* ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ನಡೆದ ಘಟನೆ
* ತಂಗಿ ಕೊಲೆ ಮಾಡಿ ಪೊಲೀಸರಿಗೆ ಶರಣಾದ
* ತನ್ನ ಇಚ್ಛೆ ವಿರುದ್ಧ ಮದುವೆಯಾಗಿದ್ದಕ್ಕೆ ರೊಚ್ಚಿಗೆದ್ದು ಕೊಚ್ಚಿ ಕೊಂದ
ನವಲಗುಂದ(ಅ.27): ತನ್ನ ಇಚ್ಛೆಯ ವಿರುದ್ಧ ಮದುವೆಯಾದ(Marriage) ತಂಗಿಗೆ ಅಣ್ಣನೇ ಖಾರದ ಪುಡಿ ಎರಚಿ ತಲ್ವಾರ್‌ನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಪಟ್ಟಣದಲ್ಲಿ(Navalgund) ಮಂಗಳವಾರ ನಡೆದಿದೆ. ಬಳಿಕ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಶಶಿಕಲಾ ಪಾಠಕ (ಶರಣ್ಣಪ್ಪನವರ) (32) ಎಂಬ ಮಹಿಳೆಯೇ ಕೊಲೆಗೀಡಾದವಳು. ಈಕೆಯ ಸಹೋದರ ಮಾಂತೇಶ್ ಶರಣಪ್ಪನವರ ಉಫ್‌ರ್ ಮಸಾಲಜಿ ಎಂಬಾತನೇ ಕೊಲೆ(Murder) ಮಾಡಿದ ಆರೋಪಿ(Accused).
ಶಶಿಕಲಾಳನ್ನು ಹುಬ್ಬಳ್ಳಿ(Hubballi) ತಾಲೂಕಿನ ಅರಳಿಕಟ್ಟಿಗ್ರಾಮದ ಯುವಕನಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ಕಳೆದ ಕೆಲ ವರ್ಷಗಳ ಹಿಂದೆ ಶಶಿಕಲಾ ಗಂಡ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ನವಲಗುಂದಕ್ಕೆ ಬಂದು ನೆಲೆಸಿದ್ದಳು. ನವಲಗುಂದದ ಅಂಗನವಾಡಿ ಕೇಂದ್ರವೊಂದರಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದಳು. ರವಿ ಪಾಠಕ್ ಎಂಬಾತನೊಂದಿಗೆ ಪ್ರೇಮಿಸಿದ್ದಳು(Love). ರವಿ ಕೂಡ ಈಕೆಯನ್ನು ಪ್ರೀತಿಸುತ್ತಿದ್ದ. ಕಳೆದ 8 ದಿನಗಳ ಹಿಂದೆಯಷ್ಟೇ ಇವರಿಬ್ಬರು ಮದುವೆಯಾಗಿದ್ದರು. ಆದರೆ, ಈ ಮದುವೆಗೆ ಸಹೋದರ ಮಾಂತೇಶ ಆಕ್ಷೇಪಿಸಿದ್ದ. ತನಗೆ ಇಷ್ಟವಿಲ್ಲದ ವ್ಯಕ್ತಿಯೊಂದಿಗೆ ಮದುವೆಯಾಗಿದ್ದಾಳೆ ಎಂದು ರೊಚ್ಚಿಗೆದ್ದು, ಇಲ್ಲಿನ ರಾಮಲಿಂಗೇಶ್ವರ ನಗರದಲ್ಲಿರುವ ಆಕೆಯ ಮನೆಗೆ ತೆರಳಿದ್ದಾನೆ. ಶಶಿಕಲಾ ಒಬ್ಬಳೇ ಮನೆಯಲ್ಲಿದ್ದಳು. ಆಕೆಯ ಕಣ್ಣಿಗೆ ಖಾರದ ಪುಡಿ ಎರಚಿದ್ದಾನೆ. ಬಳಿಕ ತಲ್ವಾರನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಈ ವೇಳೆ ಶಶಿಕಲಾಳ ಪತಿ ರವಿ ಪಾಠಕ ಮನೆಯಲ್ಲಿರಲಿಲ್ಲ. ಆತ ತಾಯಿಯನ್ನು ಕರೆದುಕೊಂಡು ಆಸ್ಪತ್ರೆಗೆ(Hospital) ತೆರಳಿದ್ದ ಎನ್ನಲಾಗಿದೆ.
3 ತಿಂಗಳ ವಯಸ್ಸಿನ ತನ್ನ ಮೊಮ್ಮಗನ್ನೇ ಕೊಂದು ಪರಾರಿಯಾದ ಅಜ್ಜಿ!
ಬಳಿಕ ತಲ್ವಾರನೊಂದಿಗೆ ಪೊಲೀಸ್(Police) ಠಾಣೆಗೆ ತೆರಳಿದ ಮಾಂತೇಶ್ ತಾನು ಕೊಲೆ ಮಾಡಿರುವ ವಿಷಯ ತಿಳಿಸಿ ಪೊಲೀಸರಿಗೆ ಶರಣಾಗಿದ್ದಾನೆ. ಆರೋಪಿಯನ್ನು ನವಲಗುಂದ ಠಾಣೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ(Investigation) ಮುಂದುವರಿದಿದೆ.