ಬೆಂಗಳೂರು; ಮಾಜಿ ಪತ್ನಿಯ ಖಾಸಗಿ ಚಿತ್ರಗಳನ್ನೇ ವಾಟ್ಸಪ್ ಸ್ಟೇಟಸ್ ಮಾಡಿಕೊಂಡ!

By Suvarna News  |  First Published Feb 5, 2021, 4:09 PM IST

ಮಾಜಿ ಪತ್ನಿಯ ಖಾಸಗಿ ಚಿತ್ರಗಳನ್ನು ವಾಟ್ಸಪ್ ಸ್ಟೇಟಸ್ ಮಾಡಿಕೊಂಡ/ ಕಾಲ್ ಸೆಂಟರ್ ಉದ್ಯೋಗಿಗೆ ಕಿರುಕುಳ/ ದೂರು ದಾಖಲಿಸಿದ ಮಹಿಳೆ/ ಹೆಂಡತಿಯಿಂದ ಬೇರೆ ಆಗಿದ್ದರೂ ಸುಮ್ಮನಿರದ ಕಿರಾತ


ಬೆಂಗಳೂರು (ಫೆ.  05)  ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುವ  23 ವರ್ಷದ ಉದ್ಯೋಗಿ ತನ್ನ ಮಾಜಿ ಗಂಡನ ವಿರುದ್ಧ ದೂರು ನೀಡಿದ್ದಾಳೆ. ಮಾಜಿ ಗಂಡ ಸೋಶಿಯಲ್ ಮೀಡಿಯಾದಲ್ಲಿ ತನ್ನ ಖಾಸಗಿ ಚಿತ್ರಗಳನ್ನು ಅಪ್ ಲೋಡ್ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ.

ಸಂತೋಷ್ ಎಂಬಾತನ ಜತೆ ಮದುವೆಯಾಗಿದ್ದ ಯುವತಿ ಮೂರು ವರ್ಷದ ಹಿಂದೆ ಬೇರೆಯಾಗಿದ್ದರು.  ಮಹಿಳೆಗೆ  ಇಬ್ಬರು ಮಕ್ಕಳಿದ್ದಾರೆ. ದಂಪತಿ ಬೇರ್ಪಟ್ಟಿದ್ದರೂ, ಸಂತೋಷ್ ಆಗಾಗ್ಗೆ ಬಿಟಿಎಂ 1 ನೇ ಹಂತದಲ್ಲಿರುವ ಮಹಿಳೆ ಮನೆಗೆ ಹೋಗಿ ಕಿರುಕುಳ ನೀಡುತ್ತಿದ್ದ.  ಒಂದು ಹೆಜ್ಜೆ ಮುಂದೆ ಹೋದ ಕಿರಾತಕ ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಮಾಜಿ ಪತ್ನಿಯ ಖಾಸಗಿ ಚಿತ್ರಗಳನ್ನು ಹಾಕಿದ್ದಾನೆ. ಅಷ್ಟೇ ಅಲ್ಲದೆ ಸ್ನೇಹಿತರು ಮತ್ತು ಕುಟುಂಬದವರಿಗೂಈ ಕಳಿಸಿದ್ದಾನೆ.

Tap to resize

Latest Videos

ಹೆಂಡ್ತಿ ಸಾಲಲ್ಲ..ಬೇರೆ ಹೆಣ್ಣುಗಳು ಬೇಕು ಎಂದು ಹೋದ ಇಂಜಿನಿಯರ್

ಕಳೆದ ವಾರ ಇಲ್ಲಿಗೆ ಬಂದಿದ್ದ ಮಾಜಿ ಗಂಡ ಜಗಳ ಮಾಡಿಕೊಂಡು ಹೋಗಿದ್ದ. ಇದಾದ ಮೇಲೆ ನನ್ನ ಸಂಬಂಧಿಯೊಬ್ಬರು ಕರೆ ಮಾಡಿ ನಿನ್ನ ಖಾಸಗಿ ಪೋಟೋಗಳನ್ನು ವಾಟ್ಸಪ್ ಗೆ ಹಾಕಿದ್ದಾನೆ ಎಂದು ತಿಳಿಸಿದರು. ಅಲ್ಲದೇ ಪೋಟೋ ಕಳಿಸಿಕೊಟ್ಟರು ಎಂದು ಮಹಿಳೆ ದೂರಿನಲ್ಲಿ  ಹೇಳಿದ್ದಾರೆ.ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದರೂ ಹೀಗೆ ಮಾಡಿದ್ದಾನೆ. ನನ್ನ ಮಾನನಷ್ಟವಾಗಿದ್ದು ನ್ಯಾಯ ಕೊಡಿಸಬೇಕು ಎಂದು ಮಹಿಳೆ ಕೇಳಿಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಡಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಆರೋಪಿ ಪತ್ತೆಗೆ ಬಲೆ  ಬೀಸಲಾಗಿದೆ. 

click me!