Wife Swapping Racket : ಕಾಂಚಾಣಕ್ಕಾಗಿ ಪರ ಪುರುಷನೊಂದಿಗೆ ಪತ್ನಿಯನ್ನೇ ಪಲ್ಲಂಗಕ್ಕೇರಿಸುತ್ತಿದ್ದ, ಆಕೆಯದ್ದೂ ಸಾಥ್!

Published : Feb 05, 2022, 03:43 AM IST
Wife Swapping Racket : ಕಾಂಚಾಣಕ್ಕಾಗಿ ಪರ ಪುರುಷನೊಂದಿಗೆ ಪತ್ನಿಯನ್ನೇ ಪಲ್ಲಂಗಕ್ಕೇರಿಸುತ್ತಿದ್ದ, ಆಕೆಯದ್ದೂ ಸಾಥ್!

ಸಾರಾಂಶ

* ಪತ್ನಿಯ ಅಶ್ಲೀಲ ವಿಡಿಯೋ ಮಾಡಿ ಆಹ್ವಾನ! * ಪ್ರೀತಿಸಿ ವಿವಾಹ ಆಗಿದ್ದ ದಂಪತಿ * ತಮ್ಮದೇ ಅಶ್ಲೀಲ ವಿಡಿಯೋ ಮಾಡಿಕೊಂಡು ಖುಷಿ ಪಡುತ್ತಿದ್ದ ಗಂಡ ಹೆಂಡತಿ * ಹಣ, ಸುಖದ ಆಸೆ ತೋರಿಸಿ ಪತ್ನಿಯನ್ನು ಒಪ್ಪಿಸಿ ಗ್ರಾಹಕರಿಗೆ ಆಹ್ವಾನ

ಬೆಂಗಳೂರು (ಫೆ. 05)  ಟ್ವಿಟರ್‌ನಲ್ಲಿ(Social Media) ಪತ್ನಿಯ (Wife) ಅಶ್ಲೀಲ  ವಿಡಿಯೋ ಅಪ್‌ಲೋಡ್‌ ಮಾಡಿ ಗಿರಾಕಿಗಳಿಗೆ ಆಹ್ವಾನ ನೀಡಿ ಮನೆಗೆ ಕರೆಸಿಕೊಂಡು ತನ್ನ ಪತ್ನಿಯೊಂದಿಗೆ ಲೈಂಗಿಕ ಚಟುವಟಿಕೆಗೆ ಬಿಟ್ಟು ಬಳಿಕ ಗಿರಾಕಿ ಕೊಟ್ಟಷ್ಟುಹಣ ಪಡೆಯುತ್ತಿದ್ದ ವಿಕೃತ ಮನಸ್ಸಿನ ವ್ಯಕ್ತಿಯೊಬ್ಬನ್ನು ಆಗ್ನೇಯ ವಿಭಾಗದ ಸಿಇಎನ್‌ ಠಾಣೆ ಪೊಲೀಸರು (Bengaluru Police)ಬಂಧಿಸಿದ್ದಾರೆ.

ಇದು ವೈಫ್‌ ಸ್ವಾಪಿಂಗ್‌ ದಂಧೆಯೇ ಅಥವಾ ಹೈಟೆಕ್‌ ವೇಶ್ಯಾವಾಟಿಕೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಂಡ್ಯ (Mandya)ಮೂಲದ ಸೇಲ್ಸ್‌ಮ್ಯಾನ್‌ ಬಂಧಿತ. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ 14 ದಿನ ಕಸ್ಟಡಿಗೆ ಪಡೆದಿದ್ದಾರೆ.

ಪ್ರೇಮ ವಿವಾಹ: ಮಂಡ್ಯ ಮೂಲದ ಆರೋಪಿ ಮತ್ತು ರಾಮನಗರ ಜಿಲ್ಲೆ ಮಾಗಡಿಯ ಯುವತಿ ನಗರದ ಎಲೆಕ್ಟ್ರಾನಿಕ್‌ ಶಾಪ್‌ನಲ್ಲಿ ಸೇಲ್ಸ್‌ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದರು. ಪರಸ್ಪರ ಪ್ರೀತಿಸಿ ಕುಟುಂಬಗಳ ವಿರೋಧದ ನಡುವೆ 2019ರಲ್ಲಿ ವಿವಾಹ ಆಗಿದ್ದರು. ದಂಪತಿಗೆ ಒಂದೂವರೆ ವಷದ ಮಗುವಿದ್ದು, ಸಂಬಂಧಿಕರ ಮನೆಯಲ್ಲಿ ಬಿಡಲಾಗಿದೆ. ದಂಪತಿ ಕಳೆದ ಒಂದು ತಿಂಗಳಿಂದ ಪರಪ್ಪನ ಅಗ್ರಹಾರ ಸಮೀಪದ ಸಿಂಗಸಂದ್ರದಲ್ಲಿ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಶ್ಲೀಲ ವಿಡಿಯೋ ನೋಡುವ ಚಟ!: ವಿಕೃತ ಮನಸಿನ ಆರೋಪಿ ಅಶ್ಲೀಲ ವಿಡಿಯೋ ನೋಡುವ ಚಟ ಬೆಳೆಸಿಕೊಂಡಿದ್ದ. ದಿನ ಕಳೆದಂತೆ ಪತ್ನಿಗೂ ಚಟ ಹತ್ತಿಸಿದ್ದ. ಬಳಿಕ ಮುಖ ಕಾಣದಂತೆ ಮಾಸ್ಕ್‌ ಧರಿಸಿ ತಮ್ಮದೇ ಹಾಸ್ಯ ಅಶ್ಲೀಲ ವಿಡಿಯೋ ಸೆರೆ ಹಿಡಿದು ಅಪ್‌ಲೋಡ್‌ ಮಾಡಿದರೆ ಸುಲಭವಾಗಿ ಹಣ ಸಂಪಾದಿಸಬಹುದು ಎಂದು ಪತ್ನಿಯನ್ನು ಪುಸಲಾಯಿಸಿದ್ದ. ಇದಕ್ಕೆ ಪತ್ನಿ ಒಪ್ಪಿದ್ದಳು.

ಅದರಂತೆ ಇಬ್ಬರು ತಮ್ಮದೇ ಲೈಂಗಿಕ ಚಟುವಟಿಕೆಗಳ ವಿಡಿಯೋ ಮಾಡಿ ಅದನ್ನು ನೋಡಿಕೊಂಡು ಖುಷಿ ಪಡುತ್ತಿದ್ದರು. ಬಳಿಕ ಆರೋಪಿಯು ಈ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿ ವೇಶ್ಯಾವಾಟಿಕೆಗೆ ಆಹ್ವಾನ ನೀಡಿದರೆ, ಕೈತುಂಬ ಹಣ ಸಿಗಲಿದೆ. ಜತೆಗೆ ನಿನಗೂ ಸಂತೋಷ ಸಿಗಲಿದೆ ಎಂದು ಪತ್ನಿಗೆ ಹೇಳಿ ಒಪ್ಪಿಸಿದ್ದ ವಿಚಾರಣೆ ವೇಳೆ ತಿಳಿದು ಬಂದಿದೆ.

ಟ್ವಿಟರ್‌ನಲ್ಲಿ ಗಿರಾಕಿಗಳಿಗೆ ಆಹ್ವಾನ:  ಆರೋಪಿಯು ಆರಂಭದಲ್ಲಿ ಟೆಲಿಗ್ರಾಮ್‌ ಆ್ಯಪ್‌ನಲ್ಲಿ ಗಿರಾಕಿಗಳಿಗೆ ಆಹ್ವಾನ ನೀಡುತ್ತಿದ್ದ. ಬಳಿಕ ಆರೋಪಿಯ ಸ್ನೇಹಿತನೊಬ್ಬ ಟೆಲಿಗ್ರಾಮ್‌ ಆ್ಯಪ್‌ನಲ್ಲಿ ಹೆಚ್ಚಿನ ಜನರನ್ನು ತಲುಪಲು ಸಾಧ್ಯವಿಲ್ಲ. ಟ್ವಿಟರ್‌ನಲ್ಲಿ ಆಹ್ವಾನ ನೀಡುವಂತೆ ಸಲಹೆ ನೀಡಿದ್ದ. ಅದರಂತೆ ಆರೋಪಿಯು ಜಾಹ್ನವಿ ಹೆಸರಿನಲ್ಲಿ ಟ್ವಿಟರ್‌ನಲ್ಲಿ ಖಾತೆ ತೆರೆದು ನಾವು ವಿವಾಹಿತ ದಂಪತಿ. ತ್ರಿಸಂ ಮಾಡಲು ನಾವು ಆಸಕ್ತರನ್ನು ಎದುರು ನೋಡುತ್ತಿದ್ದೇವೆ ಎಂದು ಮುಕ್ತ ಆಹ್ವಾನ ನೀಡಿದ್ದ. ಇದನ್ನು ಗಮನಿಸಿ ಸಂಪರ್ಕ ಮಾಡುವ ವ್ಯಕ್ತಿಗಳನ್ನು ಮನೆಗೆ ಕರೆಸಿಕೊಂಡು ಪತ್ನಿಯೊಂದಿಗೆ ಲೈಂಗಿಕ ಚಟುವಟಿಕೆಗೆ ಬಿಡುತ್ತಿದ್ದ. ಗಿರಾಕಿಗಳು ಕೊಟ್ಟಷ್ಟುಹಣ ಪಡೆಯುತ್ತಿದ್ದ ಎಂದು ವಿಚಾರಣೆಯಿಂದ ತಿಳಿದು ಬಂದಿದೆ.

Dating App Fraud : ಬೆಂಗಳೂರು,  ಸ್ನೇಹ ಸಂಪಾದಿಸಿ ಮನೆಗೆ ಬಂದು ಬಟ್ಟೆ ಬಿಚ್ಚಿಸುತ್ತಿದ್ದ!

ಪರ ಪುರುಷನೊಂದಿಗೆ ಪತ್ನಿಯ ಲೈಂಗಿಕ ಚಟುವಟಿಕೆ ಸೆರೆ!: ಪತ್ನಿ ಪರ ಪುರುಷರೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದಾಗ ಲೈವ್‌ ವಿಡಿಯೋ ಮಾಡುತ್ತಿದ್ದ. ಇದಕ್ಕೂ ಮುನ್ನ ಮುಖ ತೋರಿಸದೆ ಲೈವ್‌ ವಿಡಿಯೋ ಮಾಡುವುದಾಗಿ ಗಿರಾಕಿಯ ಅನುಮತಿ ಪಡೆಯುತ್ತಿದ್ದ. ಇದಕ್ಕೆ ಗಿರಾಕಿಗಳು ಒಪ್ಪಿದರೆ ಇಬ್ಬರ ಮುಖ ತೋರಿಸದೆ ಲೈಂಗಿಕ ಚಟುವಟಿಕೆಗಳ ದೃಶ್ಯಾವಳಿ ಲೈವ್‌ವಾಗಿ ಸೆರೆ ಹಿಡಿಯುತ್ತಿದ್ದ. ಒಪ್ಪದಿದ್ದರೆ ಸುಮ್ಮನಾಗುತ್ತಿದ್ದ. ಎಲ್ಲ ಮುಗಿದ ಬಳಿಕ ದಂಪತಿ ಆ ಲೈಂಗಿಕ ಚಟುವಟಿಕೆಯ ವಿಡಿಯೋಗಳನ್ನು ನೋಡಿಕೊಂಡು ಸಂತೋಷ ಅನುಭವಿಸುತ್ತಿದ್ದರು ಎನ್ನಲಾಗಿದೆ.

ಗಿರಾಕಿಗಳ ಸೋಗಿನಲ್ಲಿ  ಆರೋಪಿಯ ಬಂಧನ: ಆರೋಪಿಯು ಜಾಹ್ನವಿ ಹೆಸರಿನ ಟ್ವಿಟರ್‌ ಖಾತೆಯಲ್ಲಿ ಅಶ್ಲೀಲ ವಿಡಿಯೋ, ಫೋಟೊಗಳನ್ನು ಅಪ್‌ಲೋಡ್‌ ಮಾಡಿ ಗಿರಾಕಿಗಳಿಗೆ ಆಹ್ವಾನ ನೀಡಿದ್ದ. ಇದರ ಲಿಂಕನ್ನು ವ್ಯಕ್ತಿಯೊಬ್ಬರು ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಟ್ಯಾಗ್‌ ಮಾಡಿದ್ದರು. ಬಳಿಕ ಆ ಹಿರಿಯ ಅಧಿಕಾರಿ ಕೂಡಲೇ ಕ್ರಮಕ್ಕೆ ಸೂಚಿಸಿದ್ದರು ಎನ್ನಲಾಗಿದೆ. ಈ ವೇಳೆ ಆಗ್ನೇಯ ವಿಭಾಗದ ಸಿಇಎನ್‌ ಠಾಣೆ ಪೊಲೀಸರು, ಗಿರಾಕಿಗಳ ಸೋಗಿನಲ್ಲಿ ಟ್ವಿಟರ್‌ನಲ್ಲಿ ಆರೋಪಿಯನ್ನು ಸಂಪರ್ಕಿಸಿ, ಬಳಿಕ ಆತ ನೀಡಿದ ಮನೆ ವಿಳಾಸ ಆಧರಿಸಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಮೊಬೈಲ್‌ ಜಪ್ತಿ ಮಾಡಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ