
ಹರಿಯಾಣದ ನುಹ್ ನಲ್ಲಿ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಸ್ಟಂಟ್ ಹೆಸರಿನಲ್ಲಿ ಮೂರ್ಖತನಕ್ಕೆ ಕೈ ಹಾಕಿ ವ್ಯಕ್ತಿ ಸಾವನ್ನಪ್ಪಿದ್ದಾನೆ. 27 ವರ್ಷದ ವ್ಯಕ್ತಿ ವಿಚಿತ್ರ ಸರ್ಕಸ್ ಸಾಹಸ ಪ್ರದರ್ಶಿಸಲು ಮುಂದಾಗಿದ್ದ. ಅದೇ ಅವನ ಸಾವಿಗೆ ಕಾರಣವಾಗಿದೆ.
ಸ್ಟಂಟ್ ಹೆಸರಿನಲ್ಲಿ ಮೊದಲು ಗೋಣಿ ಚೀಲದಲ್ಲಿ ಈತನನ್ನು ತುಂಬಲಾಗಿದೆ. ನಂತ್ರ ಸಮಾಧಿಗೆ ಹಾಕಿ ಮಣ್ಣು ಮುಚ್ಚಲಾಗಿದೆ. ಇನ್ನು ಮೂರು ದಿನಗಳಲ್ಲಿ ಆತ ಜೀವಂತವಾಗಿ ಹೊರ ಬರ್ತಾನೆ ಅಂತ ಪ್ರಚಾರ ಮಾಡಲಾಗಿದೆ. ಆದ್ರೆ ಮೂರು ದಿನಗಳ ನಂತ್ರ ಅಲ್ಲಿ ಆಗಿದ್ದೇ ಬೇರೆ.
ಸಾಹಸಿಗಳ ಗುಂಪು ಸಮಾಧಿ ಮುಚ್ಚಿದ ಮೇಲೆ ಅದನ್ನು ತೆಗೆಯುವ ಪ್ರಯತ್ನಕ್ಕೆ ಹೋಗಲಿಲ್ಲ. ಮೂರನೇ ದಿನ ಸಮಾಧಿ ತೆಗೆದು, ಗೋಣಿ ಚೀಲ ಬಿಚ್ಚಿದಾಗ ದೀಪಕ್ ಹೆಣವಾಗಿದ್ದ. ಫರಿದಾಬಾದ್ನ ಗೌಂಚಿ ಗ್ರಾಮದ ನಿವಾಸಿ ದೀಪಕ್, ಪ್ರವಾಸಿ ಬೈಸಿಕಲ್ ಸರ್ಕಸ್ ನಲ್ಲಿ ಕೆಲ್ಸ ಮಾಡ್ತಿದ್ದ. ಸರ್ಕಸ್ ಸದ್ಯ ಟೌರುವಿನ ಖೋರಿ ಗ್ರಾಮಕ್ಕೆ ಬಂದಿದೆ.
ಜೀವಂತ ಸಮಾಧಿ ಮುನ್ನ ದೀಪಕ್ ಸಾಕಷ್ಟು ಸೈಕಲ್ ಸಾಹಸಗಳನ್ನು ಪ್ರದರ್ಶಿಸಿದ್ದರು. ನಂತ್ರ ಅವರನ್ನು ಸಮಾಧಿ ಮಾಡಲಾಯ್ತು. ಅದ್ರೆ ಸಮಾಧಿಯನ್ನು ಯಾವಾಗ ತೆಗೆದ್ರು ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಜೀವಂತ ಸಮಾಧಿ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಲಾಗುತ್ತದೆ. ಜೊತೆಗೆ ಒಂದು ದಿನ ಮಾತ್ರ ಅಲ್ಲಿರಲು ಅನುಮತಿ ನೀಡಲಾಗುತ್ತದೆ. ಎಷ್ಟೇ ಜಾಗರೂಕರಾಗಿದ್ದರೂ ಇಂಥಹ ಸಾಹಸಗಳು ಅಪಾಯಕಾರಿ. ಸಮಾಧಿಯ ಸೀಮಿತ ಜಾಗದಲ್ಲಿ ಬದುಕುಳಿಯುವುದು ಲಭ್ಯವಿರುವ ಆಮ್ಲಜನಕದ ಪ್ರಮಾಣ, ವಾತಾಯನ ಮತ್ತು ತಾಪಮಾನವನ್ನು ಅವಲಂಬಿಸಿರುತ್ತದೆ. ಆಮ್ಲಜನಕದ ಮಟ್ಟಗಳು ಕಡಿಮೆಯಾಗಿ ಇಂಗಾಲದ ಡೈಆಕ್ಸೈಡ್ ಮಟ್ಟಗಳು ಹೆಚ್ಚಾದಂತೆ, ಉಸಿರಾಟವು ಕಷ್ಟಕರವಾಗುತ್ತದೆ. ಆಮ್ಲಜನಕದ ಮಟ್ಟಗಳು ತುಂಬಾ ಕಡಿಮೆಯಾದರೆ, ಅವರು ಪ್ರಜ್ಞಾಹೀನರಾಗಬಹುದು. ಉಸಿರುಗಟ್ಟಿ ಸಾಯುವ ಅಪಾಯವೂ ಇದೆ. ದೀಪಕ್ ಇದ್ರಲ್ಲಿ ಹತ್ತು ವರ್ಷಗಳ ಅನುಭವ ಹೊಂದಿದ್ದ. 2017 ರಲ್ಲಿ, ಪಾಣಿಪತ್ನಲ್ಲಿ 17 ವರ್ಷದ ಬಾಲಕ ಇದೇ ರೀತಿಯ ಸಾಹಸಕ್ಕೆ ಕೈ ಹಾಕಿ ಸಾವನ್ನಪ್ಪಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ