Davanagere: ಕದಿಯಲು ಬಂದ ಕಳ್ಳ ಆಯ ತಪ್ಪಿ ಬಿದ್ದು ಸಾವು!

By Govindaraj SFirst Published May 26, 2022, 12:30 AM IST
Highlights

ಮನೆಯೊಂದರ ಮೇಲಿಟ್ಟಿದ್ದ ಅಲ್ಯೂಮಿನಿಯಂ ವಸ್ತುಗಳನ್ನು ಕಳವು ಮಾಡಲು ಹೋಗಿ ಕಳ್ಳನೊಬ್ಬ ಧಾರುಣವಾಗಿ ಸಾವನ್ನಪ್ಪಿದ ಘಟನೆ ದಾವಣಗೆರೆ ಕೆಟಿಜೆ ನಗರದಲ್ಲಿ ನಡೆದಿದೆ.

ವರದಿ: ವರದರಾಜ್, ದಾವಣಗೆರೆ

ದಾವಣಗೆರೆ (ಮೇ.26): ಮನೆಯೊಂದರ ಮೇಲಿಟ್ಟಿದ್ದ ಅಲ್ಯೂಮಿನಿಯಂ ವಸ್ತುಗಳನ್ನು ಕಳವು ಮಾಡಲು ಹೋಗಿ ಕಳ್ಳನೊಬ್ಬ ಧಾರುಣವಾಗಿ ಸಾವನ್ನಪ್ಪಿದ ಘಟನೆ ದಾವಣಗೆರೆ ಕೆಟಿಜೆ ನಗರದಲ್ಲಿ ನಡೆದಿದೆ. ಮನೆ ಮನೆ ಮಾಲೀಕನಿಗೆ ಎಚ್ಚರವಾಗಿದ್ದರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಇಬ್ಬರು ಕಳ್ಳರು ಹಾರಿ ಪರಾರಿಯಾಗಿದ್ದಾರೆ. ಸಜ್ಜಾದ ಮೇಲಿನಿಂದ ಹಾರಿದ  ಮತ್ತೊಬ್ಬ ತಲೆ, ಮುಖ, ಎದೆಗೆ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ಕೆಟಿಜೆ ನಗರ 1ನೇ ಕ್ರಾಸ್‌ನ 3 ನೇ ಮುಖ್ಯರಸ್ತೆಯಲ್ಲಿ ಬುಧವಾರ ಬೆಳಗಿನ ಜಾವ ಸಂಭವಿಸಿದೆ. ಮೃತನನ್ನು ಪರಶುರಾಮ ಅಲಿಯಾಸ್ ಪರಸಪ್ಪ(38  ವರ್ಷ) ಎಂದು ಗುರುತಿಸಲಾಗಿದೆ. 

ಕೆಟಿಜೆ ನಗರ 13ನೇ ಕ್ರಾಸ್ 3 ನೇ ಮೇನ್‌ನಲ್ಲಿ ಮೂಲೆ ಮನೆಯ ಸೈಯದ್ ಪೀರ್ ಬಾಗಿಲಿನ ಮೇಲ್ಭಾಗದ ಸಜ್ಜಾದಲ್ಲಿ ಅಲ್ಯೂಮಿನಿಯಂ ಪಟ್ಟಿಗಳನ್ನು ಸಂಗ್ರಹಿಸಿಡಲಾಗಿತ್ತು. ಗುಜರಿ ಸೇರಿದಂತೆ ಅಲ್ಯುಮಿನಿಯಂ ವಸ್ತುಗಳನ್ನು ಕಳವು ಮಾಡಲೆಂದು ಮೂವರು ನಸುಕಿನ ವೇಳೆ ಆಗಮಿಸಿದ್ದಾರೆ. ಆ ಮನೆ ಮೇಲಿನ ಸಜ್ಜಾಕ್ಕೆ ಪರಸಪ್ಪನನ್ನು ಹತ್ತಿಸಲಾಗಿದೆ. ಅದೇ ವೇಳೆ ಮನೆಯ ಮಾಲೀಕ ಸೈಯದ್ ಪೀರ್‌ಗೆ ಎಚ್ಚರವಾಗಿ ಯಾರು ಎಂಬುದಾಗಿ ಜೋರಾಗಿ ಕೇಳಿದ್ದರಿಂದ ಕದಿಯಲು ಬಂದವರು ಕಕ್ಕಾಬಿಕ್ಕಿಯಾಗಿದ್ದಾರೆ. 

Davanagere: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ!

ಸಜ್ಜಾದಲ್ಲಿಟ್ಟಿದ್ದ ಅಲ್ಯುಮಿನಿಯರ್ ವಸ್ತುಗಳನ್ನು ಕೆಳಗೆ ಇಳಿಸುತ್ತಿದ್ದ ಪರಸಪ್ಪನನ್ನ ಬಿಟ್ಟು ಹೊರಗೆ ನಿಂತಿದ್ದ ಇಬ್ಬರು ಕಾಲಿಗೆ ಬುದ್ದಿ ಹೇಳಿದ್ದಾರೆ. 8 -10 ಅಡಿ ಸಜ್ಜಾದ ಮೇಲಿದ್ದ ಪರಸಪ್ಪ ಕೆಳಗೆ ಹಾರಿದ್ದಾನೆ. ಆದ್ರೆ  ಪರಸಪ್ಪ ಹಾರಿದ ಸ್ಥಳದಲ್ಲಿ ಕಬ್ಬಿಣದ ಗೇಟು, ನೆಲಕ್ಕೆ ಹಾಸಿದ್ದ ಸೈಜ್ ಗಲ್ಲಿನ ಮೇಲೆ ಬಿದ್ದು ತಲೆ, ಮುಖ, ಎದೆಗೆ ತೀವ್ರವಾಗಿ ಪೆಟ್ಟಾಗಿ ಅಲ್ಲಿಯೇ ಪ್ರಜ್ನಾಹೀನನಾಗಿ ಕುಸಿದು ಬಿದ್ದಿದ್ದಾನೆ. ಕೆಳಗೆ ಬಿದ್ದು ಗಾಯಗೊಂಡು ಒದ್ದಾಡುತ್ತಿದ್ದ ಪರಸಪ್ಪನನ್ನು ಗಮನಿಸಿದ ಮನೆಯವರು ತಕ್ಷಣವೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕಬ್ಬಿಣದ ಗೇಟು, ಹಾಸುಗಲ್ಲು ತಲೆಗೆ ಬಡಿದು ತೀವ್ರ ಗಾಯಗೊಂಡಿದ್ದ ಪರಸಪ್ಪ ಸಾವನ್ನಪ್ಪಿದ್ದಾರೆ. 

Davanagere Crime: ದೇವರ ಮಗನನ್ನೇ ಬರ್ಬರವಾಗಿ ಕೊಂದ ದುಷ್ಕರ್ಮಿಗಳು: ಕಾರಣ?

ಮೃತನ ಶವವನ್ನು ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ಒಯ್ಯಲಾಯಿತು.  ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಿ.ಬಸರಗಿ, ವೃತ್ತ ನಿರೀಕ್ಷಕ ಗುರು ಬಸವರಾಜ, ಸಬ್ ಇನ್ಸಪೆಕ್ಟರ್ ಪ್ರಭು ಕೆಳಗಿನ ಮನೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮನೆ ಮಾಲೀಕ ಹೇಳುವ ಪ್ರಕಾರ ಗುಜರಿ ಐಟಮ್‌ಗಳು ಸಾವಿರ ರೂಪಾಯಿಗು ಹೋಗುತ್ತಿರಲಿಲ್ಲ. ಅವುಗಳನ್ನು ಮಾರಿದ್ದರೆ ನೂರಾರು ರೂಪಾಯಿ ಸಿಗುತ್ತಿತ್ತು. ಅವುಗಳನ್ನು  ಹಾಗೇ ಕೇಳಿದ್ದರೆ ಕೊಡುತ್ತಿದ್ದೇ ಆದ್ರೆ ಕುಡಿದ ಮತ್ತಿನಲ್ಲಿದ್ದ ಕಳ್ಳರು ಎಡವಟ್ಟು ಮಾಡಿಕೊಂಡಿದ್ದಾರೆ ಎಂದು ಮನೆ ಮಾಲೀಕ ಕನಿಕರ ವ್ಯಕ್ತಪಡಿಸಿದ್ದಾರೆ.

click me!