Bengaluru: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ: ಪೊಲೀಸರ ಮುಂದೆ ಪತ್ನಿ ಸುಮಾ ಹೇಳಿದ್ದೇನು?

By Govindaraj S  |  First Published May 26, 2022, 12:47 AM IST

ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನಂತರಾಜು ಪತ್ನಿ ಸುಮಾ ಪೊಲೀಸರ ಮುಂತೆ ತನಿಖೆಗೆ ಹಾಜರಾಗಿದ್ದಾಳೆ. ಸತತ ನಾಲ್ಕು ಗಂಟೆಗಳ ಕಾಲ ವಿಚಾರಣೆ ಎದುರಿಸಿರೋ ಸುಮಾ ವಿಚಾರಣೆ ವೇಳೆ ಪೊಲೀಸರ ಮಂದೆ ನಡೆದ ದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾಳೆ.


ಬೆಂಗಳೂರು (ಮೇ.26): ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನಂತರಾಜು ಪತ್ನಿ ಸುಮಾ ಪೊಲೀಸರ ಮುಂತೆ ತನಿಖೆಗೆ ಹಾಜರಾಗಿದ್ದಾಳೆ. ಸತತ ನಾಲ್ಕು ಗಂಟೆಗಳ ಕಾಲ ವಿಚಾರಣೆ ಎದುರಿಸಿರೋ ಸುಮಾ ವಿಚಾರಣೆ ವೇಳೆ ಪೊಲೀಸರ ಮಂದೆ ನಡೆದ ದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾಳೆ.

ಪೊಲೀಸರ ಮುಂದೆ ಅನಂತರಾಜು ಪತ್ನಿ ಸುಮಾ ಹೇಳಿದ್ದೇನು?: ಬಿಜೆಪಿ ಮುಖಂಡ ಅನಂತರಾಜು ಹಾಗೂ ರೇಖಾ ನಡುವಿನ ಸಂಬಂಧ ಸುಮಾಳಿಗೆ ಡಿಸೆಂಬರ್ ತಿಂಗಳಲ್ಲಿಯೇ ಗೊತ್ತಾಗಿದ್ದು, ಈ ಹಿನ್ನೆಲೆ ಇಬ್ಬರ ಮಧ್ಯೆ ಜಗಳ ಶುರುವಾಗಿತ್ತು. ಆಗಲೇ ರೇಖಾ ನಂಬರ್ ಪಡೆದ ಸುಮಾ ನಡುವೆ ವಾಗ್ವಾದ ಶುರುವಾಗಿತ್ತು. ಜತೆಗೆ ಮನೆಯಲ್ಲಿ ಪ್ರತಿನಿತ್ಯ ಅನಂತರಾಜು ಹಾಗೂ ಸುಮಾಳ ನಡುವೆ ಜಗಳ ತಾರಕ್ಕಕ್ಕೇರಿ ಫೆಬ್ರವರಿಯಲ್ಲಿ ಬ್ಯಾಡರಹಳ್ಳಿ ಠಾಣಾ ಮೇಟ್ಟಿಲೇರಿ ಅಲ್ಲಿ ರಾಜಿ ಪಂಚಾಯಿತಿಯೂ ಆಗಿತ್ತು ಅನ್ನೋದನ್ನ ಬ್ಯಾಡರಹಳ್ಳಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.

Tap to resize

Latest Videos

ಬಿಜೆಪಿ ಮುಖಂಡನ ಆತ್ಮಹತ್ಯೆಗೆ ಪತ್ನಿ ಕಿರುಕುಳ ಕಾರಣ?

ಆಡಿಯೋ ವೈರಲ್ ಬಗ್ಗೆಯೂ ಪಿನ್ ಟೂ ಪಿನ್ ಮಾಹಿತಿ ನೀಡಿರೋ ಸುಮಾ: ಆಡಿಯೋದಲ್ಲಿ ಮಾತನಾಡಿದ್ದು ನಿಜ. ಆದ್ರೆ ನನ್ನ ಗಂಡನ ಮೇಲೆ ಹಲ್ಲೆ ಮಾಡಿಲ್ಲ. ಆಕೆಯ ಮೇಲಿನ ಕೋಪದಲ್ಲಿ ಈ ರೀತಿ ಮಾತನಾಡಿದ್ದೀನಿ‌. ಆಡಿಯೋದಲ್ಲಿ ಹೇಳಿರೋ ತರ ಕೈ ಮುರಿದಿಲ್ಲ. ನನ್ನ ಗಂಡನ ಮೇಲೆ‌ ನಾನು ಹಲ್ಲೆ ಮಾಡಿಲ್ಲ. ನನ್ನ ಗಂಡನ ಸಾವು ಬಯಸಿ ತಾಳಿ ಕಳೆದುಕೊಳ್ಳೋಕಾಗುತ್ತಾ ಸರ್. ಇದರ ಜೊತೆಗೆ ನಾವು ಒಂದು ತಿಂಗಳ ಹಿಂದೆ ಮಾರಿಷಿಯಸ್ ಹೋಗಲು ಪ್ಲಾನ್ ಮಾಡಿದ್ವಿ. ಒಂದುವರೆ ಲಕ್ಷ ಖರ್ಚು ಮಾಡಿ ಬುಕ್ ಕೂಡಾ ಮಾಡಿದ್ವಿ. ಆದ್ರೆ ಈ ರೀತಿ ಮಾಡಿಕೊಂಡಿರೋದು ನೋವು ತಂದಿದೆ ಅಂತಾ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.

ಪೋಷ್ಟ್ ಮಾರ್ಟಮ್ ರಿಪೋರ್ಟ್‌ನಲ್ಲಿ ಕೈ ಮುರಿದಿದ್ದು ಪತ್ತೆಯಾಗಿಲ್ಲ: ಆಡಿಯೋದಲ್ಲಿ ರೇಖಾ ಬಳಿ ಸೌಮ್ಯ ಅನಂತರಾಜು ಕೈ ಮುರಿದಿದ್ದೇನೆ ಎಂಬ ಹೇಳಿಕೆಗೆ ಈಗಾಗಲೇ ಅನಂತರಾಜು ಪಿಎಂ ರಿಪೋರ್ಟ್ ಪೊಲೀಸರ ಕೈ ಸೇರಿದ್ದು, ಅದ್ರಲ್ಲಿ ಯಾವುದೇ ರೀತಿಯಾದ ಕೈ ಮುರಿದಿರೋದ್ರ ಬಗ್ಗೆ ಉಲ್ಲೇಖವಾಗಿಲ್ಲ ಅನ್ನೋ ಮಾಹಿತಿ ಇದೆ. ಇದರ ಜೊತೆಗೆ ಡೆತ್ ನೋಟ್ ಮೇಲೆ ಅನುಮಾನ ಮೂಡಿದ್ದ ಅನಂತರಾಜು ಡೆತ್ ನೋಟ್ ಬರೆದಿದ್ದಾರಾ? ಇಲ್ಲ ಬೇರೆ ಯಾರಾದರೂ ಬರೆದಿದ್ದಾರಾ? ಅನ್ನೊ ಬಗ್ಗೆ ಮಾಹಿತಿ ಕಲೆ ಹಾಕಲು  ಅನಂತರಾಜು ಹ್ಯಾಂಡ್ ರೈಟಿಂಗ್ ಮ್ಯಾಚ್ ಮಾಡಿದ್ದು ಡೆತ್ ನೋಟ್‌ನಲ್ಲಿ ಮಾಡಿರೋ ಹಸ್ತಾಕ್ಷರ ಬಗ್ಗೆ ಅನುಮಾನ ವ್ಯಕ್ತವಾಗಿದೆ. 

ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ: ಪತ್ನಿಗೆ ಮತ್ತೊಮ್ಮೆ ನೋಟಿಸ್ ನೀಡಲು ಪೊಲೀಸ್ ಸಿದ್ದತೆ

ಹೀಗಾಗಿ ಅನಂತರಾಜು ಬ್ಯಾಂಕ್‌ನಲ್ಲಿನ ಸೈನ್‌ಗಳ ಮಾಹಿತಿಯನ್ನ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ. ಬ್ಯಾಂಕ್‌ಗಳಲ್ಲಿ ಮಾಡಿರೋ ಸೈನ್ ಕಾಪಿ ತರಿಸಿಕೊಂಡು ಡೆತ್ ನೋಟ್‌ನಲ್ಲಿ ಮಾಡಿರೋ ಸೈನ್ ತಾಳೆ ಮಾಡಲಿದ್ದು, ನಂತರ ಎರಡನ್ನೂ ಎಫ್‌ಎಸ್‌ಎಲ್‌ಗೆ ಕಳಿಸಲು ಚಿಂತನೆ ನಡೆಸಿದ್ದಾರೆ. ಅದೇನೇ ಇದ್ರೂ ಸುಮಾ ರೇಖಾಳ ಆಡಿಯೋ ವೈರಲ್‌ನಲ್ಲಿ ಸುಮಾ ಮಾತನಾಡಿರುವ ಮಾತು ನಿಜಕ್ಕೂ ಅನುಮಾನ ಮೂಡಿಸುವಂತಿದೆ. ಈ ಹಿನ್ನೆಲೆ ಸುಮಾಳ ಮೇಲೆ ದಟ್ಟವಾದ ಅನುಮಾನ ಶುರುವಾಗಿದ್ದು, ಆಕೆಯ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿರೋದಂತೂ ಸತ್ಯ.

click me!