Bengaluru: ಎಣ್ಣೆಗಾಗಿ ಆನ್‌ಲೈನ್‌ನಲ್ಲಿ ಬುಕ್ ಮಾಡೋರಿಗೆ ಶಾಕ್: ನಕಲಿ ವೆಬ್‌ಸೈಟ್ ಮೂಲಕ ವಂಚನೆ

By Govindaraj SFirst Published Oct 15, 2022, 10:00 PM IST
Highlights

ವೀಕೆಂಡ್ ಮೂಡ್‌ನಲ್ಲಿ ಎಣ್ಣೆಗಾಗಿ ಆನ್‌ಲೈನ್‌ನಲ್ಲಿ ಬುಕ್ ಮಾಡೋರಿಗೆ ಶಾಕ್. ಹೌದು! ಪ್ರತಿಷ್ಠಿತ ಮದ್ಯದಂಗಡಿಗಳ ನಕಲಿ ವೆಬ್‌ಸೈಟ್ ಮೂಲಕ ವಂಚನೆ ಮಾಡಲಾಗುತ್ತಿದ್ದು, ಆನ್‌ಲೈನ್‌ನಲ್ಲಿ ಎಣ್ಣೆ ಆರ್ಡರ್ ಮಾಡಿದ 50ಕ್ಕೂ ಹೆಚ್ಚು ಜನ ಸಾವಿರಾರು ರೂ ಹಣ ಕಳೆದುಕೊಂಡಿದ್ದಾರೆ.

ಬೆಂಗಳೂರು (ಅ.15): ವೀಕೆಂಡ್ ಮೂಡ್‌ನಲ್ಲಿ ಎಣ್ಣೆಗಾಗಿ ಆನ್‌ಲೈನ್‌ನಲ್ಲಿ ಬುಕ್ ಮಾಡೋರಿಗೆ ಶಾಕ್. ಹೌದು! ಪ್ರತಿಷ್ಠಿತ ಮದ್ಯದಂಗಡಿಗಳ ನಕಲಿ ವೆಬ್‌ಸೈಟ್ ಮೂಲಕ ವಂಚನೆ ಮಾಡಲಾಗುತ್ತಿದ್ದು, ಆನ್‌ಲೈನ್‌ನಲ್ಲಿ ಎಣ್ಣೆ ಆರ್ಡರ್ ಮಾಡಿದ 50ಕ್ಕೂ ಹೆಚ್ಚು ಜನ ಸಾವಿರಾರು ರೂ ಹಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸೆಂಟ್ರಲ್ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಬ್ಬನ್ ಪಾರ್ಕ್ ಸ್ಟೇಷನ್ ಮುಂಭಾಗ ಇರುವ ಪ್ರತಿಷ್ಠಿತ ಮದ್ಯದಂಗಡಿಯ ನಕಲಿ ವೆಬ್‌ಸೈಟ್ ಸೃಷ್ಟಿಸಲಾಗಿದ್ದು, ನಕಲಿ ವೆಬ್‌ಸೈಟ್‌ನಲ್ಲಿ ಎಣ್ಣೆ ಖರೀದಿ ಮಾಡಲು ವ್ಯಕ್ತಿ ಮುಂದಾಗಿದ್ದ. ಈ ವೇಳೆ ವೆಬ್‌ಸೈಟ್‌ನ ನಂಬರ್ ಮುಖಾಂತರ ಸಂಪರ್ಕಿಸಿದ್ದು, ಬಳಿಕ ವಾಟ್ಸ್‌ಆ್ಯಪ್ ಚಾಟ್‌ನಲ್ಲಿ ಹಣ ವರ್ಗಾವಣೆವನ್ನು ವ್ಯಕ್ತಿ ಮಾಡಿದ್ದ. 

ಆದರೆ ಹಣ ಟ್ರಾನ್ಸಫರ್ ಮಾಡಿ ಎಷ್ಟೊತ್ತಾದರೂ ಎಣ್ಣೆ ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಎಣ್ಣೆ ಅಂಗಡಿಗೆ ಹೋಗಿ ದೂರುದಾರ ವಿಚಾರಿಸಿದ್ದ. ಈ‌ ವೇಳೆ ನಕಲಿ ವೆಬ್‌ಸೈಟ್ ಬಳಸಿ ವಂಚನೆ ಮಾಡಿರೋದು ಬೆಳಕಿಗೆ ಬಂದಿದ್ದು, ಸದ್ಯ ಘಟನೆ ಸಂಬಂಧ ಕೇಂದ್ರ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇತ್ತೀಚೆಗೆ ಇದೇ ರೀತಿ ಆನ್‌ಲೈನ್‌ನಲ್ಲಿ ಎಣ್ಣೆ ಬುಕ್ ಮಾಡಲು ಹೋಗಿ 15 ಸಾವಿರವನ್ನು ಮಹಿಳೆ ಕಳೆದುಕೊಂಡಿದ್ದರು. ಇನ್ನು ನಗರದಲ್ಲಿ ಒಂದರ ನಂತರ ಮತ್ತೊಂದು ಚೀಟಿಂಗ್ ಕೇಸ್‌ಗಳು ಬೆಳಕಿಗೆ ಬರುತ್ತಿದ್ದು, ಹೀಗಾಗಿ ಆನ್‌ಲೈನ್‌ನಲ್ಲಿ ಮಧ್ಯ ಬುಕ್ ಮಾಡುವಾಗ ಎಚ್ಚರಿಕೆಯಿಂದಿರಲು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.

Latest Videos

Bengaluru: ಹೈ ಎಂಡ್ ಕಾರುಗಳನ್ನ ಅಡವಿಟ್ಟು ಸಾಲ ತೆಗೆದುಕೊಳ್ಳುವವರೇ ಎಚ್ಚರ!

ಅಮೆಜಾನ್‌ ಹೆಸರಿನಲ್ಲಿ ವ್ಯಕ್ತಿಗೆ 11 ಲಕ್ಷ ಪಂಗನಾಮ: ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆಯೆಂದು ನಂಬಿದ ಕೊರಿಯರ್‌ ಕಂಪನಿ ಉದ್ಯೋಗಿಗೆ ಅಮೆಜಾನ್‌ ಕಂಪನಿ ಹೆಸರಲ್ಲಿ ಆನ್‌ಲೈನ್‌ ವಂಚಕರು ಒಂದಲ್ಲ ಎರಡಲ್ಲ ಬರೋಬ್ಬರಿ 11 ಲಕ್ಷ ರು, ಹಣವನ್ನು ಪಡೆದು ವಂಚಿಸಿರುವ ಘಟನೆ ನಡೆದಿದೆ. ಆನ್‌ಲೈನ್‌ ವಂಚಕರ ಜಾಲಕ್ಕೆ ಸಿಲುಕಿ ಮೋಸದ ವ್ಯಕ್ತಿಯನ್ನು ಚಿಕ್ಕಬಳ್ಳಾಪುರ ತಾಲೂಕಿನ ಹೊಸಹುಡ್ಯ ಗ್ರಾಮದ ನಿವಾಸಿ ದೇವನಹಳ್ಳಿಯಲ್ಲಿ ಡಿಲವರಿ ಕಾಂ ಕೊರಿಯರ್‌ ಕಂಪನಿಯಲ್ಲಿ ಕೆಲಸ ಮಾಡುವ ಮಹೇಶ್‌ (23) ಎಂದು ಗುರುತಿಸಲಾಗಿದೆ.

ಮಹೇಶ್‌ ಮೊಬೈಲ್‌ನಲ್ಲಿ ಸರ್ಚ್‌ ಮಾಡುವಾಗ ಟೆಲಿಗ್ರಾಂ ಸಾಮಾಜಿಕ ಜಾಲತಾಣದಲ್ಲಿ ವರ್ಕ ಫ್ರಂ ಹೋಂ ಅಂತ ಅಮೇಜಾನ್‌ ಇ ಕಾಮರ್ಸನಲ್ಲಿ ಐಟಂ ಗಳ ಮೇಲೆ ಹೂಡಿಕೆಯನ್ನು ಮಾಡಿದರೆ ನಿಮಗೆ ಉತ್ತಮ ಲಾಭ/ರಿಟರ್ನಸ್‌ ಬರುತ್ತದೆಂಬ ಸಂದೇಶ ನಂಬಿದ ಮಹೇಶ್‌ ವ್ಯಾಟ್ಸಾಪ್‌ ನಂಬರ್‌ 9860296816 ಮೂಲಕ ಕಾಂಟ್ಯಾಕ್ಟ್‌ ಮಾಡಿದಾಗ ಅವರು ರಿಜಿಸ್ಪ್ರೇಷನ್‌ ಪೀ ಅಂತ 500 ರು, ಕಟ್ಟಿಸಿಕೊಂಡಿದ್ದಾರೆ.

ಮನೆ ತೊರೆಯಲೊಪ್ಪದ ಅತ್ತೆಯ ತಲೆ ಗೋಡೆಗೆ ಡಿಕ್ಕಿ ಹೊಡೆಸಿ ಕೊಂದ ಸೊಸೆ..!

ಒಮ್ಮೆ ಸಣ್ಣ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದ್ದು ಅದಕ್ಕೆ ಹಣ ಕೂಡ ಬಂದಿದೆ. ಇದೇ ರೀತಿ ಮಹೇಶ್‌ 3,86,893 ಹೂಡಿಕೆ ಮಾಡಿದಾಗ ಆತನ ಖಾತೆಗೆ 4,31,543 ಬಂದ ರೀತಿ ತೋರಿಸಿದೆ. ಆಗ ಡ್ರಾ ಮಾಡುವುದು ಬೇಡ ಅಂತ ಪುನಃ ಪುನಃ ಹೂಡಿಕೆ ಮಾಡಿದ್ದಾರೆ. ಆದರೆ ಆತನ ಬ್ಯಾಂಕ್‌ ಖಾತೆಗೆ ಕಮಿಷನ್‌ ಹಣ ಬಂದಹಾಗೆ ತೋರಿಸಿ ಮಹೇಶ್‌ನಿಂದ ಬರೋಬ್ಬರಿ 11,71,313 ರು, ಪಡೆದು ಅಮೆಜಾನ್‌ ಕಂಪನಿ ಹೆಸರಲ್ಲಿ ಆನ್‌ಲೈನ್‌ ವಂಚಕರು ಮೋಸ ಮಾಡಿದ್ದಾರೆ. ಈ ಕುರಿತು ಜಿಲ್ಲಾ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

click me!