
ಚಿಂಚೋಳಿ(ಫೆ.22): ಪಟ್ಟಣದ ಬಸ ನಿಲ್ದಾಣದಲ್ಲಿ ರಾತ್ರಿ ನಿಲ್ಲಿಸಿದ ಸರ್ಕಾರಿ ಬಸ್ಸನ್ನು ಮಂಗಳವಾರ ಬೆಳಗಿನ ಜಾವ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ. ಪಟ್ಟಣದ ಮುಖ್ಯರಸ್ತೆಯಲ್ಲಿರುವ ಸರ್ಕಾರಿ ಬಸ್ ನಿಲ್ದಾಣದಲ್ಲಿ ಬೀದರ್ ವಿಭಾಗದ ಘಟಕಕ್ಕೆ ಸೇರಿದ ಬಸ್ ಸಂಖ್ಯೆ ಕೆಎ38, ಎಫ್971 ಬಸ್ ನಿಲ್ಲಾಣದಲ್ಲಿ ಚಾಲಕ ಮಹ್ಮದ ಅಯೂಬ ಮತ್ತು ನಿರ್ವಾಹಕ ಇರಪ್ಪ ಇವರು ಬಸ ನಿಲ್ದಾಣ ಪ್ಲಾಟ್ ಫಾಮ್‌ರ್ 3ರಲ್ಲಿ ನಿಲ್ಲಿಸಿ ಬಸ್ಸಿನ ಎಲ್ಲ ಕಿಟಕಿ ಮತ್ತು ಬಾಗಿಲು ಮುಚ್ಚಿಕೊಂಡು ವಿಶ್ರಾಂತಿ ಕೋಣೆಯಲ್ಲಿ ಮಲಗಿದ್ದರು. ಬೆ.5ಗಂಟೆಗೆ ಸುಮಾರಿಗೆ ಬಸ್ ನಿಲ್ದಾಣದಲ್ಲಿ ನೋಡಿದ್ದಾಗ ಫ್ಲಾಟ್ ಫಾರ್ಮ್ 3ರಲ್ಲಿ ನಿಲ್ಲಿಸಿದ್ದ ಬಸ್ ಇಲ್ಲದಿರುವುದನ್ನು ಕಂಡ ಚಾಲಕರು,ನಿರ್ವಾಹಕರು ಹುಡುಕಾಡಿದರು.
ಬಸ್ ಸಿಗದೇ ಇರುವುದರಿಂದ ಬಸ್ ವ್ಯವಸ್ಥಾಪಕರ ಗಮನಕ್ಕೆ ತಂದಿದ್ದಾರೆ. ಕೂಡಲೇ ಬಸ್ ವ್ಯವಸ್ಥಾಪಕ ಅಶೋಕ ಪಾಟೀಲ ಚಿಂಚೋಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪಿಎಸ್‌ಐ ಮಹೆಬೂಬ ಅಲಿ ಪ್ರಕರಣವನ್ನು ದಾಖಲಿಸಿಕೊಂಡು ಬಸ ಶೋಧ ಕಾರ್ಯ ಮುಂದುವರಿಸಿದ್ದಾರೆ.
Chikkamagaluru: ಮೊಬೈಲ್ ಕಿತ್ತುಕೊಳ್ಳಲು ಬಂದವನನ್ನ ಕಲ್ಲಿನಿಂದ ಜಜ್ಜಿ ಕೊಲೆ: ಆರೋಪಿ ಬಂಧನ
ಬಸ್ ನಿಲ್ದಾಣದಲ್ಲಿ ಸಿಸಿ ಟೀವಿ ಪರಿಶೀಲನೆ:
ಬಸ್ ನಿಲ್ದಾಣದಲ್ಲಿ ಅಳವಡಿಸಿದ ಸಿಸಿ ಟೀವಿ ಪರಿಶೀಲಿಸಿದಾಗ ನಸುಕಿನಲ್ಲಿ 3.37 ನಿಮಿಷಕ್ಕೆ ಕಳ್ಳರು ಬಸ್ ಕಳ್ಳತನ ಮಾಡಿಕೊಂಡು ಬಸ್ ಚಲಾಯಿಸಿಕೊಂಡು ಹೋಗಿರುವುದನ್ನು ಪತ್ತೆ ಹಚ್ಚಲಾಗಿದೆ. ಬಸ್ ವ್ಯವಸ್ಥಾಪಕ ಅಶೋಕ ಪಾಟೀಲ ತಿಳಿಸಿದ್ದಾರೆ.
ಕಳ್ಳರು ಮುಖಕ್ಕೆ ಬಟ್ಟೆಯನ್ನು ಸುತ್ತಿಕೊಂಡು ಬಸ್ ಚಲಾಯಿಸಿಕೊಂಡು ತೆಲಂಗಾಣ ರಾಜ್ಯದ ತಾಂಡೂರಿನತ್ತ ಹೋಗಿರುವ ಕುರಿತು ಪೋಲಿಸರು ಸಿಸಿ ಟೀವಿ ಪರಿಶೀಲಿಸಿ ಬಸ್ ಪತ್ತೆ ಹಚ್ಚುವುದಕ್ಕಾಗಿ ಚಿಂಚೋಳಿ ಮತ್ತು ಮಿರಿಯಾಣ ಠಾಣೆ ಪೊಲೀಸರು ಹಾಗೂ ಬಸ್ ಚಾಲಕರು ತಂಡ ರಚಿಸಿಕೊಂಡು ಹುಡುಕಾಟ ನಡೆಸಿದ್ದಾರೆ.
ತೆಲಂಗಾಣದ ರಾಜ್ಯದ ತಾಂಡೂರಿನ ಭೂ ಕೈಲಾಶ ದೇವಸ್ಥಾನ ಹತ್ತಿರ ಬಸ್ ಪತ್ತೆ:
ಪಟ್ಟಣದ ಬಸ ನಿಲ್ದಾಣದಲ್ಲಿ ಕಳ್ಳತನವಾಗಿದ್ದ ಬೀದರ್ ಘಟಕಕ್ಕೆ ಸೇರಿದ ಬಸ್ ತಾಂಡೂರಿನ ಭೂ ಕೈಲಾಶ ಹತ್ತಿರ ಪತ್ತೆಯಾಗಿದೆ. ಬಸ್ ತೆಗ್ಗಿನಲ್ಲಿ (ಚರಂಡಿ)ಯಲ್ಲಿ ಸಿಲುಕುಕೊಂಡು ಚಲಾಯಿಸಲು ಆಗದೇ ಇರುವುದರಿಂದ ಬಸ್ ಅಲ್ಲಿಯೇ ಬಿಟ್ಟು ಕಳ್ಳನು ಪರಾರಿಯಾಗಿದ್ದಾನೆ ಎಂದು ಪಿಎಸ್‌ಐ ಮಹೆಬೂಬ ಅಲಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಅಮರಪ್ಪ ಶಿವಬಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಳ್ಳನನ್ನು ಪತ್ತೆಹಚ್ಚುವುದಕ್ಕಾಗಿ ಸಿಸಿ ಟೀವಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಸಿಪಿಐ ಅಮರಪ್ಪ ಶಿವಬಲ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ