ತುಂಗೆ​ಯಲ್ಲಿ ಬಾಂಬ್‌ ಸ್ಫೋಟ: ಆರೋಪಿಗಳ ವಿರುದ್ಧ ಐಎನ್‌ಎ ಚಾರ್ಜ್‌ಶೀಟ್

By Kannadaprabha NewsFirst Published Mar 18, 2023, 8:05 AM IST
Highlights

ವಿಧ್ವಂಸಕ ಕೃತ್ಯ, ರಾಷ್ಟ್ರಧ್ವಜಕ್ಕೆ ಅವಮಾನ, ಕಾನೂನುಬಾಹಿರ ಚಟುವಟಿಕೆ ಸೇರಿದಂತೆ ಹಲವು ವಿದ್ರೋಹ ಚಟುವಟಿಕೆ ಸೇರಿದಂತೆ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಶಂಕಿತ ಕಾರ್ಯಕರ್ತರಾದ ಇಬ್ಬರು ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಐಎನ್‌ಎ) ವಿಶೇಷ ನ್ಯಾಯಾಲಯಕ್ಕೆ ಜಾಚ್‌ರ್‍ಶಿಟ್‌ ಸಲ್ಲಿಸಿದೆ.

ಶಿವಮೊಗ್ಗ (ಮಾ.18) : ವಿಧ್ವಂಸಕ ಕೃತ್ಯ, ರಾಷ್ಟ್ರಧ್ವಜಕ್ಕೆ ಅವಮಾನ, ಕಾನೂನುಬಾಹಿರ ಚಟುವಟಿಕೆ ಸೇರಿದಂತೆ ಹಲವು ವಿದ್ರೋಹ ಚಟುವಟಿಕೆ ಸೇರಿದಂತೆ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಶಂಕಿತ ಕಾರ್ಯಕರ್ತರಾದ ಇಬ್ಬರು ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಐಎನ್‌ಎ) ವಿಶೇಷ ನ್ಯಾಯಾಲಯಕ್ಕೆ ಜಾಚ್‌ರ್‍ಶಿಟ್‌ ಸಲ್ಲಿಸಿದೆ.

ಶಿವಮೊಗ್ಗ ಮಾಜ್‌ ಮುನೀರ್‌ ಅಹಮದ್‌ (23) ಮತ್ತು ಸೈಯದ್‌ ಯಾಸಿನ್‌ (22) ವಿರುದ್ಧ ಭಾರತೀಯ ದಂಡ ಸಂಹಿತೆ, ಕಾನೂನುವಾಹಿರ ಚಟುವಟಿಕೆಗಳ ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನ ಮಾಡುವುದನ್ನು ತಡೆಯುವ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಈ ಸಂಬಂಧ ಇದೀಗ ಈ ಆರೋಪಿಗಳ ವಿರುದ್ಧ Chargesheet ಸಲ್ಲಿಸಲಾಗಿದೆ.

ಶಿವಮೊಗ್ಗದ 2 ಶಂಕಿತ ಉಗ್ರರಿಗೆ 1.5 ಲಕ್ಷ ವಿದೇಶಿ ಕ್ರಿಪ್ಟೋ ಹಣ..!

ಕಳೆದ ಆಗಸ್ಟ್‌ 15ರಂದು ಶಿವಮೊಗ್ಗದಲ್ಲಿ ಪ್ರೇಮ್‌ಸಿಂಗ್‌(Prem singh shivamogga) ಎಂಬಾತನನ್ನು ಆರೋಪಿ ಜಮೀವುಲ್ಲಾ ಮತ್ತು ಇತರರು ಚೂರಿಯಿಂದ ಇರಿದ ಪ್ರಕರಣದಲ್ಲಿ ತನಿಖೆ ಆರಂಭಿಸಿದ್ದ ಪೊಲೀಸರು ಈ ಪ್ರಕರಣವನ್ನು ಬಯಲಿಗೆ ಎಳೆದಿದ್ದರು. ಈ ಮೂಲಕ ಶಿವಮೊಗ್ಗದ ತುಂಗಾನದಿ(Tunga river bomb blast case) ತಟದಲ್ಲಿ ಬಾಂಬ್‌ ಸ್ಫೋಟದ ಟ್ರಯಲ್‌ ಇಡೀ ದೇಶಾದ್ಯಂತ ಸುದ್ದಿ ಮಾಡಿತ್ತು. ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿತ್ತು. ತನಿಖೆ ಮುಂದುವರೆದಂತೆ ಈ ಇಬ್ಬರು ಆರೋಪಿಗಳ ಹಲವು ಸಂಚಿನ ಭಾಗವನ್ನು ಹೊರತೆಗೆದಿದ್ದರು. ಐಎಸ್‌ ಸಂಪರ್ಕದ ಕುರಿತು ಸಾಕಷ್ಟುಮಾಹಿತಿ ಸಂಗ್ರಹಿಸಿದ್ದರು. ರಾಷ್ಟ್ರದ್ರೋಹ ಚಟುವಟಿಕೆಯ ಮಾಹಿತಿಯನ್ನು ಹೊರಗೆಳೆದಿದ್ದರು.

ಈ ಇಬ್ಬರು ಶಂಕಿತ ಉಗ್ರರು ವಿದೇಶಿ ಐಎಸ್‌ ಭಯೋತ್ಪಾದ(ISIS Terrorist)ಕ ಗುಂಪಿನ ಚಟುವಟಿಕೆಗಳನ್ನು ಹೆಚ್ಚಿಸಲು ಸಂಚು ರೂಪಿಸಿದ್ದರು. ನಾಗರಿಕರ ಮತ್ತು ಖಾಸಗಿ ಆಸ್ತಿಗಳಿಗೆ ಹಾನಿ ಮಾಡುವ ಸಂಚು ರೂಪಿಸಿದ್ದರು. ಐಎಸ್‌ ಭಯೋತ್ಪಾದಕ ಗುಂಪುಗಳಿಂದ ಪ್ರೇರೇಪಿತರಾಗಿದ್ದರು. ವಾರಾಹಿ ನದಿ ಹಿನ್ನೀರಿನ ಅರಣ್ಯ ಪ್ರದೇಶಕ್ಕೆ ಚಾರಣ ಮತ್ತು ಅಡಗು ತಾಣಗಳಿಗೆ ತೆರಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರಧ್ವಜವನ್ನು ಕೂಡ ಸುಟ್ಟು ಹಾಕಿ ಅದರ ವೀಡಿಯೋ ಮಾಡಿದ್ದರು.

ವಿಶ್ವದ ಡೇಂಜರಸ್ ಉಗ್ರ ಸಂಘಟನೆ ಪಟ್ಟಿ ಬಿಡುಗಡೆ, ಭಾರತದ ಸಿಪಿಐ ಪಕ್ಷಕ್ಕೆ 12ನೇ ಸ್ಥಾನ!

ಮುನೀರ್‌ ಅಹ್ಮದ್‌ ತನ್ನ ಸ್ನೇಹಿತರ ಖಾತೆಗಳಿಗೆ ಆನ್‌ಲೈನ್‌ ಮೂಲಕ ವಿದೇಶಗಳಿಂದ ಸುಮಾರು .1. 5 ಲಕ್ಷಗಳಿಗೆ ಸಮನಾದ ಕ್ರಿಪ್ಟೋ ಕರೆನ್ಸಿಯನ್ನು ಪಡೆದಿದ್ದಾನೆ ಎಂಬುದು ಕೂಡ ತನಿಖೆಯಲ್ಲಿ ತಿಳಿದುಬಂದಿದೆ. ಯಾಸಿನ್‌ ತನ್ನ ಸ್ನೇಹಿತನ ಖಾತೆಗೆ .62 ಸಾವಿರ ಪಡೆದಿದ್ದ. ಪ್ರಕರಣದ ಇನ್ನೋರ್ವ ಆರೋಪಿ ನ.19ರಂದು ಮಂಗಳೂರಿನಲ್ಲಿ ಐಇಡಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದು, ತಾಂತ್ರಿಕ ದೋಷದಿಂದ ಅಕಾಲಿಕವಾಗಿ ಸ್ಫೋಟಗೊಂಡಿತ್ತು ಎಂದು ಅಧಿಕಾರಿಗಳು ಈ ಸಂದರ್ಭದಲ್ಲಿ ತಿಳಿಸಿದರು.

ಈ ಇಬ್ಬರು ಆರೋಪಿಗಳಲ್ಲದೇ ಉಳಿದ ಆರೋಪಿಗಳ ವಿರುದ್ಧ ತನಿಖೆ ಚುರು​ಕು​ಗೊಂಡಿದೆ.

click me!