Robbery: ಕಲಬುರಗಿ,  ದಶಕದಿಂದ ತಲೆ ಮರೆಸಿಕೊಂಡಿದ್ದ ಕುಖ್ಯಾತ ಮನೆಗಳ್ಳರ ಬಂಧನ

By Kannadaprabha News  |  First Published Feb 5, 2022, 3:52 AM IST

* ದಶಕದಿಂದ ತಲೆ ಮರೆಸಿಕೊಂಡಿದ್ದ ಮನೆಗಳ್ಳರ ಬಂಧನ
* ಬಂಧಿತ ಮೂವರು ಆರೋಪಿಗಳಿಂದ 407.88 ಗ್ರಾಂ ಚಿನ್ನಾಭರಣ, ಒಂದು ದೇವರ ಮೂರ್ತಿ, 50 ಸಾವಿರ ನಗದು ಜಪ್ತಿ
* ತಂತ್ರಜ್ಞಾನ ಬಳಸಿ ಆರೋಪಿಗಳ ಸೆರೆ
* ಹದಿಮೂರು ಕಳ್ಳತನ ಪ್ರಕರಣ ಪತ್ತೆ


ಕಲಬುರಗಿ(ಫೆ. 05)  ಕಳೆದ 10 ವರ್ಷಗಳಿಂದ ಪೊಲೀಸರಿಗೆ (Police) ಚಳ್ಳೆ ಹಣ್ಣು ತಿನಿಸುತ್ತಿದ್ದ ಕುಖ್ಯಾತ ಮೂವರು ಮನೆಗಳ್ಳರನ್ನು (Robbers) ಕಲಬುರಗಿ ಜಿಲ್ಲಾ ಗ್ರಾಮೀಣ ಪೋಲಿಸರು ಶುಕ್ರವಾರ (Arrest) ಬಂಧಿಸಿದ್ದಾರೆ

ಪೋಲಿಸ್‌ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ದಿಶಾ ಪಂತ್ ಹಾಗೂ ಎಎಸ್ಪಿ ಪ್ರಸನ್ನ ದೇಸಾಯಿ ಮಾತನಾಡಿ, ಬಂಧಿತ ಮೂವರು ಖದೀಮರು ಕುಖ್ಯಾತರಾಗಿದ್ದರು. ಇವರ ಬಂಧನದಿಂದ ಜಿಲ್ಲೆಯಲ್ಲಿ ಅನೇಕ ಅಪರಾಧ ಪ್ರಕರಣಗಳಿಗೆ ಬ್ರೇಕ್‌ ಬಿದ್ದಂತಾಗಿದೆ. ಕಳೆದ 10 ವರ್ಷಗಳಿಂದ ತಪ್ಪಿಸಿಕೊಳ್ಳುತ್ತ, ಯಾವುದೇ ಸಣ್ಣ ಮಾಹಿತಿಯೂ ಸಹ ಸಿಗದಂತೆ ಮನೆಗಳ್ಳತನ ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನು ಬಂಧಿಸಲೇಬೇಕು ಎಂದು ತಂಡ ರಚಿಸಿ ಅವರ ಹಿಂದೆ ಬಿದ್ದಿದ್ದೇವು. ಸದರಿ ತಂಡ ತಂತ್ರಜ್ಞಾನ ಬಳಸಿ ಅವರನ್ನು ಬಂಧಿಸುವಲ್ಲಿ ಯಶ ಕಂಡಿದೆ ಎಂದು ಇಶಾ ಪಂತ್‌ ಹೇಳಿದ್ದಾರೆ.

Tap to resize

Latest Videos

ಕಾಳಗಿಯ ಚಂದ್ರಕಾಂತ ಹಲಗೇನವರ್‌, ಜಾಮಖೇಡದ ಪರಸ್‌ ಕಾಳೆ ಹಾಗೂ ಕಲಬುರಗಿ ಚೋಟಾ ರೋಜಾದ ರಾಘವೇಂದ್ರ ತೆಂಗಳಿ ಬಂಧಿತ ಖದೀಮರು. ಬಂಧಿತ ಆರೋಪಿ ಚಂದ್ರಕಾಂತ ಹÜಲಗೇನವರ 2018ರಲ್ಲಿ ಸುಲೇಪೇಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ನಿಡಗುಂದಾ ನಡೆದ ಜೋಡಿ ಕೊಲೆಯಲ್ಲಿ ಪ್ರಮುಖ ಆರೋಪಿಯಾಗಿದ್ದ. ಒಂದೇ ಸ್ಥಳದಲ್ಲಿ ವಾಸವಾಗಿರದೇ ಹಳೆಯ ಹಲವಾರು ಪ್ರಕರಣಗಳಲ್ಲಿ ಬೇಕಾದ ಆರೋಪಿಯಾಗಿದ್ದು, ಈತನ ಬಂಧನದಿಂದ ಮುಂದೆ ಜರುಗುವ ಅನೇಕ ಅಪರಾಧ ಪ್ರಕರಣಗಳನ್ನು ತಡೆಯುವಲ್ಲಿ ಜಿಲ್ಲಾ ಪೋಲಿಸರು ಯಶಸ್ವಿಯಾಗಿದ್ದಾರೆ.

ಚಂದ್ರಕಾಂತ ಅಲಿಯಾಸ್‌ ವಿಜ್ಯಾ ಹಲಗೇಣವರ ಕಾಳಗಿ ತಾಲೂಕಿನ ಮಂಗಲಗಿ ಗ್ರಾಮದವನು. ಈತನ ಸಹಚರರಾದ ಜಾಮಖೇಡ ಗ್ರಾಮದ ಪರಸ ಕಾಳೆ ಮತ್ತು ಕಲಬುರಗಿ ನಗರದ ಚೋಟಾರೋಜದ ಖಾನಾಪೂರ ನಿವಾಸಿ ರಾಘವೇಂದ್ರ ತೆಂಗಳಿ ಇವರೆಲ್ಲರೂ ಕುರಿಕೋಟಾ ಸೇತುವೆ ಬಲಿ ಇದ್ದಾರೆಂಬ ಖಚಿತ ಮಾಹಿತಿ ಆಧರಿಸಿ ಬಂಧಿಸಲಾಗಿದ್ದು, ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಚಿಟಗುಪ್ಪಾ ಪೋಲಿಸ್‌ ಠಾಣೆಯ ಒಂದು ಪ್ರಕರಣ ಸಮೇತ ಒಟ್ಟು ಕಲಬುರಗಿ ಜಿಲ್ಲೆಯ ವಿವಿಧ 13 ಕಳ್ಳತನ ಪ್ರಕರಣಗಳು ದಾಖಲಾಗಿವೆ. ಬಂಧಿತರಿಂದ ಬೆಲೆ ಬಾಳುವ ಬಂಗಾರ ಆಭರಣಗಳು ಹಾಗೂ ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಸುಮಾರು 20.40 ಲಕ್ಷ ಮೌಲ್ಯದ 407.88 ಗ್ರಾಂ. ಬಂಗಾರ, ಸುಮಾರು 7 ಕೆಜಿ ತೂಕದ 5 ಲಕ್ಷ ರು. ಮೌಲ್ಯದ ಒಂದು ದೇವರ ಮೂರ್ತಿ, 50 ಸಾವಿರ ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ. ಮನೆಗಳ್ಳತನಕ್ಕೆ ಬಳಸುತ್ತಿದ್ದ ಕೆಲವು ಆಯುಧಗಳು, ಪಾನಾ, ಪಕ್ಕಡ, ಸ್ಕೂ ಡ್ರೈವರ್‌ಗಳು, ಜಿಂಕೆಯ ಎರಡು ಕೋಡುಗಳು ಸಹ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಬಂಧನಕ್ಕೆ ಪೋ›ಬೆಷನರಿ ಡಿಎಸ್ಪಿ ವೀರಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಕಲಬುರಗಿ ಗ್ರಾಮೀಣ ವೃತ್ತ ಪಿಎಸ್‌ಐ ಶ್ರೀಮಂತ ಇಲ್ಲಾಳ, ಡಿಸಿಆರ್‌ಬಿ ಪಿಎಸ್‌ಐ ಪಿ.ಎಸ್‌.ವನಂಜಿಕರ, ಸಿಎನ್‌ಎಫ್‌ ಠಾಣಾ ವ್ಯಾಪ್ತಿಯ ಪಿಎಸ್‌ಐ ಚೇತನ, ಚಿತ್ತಾಪೂರ ಠಾಣೆಯ ಸಿಹೆಚ್ಸಿ ನಾಗೇಂದ್ರ, ಮಾಡಬೂಳ ಠಾಣೆಯ ಸಿಹೆಚ್ಸಿ ಜಗನ್ನಾಥ, ಮಳಖೇಡ ಠಾಣೆಯ ಸಿಹೆಚ್ಸಿ ಶಿವರಾಜ ಅಲ್ಲದೆ ವಿವಿಧ ಠಾಣೆಗಳ ಸಿಬ್ಬಂದಿ ಬಲರಾಮ, ಓಂಕಾರ ರೆಡ್ಡಿ, ಅಂಬ್ರೇಶ ಬಿರಾದಾರ, ಬಸವರಾಜ ಅಲ್ಲದೇ ಗ್ರಾಮೀಣ ವೃತ್ತದ ಮಹಿಳಾ ಪೋಲಿಸ್‌ ಸಿಬ್ಬಂದಿ ಭಾಗಿಯಾಗಿದ್ದರು.

Wife Swapping Racket : ಕಾಂಚಾಣಕ್ಕಾಗಿ ಪರ ಪುರುಷನೊಂದಿಗೆ ಪತ್ನಿಯನ್ನೇ ಪಲ್ಲಂಗಕ್ಕೇರಿಸುತ್ತಿದ್ದ, ಆಕೆಯದ್ದೂ ಸಾಥ್

ಕೊಡಗು ದೇವಾಲಯ ಕಳ್ಳತನ: ದೇವಾಲಯದ ಹುಂಡಿಯಿಂದ ಹಾಡಹಗಲೇ ಕಳವು ಮಾಡಿರುವ ಘಟನೆ ದೊಡ್ಡಮಳ್ತೆ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ದೇವಾಲಯದ ಹೊರಗಡೆ ಹುಂಡಿಯನ್ನು ಭದ್ರವಾಗಿ ಇಡಲಾಗಿತ್ತು. ಇಬ್ಬರು ಕಳ್ಳರು ಕಳೆದ ಸೋಮವಾರ ಮಧ್ಯಾಹ್ನ ಆಗಮಿಸಿ ಹುಂಡಿ ಡಬ್ಬವನ್ನು ತೆಗೆದುಕೊಂಡು, ಅಪಾಚೆ ಬೈಕ್‌ನಲ್ಲಿ ಗ್ರಾಮದ ಮುಖ್ಯ ರಸ್ತೆಯಲ್ಲೇ ಅಬ್ಬೂರುಕಟ್ಟೆಕಡೆಗೆ ತೆರಳಿದ್ದಾರೆ. ಆರ್‌ಸಿಸಿ ಮೇಲೆ ಕಾಫಿ ಕೆಲಸ ಮಾಡುತ್ತಿದ್ದ ಸ್ವರ್ಣಗೌರಿ ದೇವಾಲಯ ಸಮಿತಿ ಅಧ್ಯಕ್ಷ ವೀರೇಶ್‌ ನೋಡಿದ್ದಾರೆ. ಆದರೆ ಅನುಮಾನ ಬಂದಿರಲಿಲ್ಲ. ಸಂಜೆ ಅರ್ಚಕರು ದೇವಾಲಯಕ್ಕೆ ಹೋದಾಗ ಕಳ್ಳತನ ಬೆಳೆಕಿಗೆ ಬಂದಿದೆ.

ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿ.ಸಿ.ಕ್ಯಾಮೆರಾ ದೃಶ್ಯಾವಳಿಯನ್ನು ಪರಿಶೀಲಿಸಿ, ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ. ಹಣ ತೆಗೆದುಕೊಂಡು ಹುಂಡಿಯನ್ನು ಅಬ್ಬೂರುಕಟ್ಟೆಯ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ ಎನ್ನಲಾಗಿದ್ದು, ಪೊಲೀಸರು ಖಾಲಿ ಹುಂಡಿಯನ್ನು ವಶಕ್ಕೆ ಪಡೆದಿದ್ದಾರೆ.

ಕಳೆದ ಶನಿವಾರ ಸೋಮೇಶ್ವರ ದೇವಾಲಯದ ಹೆಂಚು ತೆಗೆದು ಒಳಗಿದ್ದ ಹುಂಡಿಯನ್ನು ಒಡೆದು ಹಣವನ್ನು ಕಳ್ಳತನ ಮಾಡಲಾಗಿತ್ತು. ಮಧ್ಯವಯಸ್ಕ ಕಳ್ಳತನ ಮಾಡುತ್ತಿರುವುದು ಸಿಸಿ ಕ್ಯಾಮೆರಾದ ದೃಶ್ಯಾವಳಿಯಲ್ಲಿ ಕಂಡು ಬಂದಿದೆ.

click me!