Gang Rape : ಧಾರವಾಡ, ನಗರದ ಹೊರವಲಯಕ್ಕೆ  ವಿದ್ಯಾರ್ಥಿನಿ ಕರೆದೊಯ್ದು ಗ್ಯಾಂಗ್ ರೇಪ್

By Suvarna News  |  First Published Dec 26, 2021, 5:45 PM IST

* ಧಾರವಾಡದಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ
* ಅಪ್ರಾಪ್ತೆ ಮೇಲೆ ಎರಗಿದ ಅಪ್ರಾಪ್ತ ಕಾಮಾಂಧರು
* ವಿದ್ಯಾಕಾಶಿಯನ್ನು ಬೆಚ್ಚಿ ಬೀಳಿಸಿದ ಪ್ರಕರಣ


ಧಾರವಾಡ(ಡಿ. 26) ಧಾರವಾಡದಿಂದ (Dharwad) ಘೋರ ಪ್ರಕರಣವೊಂದು ವರದಿಯಾಗಿದೆ.  ಅಪ್ರಾಪ್ತಯೋರ್ವಳನ್ನು(
Minor Girl)  ಕರೆದೊಯ್ದು ಸಾಮೂಹಿಕ ಅತ್ಯಾಚಾರ (Gang Rape) ಎಸಗಿದ್ದು ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ. ಇಲ್ಲಿನ ಲಕ್ಷ್ಮೀಸಿಂಗನಕೇರಿಯ ಅಪ್ರಾಪ್ತಳ ಮೇಲೆ ಅದೇ ಬಡಾವಣೆಯ ಐವರು ಯುವಕರು ಅತ್ಯಾಚಾರ ನಡೆಸಿದ್ದಾರೆನ್ನಲಾಗಿದೆ.

ಬಾಸೆಲ್ ಮಿಶನ್ ಕಾಲೇಜಿನ ವಿದ್ಯಾರ್ಥಿನಿಯನ್ನು (Student) ನಗರದ ಹೊರವಲಯಕ್ಕೆ ಒತ್ತಾಯದಿಂದ ಕರೆದುಕೊಂಡು ಹೋದ ಅಪ್ರಾಪ್ತ ಯುವಕರು, ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.  ಈ ಕುರಿತು ಶಹರ ಠಾಣೆಯ ಪೊಲೀಸರು ತನಿಖೆ ಕೈಕೊಂಡಿದ್ದಾರೆ. ವಿದ್ಯಾಕಾಶಿಯಲ್ಲಿ ನಡೆದಿರುವಂತಹ ಘಟನೆ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ.

Tap to resize

Latest Videos

ಕೆನ್ನೆಗೆ ಬಾರಿಸಿದ್ದ ಅತ್ತಿಗೆಯನ್ನೇ ರೇಪ್ ಮಾಡಿ ಕೊಲೆಗೈದು ಮತ್ತೆ ರೇಪ್! :  ಬಿಹಾರದ (Bihar)ಮುಜಾಫರ್‌ಪುರ ಜಿಲ್ಲೆಯಲ್ಲಿ 32 ವರ್ಷದ ವ್ಯಕ್ತಿಯೊಬ್ಬ ತನ್ನ(sister-in-law) ಅತ್ತಿಗೆಯನ್ನು (Murder) ಕೊಲೆಗೈದಿದ್ದ.  ಆಕೆ ಸಾಯುವುದಕ್ಕೂ ಮುನ್ನ ಮತ್ತು ಸತ್ತ ನಂತರ ಆಕೆ ಮೇಲೆ ಅತ್ಯಾಚಾರ (Rape) ಎಸಗಿದ್ದಾನೆ.

Sexual Harassment : ಅಕ್ರಮ ಸಂಬಂಧದ ಗುಟ್ಟು ಇಟ್ಟುಕೊಂಡು ಬ್ಲಾಕ್ ಮೇಲ್, ಗ್ಯಾಂಗ್ ರೇಪ್

ಆರೋಪಿಯನ್ನು ಬುಧವಾರ ಬಂಧಿಸಲಾಗಿದೆ ಎಂದು ಮುಜಾಫರ್‌ಪುರ (ಪೂರ್ವ) ಉಪ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಪಾಂಡೆ ತಿಳಿಸಿದ್ದಾರೆ. ಆರೋಪಿ ಅತ್ಯಾಚಾರ ಎಸಗಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ. 

ಅತ್ಯಾಚಾರ ಎಸಗಿದ ನಂತರ ಸಂತ್ರಸ್ತೆಯನ್ನು (Victim) ಗ್ರೈಂಡರ್ ಗೆ ಬಳಸುತ್ತಿದ್ದ ಕಲ್ಲಿನಿಂದ  ಜಜ್ಜಿ ಕೊಂದಿದ್ದಾನೆ. ಆಕೆ ಸತ್ತ ಮೇಲೆಯೂ ತನ್ನ ಕಾಮ ತೃಷೆ ತೀರಿಸಿಕೊಂಡಿದ್ದಾನೆ.

ಕ್ರೂರಿಯ ದಾಳಿ ಕಾರಣಕ್ಕೆ ಸಂತ್ರಸ್ತೆಯ ಮುಖ ಮತ್ತು ತಲೆ ಜಜ್ಜಿಹೋಗಿದ್ದು ಆಕೆಯ ದಂತಪಂಕ್ತಿ ಛಿದ್ರಛಿದ್ರವಾಗಿದೆ. ಮನೆಯಲ್ಲಿನ ಜಾನುವಾರುಗಳನ್ನು ನೋಡಿಕೊಂಡು ಸಂತ್ರಸ್ತೆ ಒಂಟಿಯಾಗಿ ಜೀವನ ನಡೆಸುತ್ತಿದ್ದಳು. 

ಕೆಲಸ ಕೊಡಿಸುತ್ತೇನೆ ಎಂದು ಹೋಟೆಲ್ ಗೆ ಕರೆದ:   ಗುಜರಾತ್‌ನ (Gujarat) ಸೂರತ್‌ನಲ್ಲಿ 35 ವರ್ಷದ ವಿವಾಹಿತ ಮಹಿಳೆಯ ಮೇಲೆ 23 ವರ್ಷದ ಯುವಕನೊಬ್ಬ ಆಕೆಗೆ ಕೆಲಸ ಕೊಡಿಸುವ ನೆಪದಲ್ಲಿ ಹಲವು ಬಾರಿ (Rape) ಅತ್ಯಾಚಾರವೆಸಗಿದ್ದ ಪ್ರಕರಣ ಬೆಳಕಿಗೆ ಬಂದಿತ್ತು.  ಮಹಿಳೆ ನೀಡಿದ ದೂರಿನ ಮೇರೆಗೆ ಸಾರ್ಥನಾ ಪೊಲೀಸರು ಆರೋಪಿ ನಿಲೇಶ್ ಲಾಥಿಯಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

ಮಹಿಳೆ ತಮ್ಮ ಪತಿ ಮತ್ತು ಮಗುವಿನೊಂದಿಗೆ ವಾಸಿಸುತ್ತಿದ್ದರು.  ಒಂದು ವರ್ಷದ ಹಿಂದೆ ಮೋಟಾ ವರಚ ನಿವಾಸಿ ಲಾಥಿಯಾನ ಪರಿಚಯವಾಗಿತ್ತು. ಆಕೆಗೆ ಕೆಲಸ ಕೊಡಿಸುವುದಾಗಿ ಭರವಸೆ ಆರೋಪಿ ಭರವಸೆ ನೀಡಿದ್ದ.  ಸಮಯಾವಕಾಶ ಬಳಸಿಕೊಂಡು ಆಕೆಯನ್ನು ಹೋಟೆಲ್ ಗೆ  ಕರೆಸಿ ಅತ್ಯಾಚಾರವೆಸಗಿದ್ದ. ಈ ವೇಳೆ ಮಹಿಳೆಯ ಬೆತ್ತಲೆ ಪೋಟೋಗಳನ್ನು ತೆಗೆದುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವೆಬ್‌ ಕ್ಯಾಮೆರಾ ಚಿಕಿತ್ಸೆ, 400 ಮಹಿಳೆಯರ ಗುಪ್ತಾಂಗದ ವಿಡಿಯೋ ಸೆರೆ ಹಿಡಿದ ನಕಲಿ ಸ್ತ್ರೀರೋಗ ತಜ್ಞ!

ಹೋಟೆಲ್‌ನಲ್ಲಿ ಲೈಂಗಿಕ ದೌರ್ಜನ್ಯ ನಡೆದ 10 ದಿನಗಳ ನಂತರ ನಿಲೇಶ್ ಮತ್ತೆ ಮಹಿಳೆಯನ್ನು ಸಂಪರ್ಕಿಸಿದ್ದ.  ನಾನು ಹೇಳಿದಂತೆ ನಡೆದುಕೊಳ್ಳದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ನಗ್ನ ಛಾಯಾಚಿತ್ರಗಳನ್ನು ಹರಿಬಿಡುವುದಾಗಿ ಬೆದರಿಸಿದ್ದ.   ಬೇರೆ  ಕಾಣದೆ ಮಹಿಳೆ ಸುಮ್ಮನಾಗಿದ್ದಳು . ಗುಜರಾತ್‌ನ ಬರೂಚ್‌ನಲ್ಲಿರುವ ತನ್ನ ಸಹೋದರಿಗೆ ಸೇರಿದ ಸ್ಥಳದಲ್ಲಿ ಆಕೆಯ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದ.

ಎಟಿಎಂನಲ್ಲಿ ದೌರ್ಜನ್ಯ:  ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಮಹಿಳೆ ಜೊತೆ ಅಶ್ಲೀಲವಾಗಿ ವರ್ತಿಸಿದ ಕಾಮುಕ ಮಹಿಳೆಗೆ ತನ್ನ ಮರ್ಮಾಂಗ ತೋರಿಸಿದ್ದಾನೆ. ದಿಟ್ಟತನ ಮೆರೆದಿರುವ ಮಹಿಳೆ ಆತನ ಕೃತ್ಯವನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಕ್ಕೆ ಹಾಕಿದ್ದರು.

ಮುಂಬೈ ಹರಿ ಓಂ ನಗರದ ರಸ್ತೆಯಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿ ಭಾನುವಾರ ಬೆಳಗಿನ ಜಾವ 3 ಕೃತ್ಯ ನಡೆದಿದ್ದು ಆರೋಪಿಯನ್ನು ವಶಕ್ಕೆ ಪಡೆಯಲಾಗಿತ್ತು.  ಥಾಣೆಯ ಕೊಪಾರಿ ಪ್ರದೇಶದಲ್ಲಿ 23 ವರ್ಷದ ಮಹಿಳೆ ಭಾನುವಾರ ಎಟಿಎಂಗೆ ಹಣ ತೆಗೆಯಲು ಹೋಗಿದ್ದಾಳೆ. ಮಹಿಳೆ ಹಿಂಬಾಲಿಸಿ ಬಂದವ ಅಶ್ಲೀಲವಾಗಿ ವರ್ತಿಸತೊಡಗಿದ್ದಾನೆ.  ಆದರೆ ದಿಟ್ಟ ಮಹಿಳೆ ಆತನ  ವಿಡಿಯೋ ಮಾಡಿದ್ದಾಳೆ. ತಕ್ಷಣ ಕ್ರಮ ತೆಗೆದುಕೊಂಡ ಪೊಲೀಸರು ಆರೋಪಿ ಸಂದೀಪ್ ಕುಂಭಕರ್ಣ(38)ನನ್ನು ಬಂಧಿಸಿದ್ದರು.

ಅಕ್ರಮ ಸಂಬಂಧವೇ ಮುಳುವಾಗಿತ್ತು:  ತೆಲಂಗಾಣದ ಹೈದರಾಬಾದ್‌ನ (Hyderabad) ಎಸ್‌ಆರ್ ನಗರದಲ್ಲಿ ಡಿಸೆಂಬರ್ 13 ರಂದು ಇಬ್ಬರು ವ್ಯಕ್ತಿಗಳು ವಿವಾಹಿತ(Woman) ಮಹಿಳೆಯ ಮೇಲೆ ಸಾಮೂಹಿಕ (Rape) ಅತ್ಯಾಚಾರವೆಸಗಿದ್ದರು.  ಮಹಿಳೆ ಬೇರೆ ಒಬ್ಬನ ಜತೆ ಅಕ್ರಮ ಸಂಬಂಧ ಹೊಂದಿದ್ದಳು.. ನಿನ್ನ ಅಕ್ರಮ ಸಂಬಂಧ ವಿಚಾರವನ್ನು ಕುಟುಂಬಕ್ಕೆ ತಿಳಿಸುತ್ತೇವೆ ಎಂದು ಬೆದರಿಕೆ ಹಾಕಿ ಕೃತ್ಯ ಎಸಗಿದ್ದರು. ಆಕೆಯನ್ನು ಶಿಥಿಲಗೊಂಡ ಕಟ್ಟಡಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪ ಕೇಳಿ ಬಂದಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.


 

 

click me!