ಸಿಟ್ಟಿಗೆದ್ದು ಸಹದ್ಯೋಗಿಗೆ ಮೆಸೇಜ್; 2 ವರ್ಷ ಜೈಲು, ಕಣ್ಣೀರಿನಲ್ಲಿ ಕೈತೊಳದೆ ಮಹಿಳೆ!

Published : Feb 05, 2021, 08:19 PM IST
ಸಿಟ್ಟಿಗೆದ್ದು ಸಹದ್ಯೋಗಿಗೆ ಮೆಸೇಜ್; 2 ವರ್ಷ ಜೈಲು, ಕಣ್ಣೀರಿನಲ್ಲಿ ಕೈತೊಳದೆ ಮಹಿಳೆ!

ಸಾರಾಂಶ

ಇದು ಡಿಜಿಟಲ್ ಯುಗ. ವೈಯುಕ್ತಿಕ ಮಾತ್ರವಲ್ಲ, ಕಚೇರಿ ಕೆಲಸಗಳು, ಮಹತ್ವದ ಸೂಚನೆ ಸೇರಿದಂತೆ ಎಲ್ಲವೂ ವ್ಯಾಟ್ಸ್‌ಆ್ಯಪ್ ಮೂಲಕ ನಡೆತ್ತಿರುವ ಜಮಾನ ಇದು. ಇನ್ನು ಗೆಳೆಯರು, ಸಹದ್ಯೋಗಿಗಳು ನಡುವಿನ ಚಾಟ್ ಕತೆ ಹೇಳುವುದೇ ಬೇಡ. ಹೀಗೆ ಸಣ್ಣ ವಾಗ್ವಾದಿಂದ ಸಿಟ್ಟಿಗೆದ್ದ ಮಹಿಳೆ ಸಹದ್ಯೋಗಿಗೆ ಮೆಸೇಜ್ ಕಳುಹಿಸಿ ಇದೀಗ 2 ವರ್ಷ ಜೈಲು ಶಿಕ್ಷೆ ಅನುಭವಿಸುವಂತಾಗಿದೆ. ಈ ಸ್ಟೋರಿ ವಿವರ ಇಲ್ಲಿದೆ.

ದುಬೈ(ಫೆ.05): ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಅನ್ನೋ ಗಾದೆ ಮಾತಿಗೆ ಮೆಸೇಜ್ ಡೆಲಿವರಿ ಆದರೆ ಮುಗಿದೇ ಹೋಯ್ತು  ಎಂಬ ಮತ್ತೊಂದು ವಾಕ್ಯ ಸೇರಿಸುವ ಅಗತ್ಯವಿದೆ.  ಯಾಕೆಂದರೆ ಈಗಿನ ಕಾಲದಲ್ಲಿ ವ್ಯಾಟ್ಸಾಪ್, ಎಸ್ಎಂಎಸ್ ಸೇರಿದಂತೆ, ಇಮೇಲ್ ಸೇರಿದಂತೆ ಯಾವುದೇ ಮೆಸೇಜ್ ಅದೆಂತ ಪರಿಣಾಮ ಬೀರಲಿದೆ ಅನ್ನೋದನ್ನು ಬಿಡಿಸಿಹೇಳಬೇಕಾಗಿಲ್ಲ. ಇದೀಗ ಇದೇ ರೀತಿ ಸಿಟ್ಟಿನಲ್ಲಿ ಒಂದೇ ಒಂದು ಪದ ಸಹದ್ಯೋಗಿಗೆ ಕಳುಹಿಸಿದ ಮಹಿಳೆಗೆ ಇದೀಗ ಕಣ್ಣೀರಲ್ಲಿ ದಿನದೂಡುವಂತಾಗಿದೆ.

ವಾಟ್ಸಾಪ್‌ನಿಂದ ಭಾರತದ ಬಗ್ಗೆ ತಾರತಮ್ಯ: ಸರ್ಕಾರ ಕಿಡಿ

F**K U ಎಂಬ ಆಕ್ಷೇಪಾರ್ಹ ಒಂದೇ ಒಂದು ಪದ ಬ್ರಿಟನ್ ಮಹಿಳೆಯನ್ನು ಜೈಲಿನಲ್ಲಿರಿಸಿದೆ. ಬ್ರಿಟನ್‌ನ 31 ವರ್ಷದ ಮಹಿಳೆ ಹಾಗೂ ಸಹದ್ಯೋಗಿ ಉಕ್ರೇನ್‌ ಮಹಿಳೆ ಇಬ್ಬರು ಕೆಲಸದ ನಿಮಿತ್ತ ದುಬೈಗೆ ತೆರಳಿದ್ದಾರೆ. ದುಬೈ ಲಾಕ್‌ಡೌನ್ ವೇಳೆ ಈ ಇಬ್ಬರು ಮಹಿಳೆಯರು ಒಂದೇ ಫ್ಲ್ಯಾಟ್‌ನಲ್ಲಿದ್ದರು. ಈ ವೇಳೆ ಸಣ್ಣ ಕಾರಣಕ್ಕೆ ಜಗಳವಾಗಿದೆ. 

ಇಷ್ಟಕ್ಕೆ ಸುಮ್ಮನಾಗದ ಬ್ರಿಟನ್ ಮಹಿಳೆ F**K U ಮೆಸೇಜ್ ಕಳುಹಿಸಿದ್ದಾರೆ. ಇನ್ನು ಸಹದ್ಯೋಗಿ ಜೊತೆ ಮನಸ್ತಾಪದ ಕಾರಣ ಬೇರೆ ಕೆಲಸಕ್ಕೆ ಅರ್ಜಿ ಹಾಕಿದ್ದಾರೆ. ಕೆಲಸ ಸಿಕ್ಕಿದ ಕಾರಣ, ದುಬೈನಿಂದ ಸ್ವದೇಶಕ್ಕೆ ಮರಳಲು ಸ್ಜಜಾಗಿದ್ದಾರೆ. ವಿಮಾನ ಟಿಕೆಟ್ ಬುಕ್ ಮಾಡಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಮಹಿಳೆಗೆ ಆಘಾತ ಎದುರಾಗಿದೆ.

ವ್ಯಾಟ್ಯ್ಆ್ಯಪ್ ಪ್ರೈವೇಟ್ ಪಾಲಿಸಿ ಕುರಿತು ಕೇಂದ್ರ ಸರ್ಕಾರದ ಮಹತ್ವದ ಸೂಚನೆ!.

ದುಬೈ ಪೊಲೀಸರು ಮಹಿಳೆಯನ್ನು ಸ್ವದೇಶಕ್ಕೆ ಮರಳಲು ಅನುವು ಮಾಡಿಕೊಟ್ಟಿಲ್ಲ. ನಿಮ್ಮ ಮೇಲೆ ಪ್ರಕರಣ ದಾಖಲಾಗಿದೆ. ವಿಚಾರಣೆ ಎದುರಿಸಬೇಕು ಎಂದು ವಶಕ್ಕೆ ಪಡೆದಿದ್ದಾರೆ. F**K U ಮೆಸೇಜ್ ಬ್ರಿಟನ್ ಮಹಿಳೆಗೆ ಸಂಕಷ್ಟ ತಂದೊಡ್ಡಿದೆ. ದುಬೈ ನಿಯಮಗಳನ್ನು ಸಂಪೂರ್ಣವಾಗಿ ಬಳಸಿಕೊಂಡ ಉಕ್ರೇನ್ ಮಹಿಳೆ ದೂರು ದಾಖಲಿಸಿದ್ದಾಳೆ.

ಅದೆಷ್ಟೆ ಮನವಿ ಮಾಡಿದರೂ ಉಕ್ರೇನ್ ಮಹಿಳೆ ಕೇಸ್ ಹಿಂಪದಿಲ್ಲ. ಜೊತೆಗಿದ್ದ ಸಹದ್ಯೋಗಿ ಈ ರೀತಿ ವರ್ತಿಸಿರುವುದಕ್ಕೆ ಬ್ರಿಟನ್ ಮಹಿಳೆ ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಾಗಿ ದುಬಾರಿ ಮೊತ್ತವನ್ನು ದಂಡವಾಗಿ ಪಾವತಿಸಿ, 2 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!
ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ