ಜೀವನದಲ್ಲಿ ಜಿಗುಪ್ಸೆ: ಬಿಎಂಟಿಸಿ ಡಿಪೋದಲ್ಲೇ ಚಾಲಕ ಆತ್ಮಹತ್ಯೆ

Published : Aug 09, 2023, 06:43 AM IST
ಜೀವನದಲ್ಲಿ ಜಿಗುಪ್ಸೆ: ಬಿಎಂಟಿಸಿ ಡಿಪೋದಲ್ಲೇ ಚಾಲಕ ಆತ್ಮಹತ್ಯೆ

ಸಾರಾಂಶ

ಜೀವನದಲ್ಲಿ ಜಿಗುಪ್ಸೆಗೊಂಡು ಬಿಎಂಟಿಸಿ ಚಾಲಕ ಕಮ್‌ ನಿರ್ವಾಹಕನೊಬ್ಬ ಡಿಪೋದಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ. 

ಬೆಂಗಳೂರು (ಆ.09): ಜೀವನದಲ್ಲಿ ಜಿಗುಪ್ಸೆಗೊಂಡು ಬಿಎಂಟಿಸಿ ಚಾಲಕ ಕಮ್‌ ನಿರ್ವಾಹಕನೊಬ್ಬ ಡಿಪೋದಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ. ದೇವನಹಳ್ಳಿ ತಾಲೂಕಿನ ಅವತಿ ಗ್ರಾಮದ ನಿವಾಸಿ ನಾಗೇಶ್‌ (46) ಮೃತ ದುರ್ದೈವಿ. ದೇವನಹಳ್ಳಿ ಬಿಎಂಟಿಸಿ ಡಿಪೋದಲ್ಲಿ ಸೋಮವಾರ ರಾತ್ರಿ ನೇಣು ಬಿಗಿದುಕೊಂಡು ನಾಗೇಶ್‌ ಆತ್ಮಹತ್ಯೆ ಮಾಡಿಕೊಂಡಿದ್ದು, ಮಂಗಳವಾರ ಬೆಳಗ್ಗೆ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. 

ಅವತಿ ಗ್ರಾಮದಲ್ಲಿ ತನ್ನ ಇಬ್ಬರು ಮಕ್ಕಳು ಹಾಗೂ ಪತ್ನಿ ಜತೆ ನೆಲೆಸಿದ್ದ ನಾಗೇಶ್‌, ಕಳೆದ ಹದಿನೈದು ವರ್ಷಗಳಿಂದ ಬಿಎಂಟಿಸಿಯಲ್ಲಿ ಚಾಲಕ ಕಮ್‌ ನಿರ್ವಾಹಕನಾಗಿ ಕೆಲಸ ಮಾಡಿದ್ದ. ಒಂದು ತಿಂಗಳು ಸುದೀರ್ಘ ರಜೆ ಪಡೆದಿದ್ದ ಆತ, ಸೋಮವಾರ ರಾತ್ರಿ ಡಿಪೋಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಪರೀತ ಮದ್ಯವ್ಯಸನಿಯಾಗಿದ್ದ ನಾಗೇಶ್‌ನ ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ದೇವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ ಅವಧಿಯ ಬಿಬಿಎಂಪಿ ಕಾಮಗಾರಿ ತನಿಖೆಗೆ ರಾಜ್ಯ ಸರ್ಕಾರ ಆದೇಶ

ಬ್ಯಾಂಕ್‌ ಮ್ಯಾನೇಜರ್‌ ಆತ್ಮಹತ್ಯೆ: ಐಎಎಸ್‌ ಓದಬೇಕೆಂಬ ಕನಸು ನನಸಾಗದ ಹಿನ್ನೆಲೆ ಮತ್ತು ಜೀವನದಲ್ಲಿ ಜಿಗುಪ್ಸೆಗೊಂಡ ಬ್ಯಾಂಕ್‌ ವåಾ್ಯನೇಜರ್‌ವೊಬ್ಬರು ನೇಣಿಗೆ ಶರಣಾಗಿರುವ ಘಟನೆ ನ​ಗ​ರದಲ್ಲಿ ನಡೆದಿದೆ. ಕಾವೇರಿ ಗ್ರಾಮೀಣ ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ವ್ಯವಸ್ಥಾಪಕಿ ಶ್ರುತಿ (30) ಆತ್ಮಹತ್ಯೆ ಮಾಡಿಕೊಂಡವರು. ವಿನಾಯಕ ಬಡಾವಣೆಯ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದು, ಐಎಎಸ್‌ ಕನಸು ಮತ್ತು ಜೀವನ ವೈಫಲ್ಯ ಸಾವಿಗೆ ಕಾರಣ ಎಂದು ಡೆಟ್‌ನೋಟ್‌ನಲ್ಲಿ ತಿಳಿಸಿದ್ದಾರೆ. 

ಕೊಳ್ಳೇಗಾಲದ ಮಲ್ಲಪ್ಪ ಎಂಬುವರ ಪುತ್ರಿ ಶ್ರುತಿ ಕಾವೇರಿ ಗ್ರಾಮೀಣ ಬ್ಯಾಂಕ್‌ ಉದ್ಯೋಗಿಯಾಗಿ ನೇಮಕಗೊಂಡು ಚಿಕ್ಕಮಗಳೂರಿನ ಶಾಖೆಯಲ್ಲಿ ಏಳು ವರ್ಷ ಕಾರ್ಯನಿರ್ವಹಿಸಿ ಮಂಡ್ಯದ ಪ್ರಾದೇಶಿಕ ಕಚೇರಿಗೆ ಎರಡು ತಿಂಗಳ ಹಿಂದೆ ಬಂದಿದ್ದರು. ಭಾನುವಾರ ರಾತ್ರಿ 7ರ ಸುಮಾರಿಗೆ ತಂದೆ ಮಲ್ಲಪ್ಪ ಅವರಿಗೆ ಕರೆ ಮಾಡಿದ ಶ್ರುತಿ ನಾನು ದೇವರ ಬಳಿ ಹೋಗುತ್ತಿದ್ದೇನೆ, ನನ್ನನ್ನು ಕ್ಷಮಿಸಿ ಎಂದು ಹೇಳಿ ಕರೆ ಕಡಿತ ಮಾಡಿದ್ದಾರೆ. ತಕ್ಷಣ ಮತ್ತೆ ಅವರು ಕರೆ ಮಾಡಿದಾಗ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. 

ದೇಶದಲ್ಲಿಯೇ ಭರವಸೆಗಳ ಈಡೇರಿಸಿದ ಸರ್ಕಾರ ಕಾಂಗ್ರೆಸ್‌: ಟಿ.ಬಿ.ಜಯಚಂದ್ರ

ಮನೆ ಬಳಿ ಹೋಗಿ ನೋಡುವಷ್ಟರಲ್ಲಿ ನೇಣಿಗೆ ಶರಣಾಗಿದ್ದರು. ವಿನಾಯಕ ಬಡಾವಣೆಯ ರಾಜಣ್ಣ ಅವರ ಮನೆಯನ್ನು ಬಾಡಿಗೆಗೆ ಪಡೆದು ಅವಿವಾಹಿತರಾಗಿದ್ದ ಕಾರಣ ಒಬ್ಬರೇ ವಾಸವಾಗಿದ್ದರು. ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್‌ ಬರೆದಿರುವ ಶ್ರುತಿ ಐಎಎಸ್‌ ಮಾಡಬೇಕೆಂಬ ಕನಸು ನನಸಾಗಲಿಲ್ಲ, ಜೊತೆಗೆ ಜೀವನದಲ್ಲೂ ವೈಫಲ್ಯ ಕಂಡಿದ್ದೇನೆ ಎಂದು ತಿಳಿಸಿದ್ದಾರೆ. ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ