದ್ದರು. ಆಗ ಶರಣರು ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯವೆಸಗಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಅಗತ್ಯ ತನಿಖೆ ನಡೆಯಬೇಕಾಗಿದ್ದು, ರಾಜ್ಯದ ಪ್ರಭಾವಿ ಸ್ವಾಮೀಜಿಗಳ ವಿರುದ್ಧ ಆರೋಪ ಕೇಳಿ ಬಂದಿದ್ದರಿಂದ, ಪ್ರಕರಣದ ತನಿಖೆ ಎತ್ತ ಸಾಗುತ್ತದೆ ಎಂದು ಕಾದು ನೋಡಬೇಕು. 

ಇದನ್ನೂ ಓದಿ: Chitradurga: ಮುರುಘಾ ಶರಣರಿಂದ ದೀಕ್ಷೆ ಪಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ!

click me!