ಬುಲಂದ್‌ಶಹರ್‌ನಲ್ಲಿ ಫಸ್ಟ್ ನೈಟ್ ಅಲ್ಲಿ ಗಂಡ ಹೆಂಡತಿಗೆ ಗರ್ಲ್ ಫ್ರೆಂಡ್ ಫೋಟೋ ತೋರಿಸಿ 20 ಲಕ್ಷ ಕೇಳ್ದ. ಇಲ್ಲ ಅಂದ್ರೆ ಹೊಡೆದು ಮನೆಯಿಂದ ಹೊರಗೆ ಹಾಕಿದ. ಪೊಲೀಸರು ಕೇಸ್ ಹಾಕಿ ತನಿಖೆ ಶುರು ಮಾಡಿದ್ದಾರೆ.
ಬುಲಂದ್‌ಶಹರ್‌ನಲ್ಲಿ ಡೊಮೆಸ್ಟಿಕ್ ವೈಯಲೆನ್ಸ್ ಕೇಸ್: ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಿಂದ ಒಂದು ಶಾಕಿಂಗ್ ಪ್ರಕರಣ ನಡೆದಿದೆ. ಫಸ್ಟ್ ನೈಟ್ ರಾತ್ರಿ ಗಂಡ ಹೆಂಡತಿಗೆ ತನ್ನ ಗರ್ಲ್ ಫ್ರೆಂಡ್ ಫೋಟೋ ತೋರಿಸಿ ನಿನ್ ಮುಖ ನಂಗೆ ಇಷ್ಟ ಇಲ್ಲ ಎಂದಿದ್ದಾನೆ. ಆಮೇಲೆ ಆಕೆ ಮನೆಯವರ ಮರ್ಯಾದೆಗೋಸ್ಕರ ಮದುವೆ ಆಗ್ತಿದೀನಿ, ಈ ಮದುವೆನ ಮುರಿದುಕೊಳ್ಳೋಕೆ ರೆಡಿ ಇದೀನಿ ಎಂದಿದ್ದಾನೆ. ಆದ್ರೆ ಹೆಂಡತಿ ಅವನ ಜೊತೆ ಇರಬೇಕು ಅಂದ್ರೆ ಮನೆಯಿಂದ 20 ಲಕ್ಷ ತರಬೇಕು ಅಂತಾ ಬೇಡಿಕೆ ಇಟ್ಟಿದ್ದಾನೆ ಭೂಪ. ಹೆಂಡತಿ ನಿರಾಕರಿಸಿದ್ದಕ್ಕೆ ಫಸ್ಟ್‌ನೈಟ್ ದಿನದಂದೇ ಹೊಡೆದು ಮನೆಯಿಂದ ಹೊರಗೆ ಹಾಕಿದ್ದಾನೆ ಪಾಪಿ ಪತಿ. ಈಗ ಹೆಂಡತಿ ಪೊಲೀಸ್ ಸ್ಟೇಷನ್‌ನಲ್ಲಿ ಕಂಪ್ಲೇಂಟ್ ಕೊಟ್ಟಿದ್ದಾಳೆ, ತನಿಖೆ ನಡೀತಿದೆ.
ಇದನ್ನೂ ಓದಿ: ನಿಮ್ಮ ಸಂಗಾತಿ ನಿರಂತರ ದೈಹಿಕ ಸಂಪರ್ಕಕಕ್ಕೆ ಒತ್ತಾಯಿಸಿದ್ರೆ ಎಚ್ಚರ!
ಮದುವೆ ಆದ್ಮೇಲೆ ಗಂಡ ಏನು ಮಾಡಿದ ನೋಡಿ!
ಇದು 2022 ಡಿಸೆಂಬರ್ ತಿಂಗಳಿನ ಕೇಸ್. ಹೆಂಡತಿ, ಹೀನಾ ಮಲಿಕ್, ಬುಲಂದ್‌ಶಹರ್‌ನ ಆನಂದ್ ವಿಹಾರ್ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ಆಕೆ ದೂರಿನಲ್ಲಿ ಉಲ್ಲೇಖಿಸಿರುವಂತೆ, 5 ಡಿಸೆಂಬರ್ 2022ಕ್ಕೆ ಗಾಜಿಯಾಬಾದ್‌ನ ಖೋಡಾ ಕಾಲೋನಿಯ ದಾನಿಶ್ ಮಲಿಕ್ ಜೊತೆ ಮದುವೆ ಆಗಿದೆ. ಮದುವೆ ಆದ್ಮೇಲೆ ಮುಖ ನೋಡೋ ಶಾಸ್ತ್ರದ ಟೈಮ್‌ನಲ್ಲಿ ಗಂಡ ಸಡನ್ ಆಗಿ ಹೆಂಡತಿ ಮುಖದಿಂದ ಮುಸುಕು ತೆಗೆದು ನಿನ್ ಮುಖ ನಂಗೆ ಇಷ್ಟ ಇಲ್ಲ ಎಂದಿದ್ದಾನೆ. ಆಮೇಲೆ ಫೋನ್‌ನಲ್ಲಿ ಒಂದು ಹುಡುಗಿ ಫೋಟೋ ತೋರಿಸಿ ಅವಳು ನನ್ನ ಗರ್ಲ್ ಫ್ರೆಂಡ್ ಮುಸ್ಕಾನ್, ಅವಳ ಜೊತೆ ಐದು ವರ್ಷದಿಂದ ಲವ್ ಮಾಡ್ತಿದೀನಿ ಅಂತಾ ಹೇಳಿದ್ದಾನೆ.
ಫಸ್ಟ್‌ನೈಟ್ ದಿನವೇ 20 ಲಕ್ಷ ಕೇಳ್ದ!
ಹೀನಾ ಮಲಿಕ್ ಹೇಳೋ ಪ್ರಕಾರ ದಾನಿಶ್ ಡೈರೆಕ್ಟ್ ಆಗಿ ಮನೆಯವರ ಮರ್ಯಾದೆಗೋಸ್ಕರ ಮದುವೆ ಆಗ್ತಿದೀನಿ ಎಂದಿದ್ದಾನೆ. ಮೊದಲಿಗೆ ನಾನು ಸುಮ್ನೆ ಟಾರ್ಚರ್ ಸಹಿಸಿಕೊಂಡೆ, ಆದ್ರೆ ಅವನು ಸರಿ ಹೋಗ್ತಾನೆ ಅನ್ಕೊಂಡಿದ್ದೆ. ನನ್ನ ಮನೆಯವರು ಈ ಮದುವೆಗೆ 30 ಲಕ್ಷ ಖರ್ಚು ಮಾಡಿದ್ರು, ಅದಕ್ಕೆ ನಾನು ಅವ್ರತ್ರ ಇನ್ನೊಂದ್ಸಲ ದುಡ್ಡು ಕೇಳೋಕೆ ಆಗಲ್ಲ ಎಂದೆ. ಅದಕ್ಕೆ ಕೋಪಗೊಂಡು ನನ್ನ ಮನೆಯಿಂದ ಹೊರಹಾಕಿದ. ಜೊತೆ ಇರಬೇಕು ಅಂದ್ರೆ 20 ಲಕ್ಷ ತಂದು ಕೊಡಬೇಕು ಅಂತಾ ಒತ್ತಾಯಿಸಿದ. ಫ್ಯಾಮಿಲಿ ಅಷ್ಟು ದೊಡ್ಡ ಮೊತ್ತ ತರಕ್ಕೆ ಆಗಲ್ಲ ಅಂತಾ ತಿಳಿಹೇಳಿದ ಮೇಲೂ ದಾನಿಶ್ ಮತ್ತೆ ಅವನ ಮನೆಯವರು ನನ್ನ ಹೊಡೆದ್ರು. ಈಗ ನಾನು ನನ್ನ ತವರುಮನೆಯಲ್ಲಿ ಇದ್ದೇನೆ ಆದ್ರೂ ದಾನಿಶ್ ಇನ್ನು ವರದಕ್ಷಿಣೆ ಕೇಳೋದು ನಿಲ್ಲಿಸಿಲ್ಲ ಎಂದು ಎಂದಿರುವ ಹೀನಾ.
ಇದನ್ನೂ ಓದಿ: 'ಆ ಕೆಲಸ'ದ ವೇಳೆ ಸಂಗಾತಿ ಕತ್ತು ಹಿಸುಕುವುದು ಏಕೆ? ಇದು ತುಂಬಾ ಡೇಂಜರ್!
ಪೊಲೀಸರಿಂದ ತನಿಖೆ ನಡೀತಿದೆ:
ಈ ಕೇಸ್‌ನಲ್ಲಿ ಹೀನಾ ಶುಕ್ರವಾರ ಬುಲಂದ್‌ಶಹರ್ ಕೊತ್ವಾಲಿ ದೆಹಾತ್‌ನಲ್ಲಿ ಗಂಡ ಮತ್ತೆ ಅವನ ಫ್ಯಾಮಿಲಿ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದಾಳೆ. ಪೊಲೀಸರು ಕೇಸ್ ತನಿಖೆ ಮಾಡ್ತಿದ್ದಾರೆ, ಆರೋಪಿ ಗಂಡ ಮತ್ತೆ ಅವನ ಮನೆಯವರ ಮೇಲೆ ಆಕ್ಷನ್ ತಗೋತಿದ್ದಾರೆ. ಪೊಲೀಸ್ ಆಫೀಸರ್ಸ್ ಹೇಳೋ ಪ್ರಕಾರ ಆರೋಪಿಗಳನ್ನ ಬೇಗ ಅರೆಸ್ಟ್ ಮಾಡ್ತಾರೆ.