ಬೆಂಗಳೂರು: ಪೊಲೀಸರ ಐಡಿ ತೋರಿಸಿ 1.48 ಲಕ್ಷ ಎಗರಿಸಿದ ಸೈಬರ್‌ ಚೋರರು..!

By Kannadaprabha News  |  First Published Mar 18, 2023, 7:23 AM IST

ವಿದೇಶಕ್ಕೆ ನಿಮ್ಮ ಹೆಸರಲ್ಲಿ ಪಾರ್ಸೆಲ್‌ ಬುಕ್‌ ಆಗಿದೆ ಎಂದು ಮೋಸ, ಆಧಾರ್‌, ಮೊಬೈಲ್‌ ನಂಬರ್‌ ಬಳಸಿ ತೈವಾನ್‌ಗೆ ಪಾರ್ಸೆಲ್‌, ಇದರ ಪರಿಶೀಲನೆಗೆ ಹಣ ಹಾಕಿ ಎಂದು ನಂಬಿಸಿದ್ದ ವಂಚಕ, ವಿವಿಧ ಬ್ಯಾಂಕ್‌ ಖಾತೆಗೆ ಹಣ ಹಾಕಿಸಿಕೊಂಡು ವಂಚನೆ. 


ಬೆಂಗಳೂರು(ಮಾ.18):  ಸೈಬರ್‌ ಪೊಲೀಸರ ಸೋಗಿನಲ್ಲಿ ಬ್ಯಾಂಕ್‌ ಖಾತೆಯ ವ್ಯವಹಾರ ಪರಿಶೀಲಿಸುವ ನೆಪದಲ್ಲಿ ಸೈಬರ್‌ ಕಳ್ಳರು ಮಹಿಳೆಯೊಬ್ಬರಿಂದ 1.48 ಲಕ್ಷ ವರ್ಗಾಯಿಸಿಕೊಂಡು ವಂಚಿಸಿರುವ ಸಂಬಂಧ ಕೇಂದ್ರ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲ್ಲೇಶ್ವರಂ ನಿವಾಸಿ ಪದ್ಮಜಾ (56) ಹಣ ಕಳೆದುಕೊಂಡವರು. ಇತ್ತೀಚೆಗೆ ಪದ್ಮಜಾ ಅವರ ಮೊಬೈಲ್‌ಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ‘ನಿಮ್ಮ ಆಧಾರ್‌ ಕಾರ್ಡ್‌ ಮತ್ತು ಮೊಬೈಲ್‌ ನಂಬರ್‌ ಉಪಯೋಗಿಸಿಕೊಂಡು ನಿಮ್ಮ ಹೆಸರಿನಲ್ಲಿ ಮುಂಬೈನಿಂದ ತೈವಾನ್‌ಗೆ ಪಾರ್ಸೆಲ್‌ವೊಂದು ಬುಕ್‌ ಆಗಿದೆ. ಹೀಗಾಗಿ ನಿಮ್ಮ ಕರೆಯನ್ನು ಸೈಬರ್‌ ಕ್ರೈಂ ವಿಭಾಗಕ್ಕೆ ವರ್ಗಾಯಿಸುವುದಾಗಿ’ ಹೇಳಿದ್ದಾನೆ.

Tap to resize

Latest Videos

4 ಕೆಜಿ ಚಿನ್ನ ಮಾರಾಟಕ್ಕೆ ಯತ್ನ, ಗದಗ ಪೊಲೀಸರ ಕೈಗೆ ಸಿಕ್ಕಿಬಿದ್ದ ಮುಂಬೈ ಮೂಲದ ವ್ಯಾಪಾರಿಗಳು!

ಬಳಿಕ ಮತ್ತೊಬ್ಬ ಅಪರಿಚಿತ ವ್ಯಕ್ತಿ ಪದ್ಮಜಾಗೆ ಸ್ಕೈಪ್‌ ಕರೆ (ವಿಡಿಯೋ) ಮಾಡಿದ್ದು, ‘ತಾನು ಪೊಲೀಸ್‌ ಅಧಿಕಾರಿ’ ಎಂದು ಐಡಿ ಕಾರ್ಡ್‌ ತೋರಿಸಿದ್ದಾನೆ. ‘ನಿಮ್ಮ ಆಧಾರ್‌ ಕಾರ್ಡ್‌ ಉಪಯೋಗಿಸಿಕೊಂಡು ನಿಮ್ಮ ಹೆಸರಿನಲ್ಲಿ ಯೆಸ್‌ ಬ್ಯಾಂಕ್‌, ಸಿಟಿ ಬ್ಯಾಂಕ್‌ನಲ್ಲಿ ಖಾತೆಗಳನ್ನು ತೆರೆದಿದ್ದಾರೆ. ನೀವು ಈಗ ನಿಮ್ಮ ಖಾತೆಗೆ ಹಣ ವರ್ಗಾಯಿಸಬೇಕು. ನಿಮ್ಮ ಖಾತೆಯ ವ್ಯವಹಾರ ಪರಿಶೀಲಿಸಬೇಕು’ ಎಂದು ಸಿಟಿ ಬ್ಯಾಂಕ್‌, ಆಕ್ಸಿಸ್‌ ಬ್ಯಾಂಕ್‌, ಯೆಸ್‌ ಬ್ಯಾಂಕ್‌ ಖಾತೆಗೆ ಪದ್ಮಜಾ ಅವರಿಂದ ಒಟ್ಟು .1.48 ಲಕ್ಷ ವರ್ಗಾಯಿಸಿಕೊಂಡಿದ್ದಾನೆ. ಬಳಿಕ ಅಪರಿಚಿತ ವ್ಯಕ್ತಿ ಕರೆ ಸ್ಥಗಿತಗೊಳಿಸಿದ್ದಾನೆ. ಪದ್ಮಜಾ ಅವರು ಮತ್ತೆ ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ. ಬಳಿಕ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದ ಬಳಿಕ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ದೂರು ಆಧರಿಸಿ ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!