ಕೆಲ ದಿನಗಳ ಹಿಂದಷ್ಟೇ ಅಂಗಡಿಯೊಂದರ ಮುಂದೆ ಮಲಗಿದ್ದವನ ಮೊಬೈಲ್ ಫೋನ್ ಅನ್ನು ಪೊಲೀಸ್ ಒಬ್ಬ ಎಗರಿಸಿದ್ದ ಇದು ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಯುಪಿ ಪೊಲೀಸರ ಮಾನ ಕಳೆದಿತ್ತು. ಈ ಘಟನೆ ನಡೆದು ವಾರವೂ ಕಳೆದಿಲ್ಲ. ಅಷ್ಟರಲ್ಲೇ ಮತ್ತೊಬ್ಬ ಉತ್ತರಪ್ರದೇಶ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬ ಕಳ್ಳತನಕ್ಕೆ ಇಳಿದಿದ್ದು, ಸಿಕ್ಕಿಬಿದ್ದಿದ್ದಾನೆ.
ಉತ್ತರ ಪ್ರದೇಶ: ಯೋಗಿ ರಾಜ್ಯ ಉತ್ತಪ್ರದೇಶದಲ್ಲಿ ಇತ್ತೀಚೆಗೆ ಊರು ಕಾಯಬೇಕಾದ ಪೊಲೀಸರೇ ಕಳ್ಳತನದಲ್ಲಿ ಹೆಚ್ಚು ಹೆಚ್ಚು ಭಾಗಿಯಾಗುತ್ತಿದ್ದಾರೆ. ಜೊತೆ ಜೊತೆಗೆ ಸಿಕ್ಕಿ ಬೀಳುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅಂಗಡಿಯೊಂದರ ಮುಂದೆ ಮಲಗಿದ್ದವನ ಮೊಬೈಲ್ ಫೋನ್ ಅನ್ನು ಪೊಲೀಸ್ ಒಬ್ಬ ಎಗರಿಸಿದ್ದ ಇದು ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಯುಪಿ ಪೊಲೀಸರ ಮಾನ ಕಳೆದಿತ್ತು. ಈ ಘಟನೆ ನಡೆದು ವಾರವೂ ಕಳೆದಿಲ್ಲ. ಅಷ್ಟರಲ್ಲೇ ಮತ್ತೊಬ್ಬ ಉತ್ತರಪ್ರದೇಶ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬ ಕಳ್ಳತನಕ್ಕೆ ಇಳಿದಿದ್ದು, ಸಿಕ್ಕಿಬಿದ್ದಿದ್ದಾನೆ.
ಉತ್ತರಪ್ರದೇಶದ ಪ್ರಯಾಗ್‌ರಾಜ್ ನ (Prayagraj) ಫುಲ್‌ಪುರ್(Phulpur) ಪ್ರದೇಶದಲ್ಲಿಈ ಘಟನೆ ನಡೆದಿದೆ. ವಿಡಿಯೋದಲ್ಲಿ ಕಾಣಿಸುವಂತೆ ಸುತ್ತಲೂ ಕಣ್ಣು ಹಾಯಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ಅತ್ತಿತ್ತ ತಿರುಗಾಡಿ ಬಳಿಕ ಪಾನ್ ಶಾಪ್ ಮುಂದೆ ತೂಗು ಹಾಕಿದ್ದ ಬಲ್ಬ್‌ನ್ನು ಮೆಲ್ಲನೆ ಜಾರಿಸಿ ಪ್ಯಾಂಟ್ ಜೇಬಿನೊಳಗೆ ತುಂಬಿಸಿಕೊಂಡು ಹೊರಟು ಹೋಗುತ್ತಾನೆ. ಈತನ ಈ ಕಿತಾಪತಿ ಅಲ್ಲೇ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ನಂತರ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗಿದೆ. ಹೀಗೆ ಕಳ್ಳತನ ಕೃತ್ಯದಲ್ಲಿ ಭಾಗಿಯಾದ ಪೊಲೀಸ್ ಇನ್ಸ್‌ಪೆಕ್ಟರ್‌ನ್ನು ರಾಜೇಶ್ ವರ್ಮಾ ಎಂದು ಗುರುತಿಸಲಾಗಿದೆ. ಈತ ಫುಲ್‌ಪುರ್ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಆಕ್ಟೋಬರ್ 6 ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Uttar Pradesh: Policeman steals LED bulb, caught on CCTV camera pic.twitter.com/WEtp86Lbt2
— Harish Deshmukh (@DeshmukhHarish9)ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(social Media) ವೈರಲ್ ಆದ ಬಳಿಕ ಸೀನಿಯರ್ ಸೂಪರಿಟೆಂಡ್ ಆಫ್ ಪೊಲೀಸ್ (SSP) ಈ ಬಲ್ಬ್ ಕದ್ದ ಪೊಲೀಸ್ ಇನ್ಸ್‌ಪೆಕ್ಟರ್‌ನನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ದಸರಾ ಮೇಳದ ರಾತ್ರಿ ಈ ಪೊಲೀಸ್ ರಾತ್ರಿ ಪಾಳಿಯಲ್ಲಿದ್ದ, ಇತ್ತ ಈ ಪಾನ್ ಶಾಪ್ ಮಾಲೀಕ ಬಲ್ಬ್ ಕಳುವಾದ ಹಿನ್ನೆಲೆಯಲ್ಲಿ ಸಿಸಿ ಟಿವಿ ದೃಶ್ಯಾವಳಿಯನ್ನು ತಪಾಸಣೆ ಮಾಡಲು ಹೋಗಿದ್ದು, ಈ ವೇಳೆ ಆತನಿಗೆ ಕಳ್ಳತನವೆಸಗಿದ್ದು, ಇನ್ಸ್‌ಪೆಕ್ಟರ್ ಎಂಬುದು ತಿಳಿದು ಬಂದಿದ್ದು, ಒಂದು ಕ್ಷಣ ಅಂಗಡಿ ಮಾಲೀಕನೇ ದಂಗಾಗಿದ್ದಾನೆ.
ಅಬ್ಬಬ್ಬಾ ಏನ್ ಕದ್ದ ನೋಡಿ: ಚರಂಡಿ ಮುಚ್ಚಳನು ಬಿಡಲ್ಲ
ಒಟ್ಟಿನಲ್ಲಿ ಉತ್ತರಪ್ರದೇಶ ಪೊಲೀಸರು ಹೀಗೆ ಸಣ್ಣ ಸಣ್ಣ ವಸ್ತುಗಳನ್ನು ಕಳ್ಳತನ ಮಾಡಿ ಮಾನ ಕಳೆದುಕೊಳ್ಳುತ್ತಿರುವುದನ್ನು ನೋಡಿದರೆ ಇವರಿಗೆ ಯುಪಿ ಸರ್ಕಾರ ಸಂಬಳ ಕೊಡುತ್ತಿಲ್ಲವೇ ಎಂದು ಯೋಚಿಸುವಂತೆ ಮಾಡ್ತಿವೆ ಇವರ ಈ ಕೃತ್ಯಗಳು.
ಇಲ್ಲಿ ಫೋನ್ ಎಗರಿಸಿದ್ದು ಕಳ್ಳ ಅಲ್ಲ ಪೊಲೀಸ್... ವಿಡಿಯೋ ವೈರಲ್