Latest Crime News: ಬಿಹಾರದ ಪುರ್ನಿಯಾದಲ್ಲಿ ಯುವಕನೊಬ್ಬನ ಮೇಲೆ ಆತನ ಗೆಳತಿಯ ತಂದೆ ಸೇರಿದಂತೆ ಇಬ್ಬರು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೈಗೈದಿದ್ದಾರೆ.
ಬಿಹಾರ (ಜು. 15): ಬುಧವಾರ ಬಿಹಾರದ ಪುರ್ನಿಯಾದಲ್ಲಿ ಯುವಕನೊಬ್ಬನ ಮೇಲೆ ಆತನ ಗೆಳತಿಯ ತಂದೆ ಸೇರಿದಂತೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಖುಷ್ಕಿಬಾಗ್ ಬಾಗೇಶ್ವರ ಕಾಲೋನಿ ನಿವಾಸಿ ಕುನಾಲ್ ಎಂದು ಗುರುತಿಸಲಾಗಿದೆ.ಯುವಕ ತನ್ನ ಮನೆಗೆ ಬೈಕ್‌ನಲ್ಲಿ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಇಬ್ಬರು ಆರೋಪಿಗಳು ಹಿಂದಿನಿಂದ ಬಂದು ನಿಲ್ಲಿಸಿ ಆತನ ತೊಡೆಗೆ ಗುಂಡು ಹಾರಿಸಿದ್ದಾರೆ. ಬಳಿಕ ಯುವಕ ನೆಲಕ್ಕೆ ಬಿದ್ದಿದ್ದಾನೆ. ಗುಂಡಿನ ಸದ್ದು ಕೇಳಿ ಸ್ಥಳಕ್ಕಾಗಮಿಸಿದ ಸ್ಥಳೀಯರು ಕುನಾಲ್ ಅವರನ್ನು ಚಿಕಿತ್ಸೆಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಆಸ್ಪತ್ರೆಗೆ ಆಗಮಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬ ಯುವಕನ ಗೆಳತಿಯ ತಂದೆ ಮುನ್ನಾ ಪಾಸ್ವಾನ್ ಆಗಿದ್ದು, ಬೈಕ್‌ನಲ್ಲಿದ್ದ ಇನ್ನೊಬ್ಬ ವ್ಯಕ್ತಿಯನ್ನು ಗುರುತಿಸಲಾಗಲಿಲ್ಲ ಎಂದು ಕುನಾಲ್ ತನ್ನ ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ.
ಜನವರಿ 2021 ರಲ್ಲಿ ಪಾಸ್ವಾನ್ ತನ್ನ ವಿರುದ್ಧ ಅಪಹರಣದ ದೂರು ದಾಖಲಿಸಿದ್ದರು, ಅದಕ್ಕಾಗಿ ಜೈಲಿಗೆ ಹೋಗಬೇಕಾಗಿ ಬಂದಿತ್ತು ಎಂದು ಯುವಕ ತಿಳಿಸಿದ್ದಾನೆ. 20 ದಿನಗಳ ಹಿಂದೆಯಷ್ಟೇ ಯುವಕ ಜಾಮೀನಿನ ಮೇಲೆ ಹೊರಬಂದಿದ್. ಅಂದಿನಿಂದ ಬಾಲಕಿಯ ತಂದೆ ಆತನಿಗೆ ಪದೇ ಪದೇ ಬೆದರಿಕೆ ಹಾಕುತ್ತಿದ್ದ ಎಂದ ಯುವಕ ಆರೋಪಿಸಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ಇದನ್ನೂ ಓದಿ: ದ್ರೋಹ ಬಗೆದ ಗೆಳತಿ ಕೊಂದು ಯುವಕ ಆತ್ಮಹತ್ಯೆ