
ಮಂಡ್ಯ(ಫೆ.23): ಅಪರಿಚಿತ ವ್ಯಕ್ತಿಯ ಭೀಕರ ಹತ್ಯೆಗೈದ ಹಂತಕರುಯ ಮೃತದೇಹವನ್ನ ಕತ್ತರಿಸಿ ನಾಲೆಗೆ ಎಸೆದ ಘಟನೆ ಮಂಡ್ಯ ತಾಲೂಕಿನ ಹೊಡಾಘಟ್ಟ, ಶಿವಾರ, ಡಣಾಯಕನಪುರ ಹಾಗೂ ಮದ್ದೂರು ತಾಲೂಕಿನ ಗೂಳೂರಿನಲ್ಲಿ ನಿನ್ನೆ(ಬುಧವಾರ) ನಡೆದಿದೆ.
ತುಂಡು ತುಂಡಾದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಮೃತದೇಹದ ತುಂಡುಗಳು ನಾಲೆಯಲ್ಲಿ ಪತ್ತೆಯಾಗಿವೆ. ದುಷ್ಕರ್ಮಿಗಳು ಕೊಲೆಗೈದು ನಾಲೆಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹದ ಭಾಗಗಳು 30 ರಿಂದ 40 ವರ್ಷದ ಆಸುಪಾಸಿನ ವ್ಯಕ್ತಿಯದ್ದು ಎನ್ನಲಾಗಿದೆ.
ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದ ಪತ್ನಿಯ ಶೀಲದ ಮೇಲೆ ಶಂಕೆ!: ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಪತಿ
ಹೊಡಾಘಟ್ಟ ಬಳಿ ತೊಡೆ ಮತ್ತು ಸೊಂಟದ ಭಾಗ, ಶಿವಾರದ ಸಮೀಪ ಒಂದು ಕಾಲು ಪತ್ತೆಯಾಗಿವೆ. ಡಣಾಯಕನಪುರ ಬಳಿ ಎರಡು ಕೈ, ಒಂದು ಕಾಲು, ಗೂಳೂರು ಬಳಿ ತಲೆಯ ಭಾಗ ಪತ್ತೆಯಾಗಿದೆ. ಎಡಗೈ ಮೇಲೆ ಕಾವ್ಯ, ರಘು, ಬಲಗೈಯಲ್ಲಿ ವನಜಾ ಎಂದು ಹಚ್ಚೆ ಹಾಕಲಾಗಿದೆ.
ಮೃತದೇಹವನ್ನ ಸಂಗ್ರಹಿಸಿದ ಪೊಲೀಸರು ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನಾ ಸ್ಥಳಕ್ಕೆ ಮಂಡ್ಯ ಎಸ್ಪಿ ಎನ್.ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣದ ತನಿಖೆಗೆ ಪ್ರತ್ಯಕ ತಂಡ ರಚನೆಗೆ ಎಸ್ಪಿ ಚಿಂತನೆ ನಡೆಸಿದ್ದಾರೆ. ಮೊದಲು ಮೃತದೇಹದ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಎಲ್ಲಾ ಪೊಲೀಸ್ ಠಾಣೆಗಳಿಂದ ನಾಪತ್ತೆ ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದಾರೆ. ಮೃತ ವ್ಯಕ್ತಿಯ ಗುರುತು ಪತ್ತೆ ಮಾಡಿ ಕೊಲೆಗಾರರಿಗೆ ಬಲೆ ಬೀಸುವ ನಿಟ್ಟಿನಲ್ಲಿ ತನಿಖೆ ಆರಂಭಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ