ಕೊಲೆಗೆ ಕಾರಣ ಗಾಂಜಾ ಸೇವನೆಯೇ ಇರಬೇಕು ಎಂದು ಮೃತನ ಸಂಬಂಧಿಕರಿಂದ ಗಂಭೀರ ಆರೋಪ, ಪೂರ್ಣ ತನಿಖೆ ಬಳಿಕ ಸತ್ಯ ಹೊರಬೀಳಲಿದೆ: ಎಸ್ಪಿ ಪರಶುರಾಮ
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ(ಫೆ.22): ಶಿವರಾತ್ರಿ ದಿನದಂದೇ ಮರ್ಡರ್ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಗಳು ಕೊನೆಗೂ ಪೋಲೀಸರ ಅತಿಥಿಯಾಗಿದ್ದಾರೆ. ಯಾವುದೇ ಹಳೇ ದ್ವೇಷವಿಲ್ಲದೇ, ಕುಡಿದ ಅಮಲಿನಲ್ಲಿ ಶುರುವಾಗಿರುವ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಮೃತರ ಸಂಬಂಧಿಕರು ಗಾಂಜಾ ಗಮ್ಮತ್ತು ಏರಿಯಾದಲ್ಲಿ ಹೆಚ್ಚಾಗಿದ್ರಿಂದ ಈ ಕೊಲೆ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ರು. ಇದೆಲ್ಲದರ ಕುರಿತಾದ ವರದಿ ಇಲ್ಲಿದೆ.
undefined
ಇದೇ ತಿಂಗಳು ದಿನಾಂಕ 18 ರಂದು ನಡೆದ ಶಿವರಾತ್ರಿ ಹಬ್ಬದ ದಿನದಂದೇ ಚಿತ್ರದುರ್ಗ ನಗರದ ಕಾಮನಬಾವಿ ಬಡಾವಣೆಯಲ್ಲಿ ಯುವಕ ಮೇಲೆ ಚಾಕು ಇರಿತ ಪ್ರಕರಣ ನಡೆದಿತ್ತು. 23 ವರ್ಷದ ಯುವಕ ಮಾರುತಿಯನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ರು ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿದ್ದನು. ಇದರ ಹಿಂದಿನ ಅಸಲಿ ಕಾರಣ ಏನು ಎಂದು ಪೊಲೀಸರು ಹುಡಕಲು ಹೊರಟಾಗ ಸಿಕ್ಕ ಮಾಹಿತಿ, ಯುವಕರ ಗುಂಪುಗಳ ನಡುವೆ ನಡೆದಿದ್ದ ಗಲಾಟೆ ಎಂಬುದು ತಿಳಿದು ಬಂದಿತು.
Uttara Kannada: ನೆರೆಮನೆಯಾತನ ಕಾಟದಿಂದ ಗೃಹಬಂಧನದಲ್ಲಿ ಮೂರು ಕುಟುಂಬ!
ಆ ದಿನ ರಾತ್ರಿ ಶಿವರಾತ್ರಿ ಜಾಗರಣೆ ಮಾಡುವ ಸಮಯದಲ್ಲಿ ಅದೇ ಏರಿಯಾದ ಹರೀಶ್ ಎಂಬುವವರ ಮನೆಯಲ್ಲಿ ಆರೋಪಿಗಳು ಗಲಾಟೆ ಮಾಡಿ ಮನೆಯ ಮುಂದಿನ ಪಾಟ್ ಗಳನ್ನು ಹೊಡೆದು ಹಾಕಿ ಹೋಗಿರ್ತಾರೆ. ವಿಷಯ ತಿಳಿದ ಕೂಡಲೇ ಹರೀಶ್ ಸಂಬಂಧಿ ಮೃತ ಮಾರುತಿ ತಮ್ಮ ಸಹೋದರನ ಜೊತೆ ಹೋಗಿ ಆರೋಪಿ ಜೀವನ್ ಗೆ ಹೊಡೆಯುತ್ತಾನೆ. ಆ ವೇಳೆ ಆರೋಪಿ ಕೂಗಿದಾಗ ಹತ್ತಿರದಲ್ಲಿಯೇ ಇದ್ದ ಕಾಮನಬಾವಿ ಬಡಾವಣೆಯ ಮತ್ತೊಬ್ಬ ಆರೋಪಿ ವರದರಾಜ್ ಅವರ ಗುಂಪಿನೊಂದಿಗೆ ಆಗಮಿಸಿ ರೇಡಿಯಮ್ ಕಟ್ ಮಾಡುವ ಚಾಕುವಿನಿಂದ ಬಲವಾಗಿ ತಲೆಗೆ ಹಾಗೂ ಹೊಟ್ಟೆಯ ಭಾಗಕ್ಕೆ ಚುಚ್ಚಿ ಕೊಲೆ ಮಾಡಿರುವ ಘಟನೆ ನಡೆದಿರುತ್ತೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಆರೋಪಿಗಳಾದ ಜೀವನ್, ವರದರಾಜ್ ನನ್ನು ಬಂಧಿಸಲಾಗಿದೆ. ಇನ್ನೂ ಮೂವರು ಆರೋಪಿಗಳ ಪತ್ತೆಗಾಗಿ ಪೊಲೀಸರ ಶೋಧ ಕಾರ್ಯ ನಡೆಯುತ್ತಿದೆ ಅಂತ ಚಿತ್ರದುರ್ಗ ಎಸ್ಪಿ ಕೆ.ಪರಶುರಾಮ ತಿಳಿಸಿದ್ದಾರೆ.
ಇನ್ನೂ ಕೊಲೆಯಾದ ಆ ದಿನವೇ ಮೃತ ಯುವಕನ ಸಂಬಂಧಿಕರು ಈ ಕೊಲೆಗೆ ಮುಖ್ಯ ಕಾರಣವೇ ಆ ಏರಿಯಾದಲ್ಲಿ ಯುವಕರು ಹೆಚ್ಚಾಗಿ ಗಾಂಜಾ ಸೇವನೆ ಮಾಡುವುದು ಎಂದು ಗಂಭೀರ ಆರೋಪ ಮಾಡಿದ್ದರು. ಈ ಕುರಿತು ಎಸ್ಪಿ ಅವರಿಗೆ ವಿಚಾರಿಸಿದ್ರೆ, ಈ ಕೊಲೆಯು ಕುಡಿದ ಅಮಲಿನಲ್ಲಿ ಆಗಿರಬಹುದು ಎಂದು ಹೇಳಲಾಗ್ತಿದೆ.ಆ ಬಗ್ಗೆ ಪರೀಕ್ಷೆಗಳನ್ನು ಮಾಡ್ತಿದ್ದೀವಿ. ಜೊತೆಗೆ ಗಾಂಜಾ ಸೇವನೆಯ ಮಾಡಿದ್ದರ ಬಗ್ಗೆಯೂ ಮಾಹಿತಿ ಬಂದಿದೆ ಗಾಂಜಾ ಸೇವನೆಗೆ ಸಂಬಂಧಿಸಿದಂತೆ ಸ್ಯಾಂಪಲ್ ಕೂಡ ಕಲೆಕ್ಟ್ ಮಾಡಲಾಗಿದೆ ಕೂಲಂಕಷವಾಗಿ ತನಿಖೆ ನಡೆಸಲಾಗುವುದು. ಹಾಗಾಗ ಹಬ್ಬ ಹರಿದಿನಗಳಲ್ಲಿ ಬೈಕ್ ವೀಲ್ಹಿಂಗ್ ಮಾಡುತ್ತಾ ಗಲಾಟೆ ಮಾಡಿಕೊಂಡಿರುವ ಹಿನ್ನೆಲೆ ಇದೆ. ಅಲ್ಲದೇ ಕಾಮಬಾವಿ ಬಡಾವಣೆಯಲ್ಲಿ ಗಾಂಜಾ ಸೇವನೆ ಮಾಡಿ ಗಲಾಟೆ ಮಾಡ್ತಾರೆ ಎನ್ನುವ ಮಾಹಿತಿ ಕೂಡ ಸಿಕ್ಕಿದೆ ಈ ಬಗ್ಗೆ ಸೂಕ್ತ ತನಿಖೆ ಶಿಸ್ತು ಕ್ರಮ ಜರುಗಿಸಲಾಗುವುದು. ಜೊತೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಅವರನ್ನು ಶೀಘ್ರವೇ ದಸ್ತಗಿರಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಪ್ಪ ಅಮ್ಮ ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕಾಗಿದ್ದ ಯುವಕರು ಇಂದು ಗಾಂಜಾ, ಕುಡಿತದ ಚಟಕ್ಕೆ ದಾಸರಾಗಿ ಇಂತಹ ದುಷ್ಕೃತ್ಯ ಮಾಡೋದ್ರಿಂದ ಜೀವನ ಹಾಳು ಮಾಡಿಕೊಳ್ತಿರೋದು ನಿಜಕ್ಕೂ ಬೇಸರದ ಸಂಗತಿ. ಇಂತಹ ಘಟನೆಗಳು ನಿಲ್ಲಬೇಕು ಎಂದ್ರೆ ಪೊಲೀಸ್ ಇಲಾಖೆ ಇನ್ನಾದ್ರು ಇಂತಹ ಏರಿಯಾಗಳ ಮೇಲೆ ನಿಗಾ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.