ಕೋಲಾರದಲ್ಲಿ ಚೀಲವೊಂದರಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು, ಪೊಲೀಸರು ಗುರುತು ಪತ್ತೆ ಕಾರ್ಯ ಆರಂಭಿಸಿದ್ದಾರೆ. ಕೋರಗೊಂಡನಹಳ್ಳಿ ಬಳಿ ಪತ್ತೆಯಾದ ಶವದ ಮುಖವನ್ನು ನಾಯಿಗಳು ಕಚ್ಚಿ ತಿಂದಿವೆ.
ಕೋಲಾರ (ಜ.10): ಬೆಂಗಳೂರಿನ ಪಕ್ಕದ ಜಿಲ್ಲೆಗಳಲ್ಲಿ ಒಂದಾದ ಕೋಲಾರಲ್ಲಿ ಅಪರಿಚತ ಮಹಿಳೆಯ ಶವ ಪತ್ತೆಯಾಗಿದೆ. ಚೀಲವೊಂದರಲ್ಲಿ ಮಹಿೆಯ ಶವ ಪತ್ತೆಯಾಗಿದೆ ಎಂದು ಸ್ಥಳಯ ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಶವದ ಗುರುತು ಪತ್ತೆ ಕಾರ್ಯ ಆರಂಭವಾಗಿದ್ದು, ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಇತ್ತೀಚೆಗೆ ದಾಖಲಾಗಿರುವ ನಾಪತ್ತೆ ಪ್ರಕರಣಗಳ ಲಿಸ್ಟ್‌ಅನ್ನು ಪೊಲೀಸರು ಹೊರತೆಗೆಯುತ್ತಿದ್ದಾರೆ. ಕೋಲಾರ ತಾಲೂಕಿನ ಕೋರಗೊಂಡನಹಳ್ಳಿ ಬಳಿ ಈ ಶವ ಪತ್ತೆಯಾಗಿದೆ. ಮೇಲ್ನೋಟಕ್ಕೆ ಅಪರಿಚಿತ ಮಹಿಳೆಯನ್ನು ಕೊಲೆ ಮಾಡಿದ್ದಾಗಿ ಕಾಣುತ್ತಿದ್ದು, ಆ ಬಳಿಕ ಶವವನ್ನು ಚೀಲದಲ್ಲಿ ದುಷ್ಕರ್ಮಿಗಳು ತುಂಬಿದ್ದಾರೆ. ಶವವನ್ನು ಚೀಲದಲ್ಲಿಟ್ಟು ಹಲವು ದಿನಗಳಾಗಿರುವ ರೀತಿ ಕಾಣುತ್ತಿದ್ದು, ಮೃತದೇಹದ ಮುಖವನ್ನು ನಾಯಿಗಳು ಕಚ್ಚಿ ತಿಂದಿವೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.