Bank Fraud: ಯುನಿಯನ್ ಬ್ಯಾಂಕ್‌ಗೆ 53 ಕೋಟಿ ವಂಚಿಸಿದ್ದ 'ಮರಿಮಲ್ಯ' ಸೆರೆ!

By Suvarna NewsFirst Published Dec 26, 2021, 7:19 PM IST
Highlights

* ನಕಲಿ ದಾಖಲೆ ನೀಡಿ ಬ್ಯಾಂಕ್ ಗೆ ವಂಚನೆ
* ಹೈದರಾಬಾದ್ ಪೊಲೀಸರ ಕೈಗೆ ಸಿಕ್ಕಿಬಿದ್ದ ಮರಿ ಮಲ್ಯ
* ಪ್ರಖ್ಯಾತ ಕಂಪನಿಗಳ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿ
* ವಂಚಕ ಕಂಪನಿಯ ನಾಲ್ವರು ನಿರ್ದೇಶಕರ ವಿರುದ್ಧ ದೂರು

ಹೈದರಾಬಾದ್ (ಡಿ. 26) ಭಾರತ ಬ್ಯಾಂಕುಗಳಿಗೆ (Bank) ಸಾವಿರಾರು ಕೋಟಿ ರೂ.  ವಂಚಿಸಿ ವಿಜಯ್ ಮಲ್ಯ, ನೀರವ್ ಮೋದಿ ವಿದೇಶದಲ್ಲಿ ತಲೆಮರೆಸಿಕೊಂಡು ಆರಾಮಾಗಿದ್ದಾರೆ! ಇಲ್ಲೊಮ್ಮ 'ಮರಿ ಮಲ್ಯ' ನನ್ನು ಹೈದರಾಬಾದ್ (Hyderabad) ಪೊಲೀಸರು ಬಂಧಿಸಿ ಕರೆತಂದಿದ್ದಾರೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ (ಯುಬಿಐ) 53 ಕೋಟಿ ರೂಪಾಯಿ  ವಂಚಿಸಿದ್ದ (Fraud) ಉದ್ಯಮಿಯ ಬಂಧನವಾಗಿದೆ.  36 ವರ್ಷದ ಉದ್ಯಮಿಯನ್ನು ಸೈಬರಾಬಾದ್ ಎಕನಾಮಿಕ್ ಅಫೆನ್ಸ್ ವಿಂಗ್ (ಇಒಡಬ್ಲ್ಯು) ಪೊಲೀಸರು ಬಂಧಿಸಿದ್ದಾರೆ. ಬಂಧಿತ ಉದ್ಯಮಿಯನ್ನು ಸಂತೋಷ್ ರೆಡ್ಡಿ ಎಂದು ಗುರುತಿಸಲಾಗಿದ್ದು ಕೊಂಪಸ್ ಇನ್‌ಫ್ರಾಸ್ಟ್ರಕ್ಚರ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ  ಮಾಡುತ್ತಿದ್ದ.

ಯುಬಿಐನ ಸಹಾಯಕ ಪ್ರಧಾನ ವ್ಯವಸ್ಥಾಪಕ ಸರಿಗಾಲ ಪ್ರಕಾಶ್ ಬಾಬು ಮಾದಾಪುರ ಪೊಲೀಸರಿಗೆ ದೂರು ನೀಡಿದ್ದು ಉದ್ಯಮಿಯ ಬಂಧನವಾಗಿದೆ.  ವಂಚನೆಗೆ ಸಂಬಂಧಿಸಿ  ಸೈಬರಾಬಾದ್‌ನಲ್ಲಿ, ಕಂಪನಿ ಮತ್ತು ಅದರ ನಾಲ್ವರು ನಿರ್ದೇಶಕರ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ.  ಈ ವ್ಯಕ್ತಿಗಳಲ್ಲಿ ಒಬ್ಬನಾದ ಸಂತೋಷ ಬಂಧನವಾಗಿದೆ. 

ಬಂಧನವಾಗುವ ಮಾಹಿತಿ ತಿಳಿದ ಸಂತೋಷ್  ಪರಾರಿಯಾಗಲು ಯತ್ನಿಸಿದ್ದ. ಜುಬ್ಲಿ ಹಿಲ್ಸ್‌ನ ಮನೆಯೊಂದರಲ್ಲಿ ಪೊಲೀಸರು  ಆತನ ಬಂಧಿಸಿದ್ದಾರೆ. ನಕಲಿ ಬ್ಯಾಂಕ್ ಗ್ಯಾರಂಟಿ ನೀಡಿ ವಂಚನೆ ಮಾಡಿದ್ದರು. ಮಾದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ತನಿಖೆ ಆರಂಭಿಸಿದ ಬಳಿಕ ಪ್ರಕರಣವನ್ನು ಇಒಡಬ್ಲ್ಯೂಗೆ(economic offences wing) ಹಸ್ತಾಂತರಿಸಲಾಗಿದೆ.

ಆರೋಪಿ ಉದ್ಯಮಿ ದೂರುದಾರ 39 ನಕಲಿ ದಾಖಲೆ ಪತ್ರ ನೀಡಿ  ಬ್ಯಾಂಕ್ ಗೆ 53 ಕೋಟಿ ರೂ.  ವಂಚಿಸಿದ್ದ.  HPCL, Infinity Projects, Hella Infra Market Ltd, NSIC Ltd, Srujana Industries, Power2SME Pvt Ltd, Zetwerk Manufacturing Business Pvt Ltd ಹೆಸರಿನಲ್ಲಿ ದಾಖಲಾತಿ ನೀಡಿದ್ದ.

Conman Sukesh Crime World: ನಟಿಯರ ಭೇಟಿಗೆ ಅಧಿಕಾರಿಗಳಿಗೆ ಕೋಟಿ ಕೋಟಿ ಕೊಟ್ಟಿದ್ದ!

ಬ್ಯಾಂಕ್ ಅಧಿಕಾರಿಗಳು ಸಮಗ್ರ ಪರಿಶೀಲನೆಗೆ ಇಳಿದಾಗ ಪ್ರಕರಣ ಬೆಳಕಿಗ ಬಂದಿದೆ.  ಬ್ಯಾಂಕ್ ಗೆ ಸಂಬಂಧಿಸಿದ  ಇನ್ನು ಇಬ್ಬರು ಬ್ಯಾಂಕ್ ಗೆ ಸಂಬಂಧಿಸಿದವರು ಇದರಲ್ಲಿ ಪಾಲುದಾರರಾಗಿದ್ದಾರೆ ಎನ್ನಲಾಗಿದೆ

ಇನ್ನೊಂದು ಕಡೆ ಟಾಸ್ಕ್ ಫೋರ್ಸ್ ಪೊಲೀಸರು ದೊಡ್ಡ ಜಾಲವನ್ನು ಪತ್ತೆ ಮಾಡಿದ್ದಾರೆ. ಆಧಾರ್ ಕಾರ್ಡ್ ನೋಂದಣಿ ಮತ್ತು ಬದಲಾವಣೆ ಮಾಡಿಕೊಡಿತ್ತೇವೆ ಎಂದು ಜನರಿಂದ ದುಡ್ಡು ಸುಲಿಯುತ್ತಿದ್ದ ತಂಡ ಬಯಲಿಗೆ ಬಂದಿದೆ.

ಆರೋಪಿಗಳು ನಕಲಿ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ 7,000 ಅಕ್ರಮ ಆಧಾರ್ ಕಾರ್ಡ್ ನೋಂದಣಿ/ಡೇಟಾ ಬದಲಾವಣೆಯಲ್ಲಿ ಭಾಗಿಯಾಗಿದ್ದಾರೆ.

ಆರೋಪಿಗಳನ್ನು ಎಂಎ ರಬ್ಬಾನಿ, ಸೈಯದ್ ಮುಸ್ತಫಾ, ಅಜರ್ ಶರೀಫ್, ಸೊಹೈಲ್, ಜಹಾಂಗೀರ್ ಪಾಷಾ, ನಿತೇಶ್ ಸಿಂಗ್, ಅನ್ವರುದ್ದೀನ್ ಮತ್ತು ಅಹ್ಮದ್ ಎಂದು ಗುರುತಿಸಲಾಗಿದೆ. ಪವನ್ (35) ಎಂದು ಗುರುತಿಸಲಾಗಿರುವ ಶಂಕಿತ ಆರೋಪಿಗಳಲ್ಲಿ ಒಬ್ಬ ತಲೆಮರೆಸಿಕೊಂಡಿದ್ದಾನೆ. 

ನಕಲಿ ಪ್ರಮಾಣ ಪತ್ರ ಜಾಲ:  ನಕಲಿ ಶೈಕ್ಷಣಿಕ ದಾಖಲೆ(Duplicate Academic Record) ಬಳಸಿ ವೀಸಾ(VISA) ಪಡೆದು ವಿದೇಶಕ್ಕೆ ತೆರಳಲು ಯತ್ನಿಸಿದ ಯುವಕ ಸೇರಿದಂತೆ ಇಬ್ಬರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ಕೇರಳ(Kerala) ಮೂಲದ ಸೋಜು ಹಾಗೂ ಅನುರಾಗ್‌ ಬಂಧಿತರಾಗಿದ್ದು(Arrest), ಕೆಲ ದಿನಗಳ ಹಿಂದೆ ಇಂಗ್ಲೆಂಡ್‌ಗೆ(England) ತೆರಳಲು ಸೋಜು ಸಲ್ಲಿಸಿದ್ದ ದಾಖಲೆಗಳನ್ನು ಕೆಐಎ ವಲಸೆ ವಿಭಾಗದ ಅಧಿಕಾರಿಗಳು ಪರಿಶೀಲಿಸಿದಾಗ ನಕಲಿ ಶೈಕ್ಷಣಿಕ ದಾಖಲೆ ಪ್ರಕರಣ ಬೆಳಕಿಗೆ ಬಂದಿದೆ. ನಂತರ ವಲಸೆ ವಿಭಾಗದ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಲಂಡನ್‌ಗೆ(London) ಹೊರಟ್ಟಿದ್ದ ಸೋಜು ಹಾಗೂ ಆತನಿಗೆ ನಕಲಿ ಅಂಕಪಟ್ಟಿ ಸೇರಿದಂತೆ ದಾಖಲೆ ಸೃಷ್ಟಿಸಿಕೊಂಡಿದ್ದ ಅನುರಾಗ್‌ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಮ್ಯಾಟ್ರಿಮೋನಿ ವಂಚನೆ:  ಮ್ಯಾಟ್ರಿಮೋನಿ(Matrimonial  Site) ಸೈಟ್ ನಲ್ಲಿ ಅಪ್ ಡೇಡ್ ಮಾಡಿಕೊಂಡು ಎರಡನೇ ಮದುವೆ (Marriage) ಎನ್ನುತ್ತ ಈ  ಚತುರ  ಎಏಳು ಮದುವೆಯಾಗಿದ್ದಾನೆ. ಮದುವೆ ಮಾಡಿಕೊಂಡು ಮೂರೇ ತಿಂಗಳಲ್ಲಿ ಹಣದೊಂದಿಗೆ (Money) ಪರಾರಿಯಾಗುವುದು ಈತನ ವಾಡಿಕೆ!

ಶಾದಿ ಡಾಟ್ ಕಾಮ್ ಮೂಲಕ ಯುವತಿಯರನ್ನ ಪರಿಚಯ ಮಾಡಿಕೊಳ್ಳುತ್ತಿದ್ದ. ಮೊದಲನೇ ಪತ್ನಿ ಜೊತೆ ಡಿವೋರ್ಸ್ ಆಗಿದೆ.. ಎರಡನೆ ಮದುವೆ ಮಾಡಿಕೊಳ್ಬೇಕು ಅಂತಾ  ನಂಬಿಸಿ ಬಲೆ ಬೀಸುತ್ತಿದ್ದ. ಸಿಂಪಲ್ ಆಗಿ ಮದುವೆ ಮಾಡಿಕೊಡಿ ಅಂತಾ ಮದುವೆಗೆ ಫ್ಯಾಮಿಲಿ ಮಾತ್ರ ಕರೆದುಕೊಂಡು ಬಂದಿದ್ದ. ತಂದೆ ತಾಯಿ ಜೊತೆ ಮಾತನಾಡಿ  ಮದುವೆ ಮಾಡಿಕೊಳ್ಳುತ್ತಿದ್ದ. ನಂತರ ಈತನ ರಂಗಿನಾಟ ಗೊತ್ತಾಗುತ್ತಿತ್ತು.

click me!