ಕಾರವಾರ: ಅಂತರ್ ಜಿಲ್ಲಾ ಬೈಕ್ ಕಳ್ಳನನ್ನು ಬಂಧಿಸಿದ ಮುಂಡಗೋಡ ಪೊಲೀಸರು ಆತನಿಂದ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಹಾವೇರಿ ತಾಲೂಕಿನ ಹುಲಗನಕೊಪ್ಪ ಗ್ರಾಮದ ಅನಿಲ ಶಿವಪ್ಪ ಭೋವಿ ವಡ್ಡರ ಎಂದು ಗುರುತಿಸಲಾಗಿದೆ. ಕಳೆದ ವರ್ಷ ಜೂನ್ 5ರಂದು ಕಾತೂರ ಗ್ರಾಮದ ಸಿರಾಜ್ ಬೊಮ್ಮನಳ್ಳಿ ಎಂಬವರ ಮನೆಯ ಮುಂದೆ ನಿಲ್ಲಿಸಲಾಗಿದ್ದ ಬೈಕ್ ಕಳ್ಳತನ ಮಾಡಿ ನಾಪತ್ತೆ ಆಗಿದ್ದ ಆರೋಪಿ, ಬೈಕ್ ನಂಬರ್ ಬದಲಿಸಿ ಬೈಕ್ ಚಲಾಯಿಸುತ್ತಿದ್ದ ಎನ್ನಲಾಗಿದೆ.
ಅಲ್ಲದೇ, ಇತರರ ಮನೆ ಕಳ್ಳತನಕ್ಕೂ ಇದೇ ವಾಹನ ಬಳಸುತ್ತಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಸೊಲ್ಲಾಪುರ, ಪೂನಾ, ಕೊಲ್ಲಾಪುರ ಸೇರಿದಂತೆ ಹಲವೆಡೆ 40ಕ್ಕೂ ಹೆಚ್ಚು ಮನೆ ಕಳ್ಳತನ ಹಾಗೂ ಮೊಬೈಲ್ ಕಳ್ಳತನ ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿದ್ದಾನೆ. ಈ ಮೊದಲು ಆರೋಪಿ ಸೊಲ್ಲಾಪುರದಲ್ಲಿ ಕಳ್ಳತನ ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿದ್ದ
Bengaluru Crime News: ಕುಖ್ಯಾತ ಬೈಕ್ ಕಳ್ಳರ ಬಂಧನ: 76 ಬೈಕ್ ರಿಕವರಿ
ಈ ಬಗ್ಗೆ ಖಚಿತ ಮಾಹಿತಿ ಪಡೆದ ಮುಂಡಗೋಡ ಪೊಲೀಸರು ಸಿಪಿಐ ಸಿದ್ದಪ್ಪ ಸಿಮಾನಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಿಪಿಐ ಸಿದ್ಧಪ್ಪ ಸಿಮಾನಿ, ಪಿಎಸ್ಐ ಬಸವರಾಜ್ ಮಬನೂರ, ಎನ್. ಡಿ. ಜಕ್ಲಣ್ಣನವರ, ಮಣಿಮಾಲನ್ ಮೇಸ್ತಾ, ಸಲೀಮ್, ವೆಂಕಟೇಶ ನಾಗರೊಳ್ಳಿ, ಅಣ್ಣಪ್ಪ ಬಡಿಗೇರ, ಬಸವರಾಜ್ ಲಮಾಣಿ, ವಿವೇಕ್ ಪಟಗಾರ, ಸಹದೇವ, ಶರತ್ ದೇವಳ್ಳಿ ಭಾಗವಹಿಸಿದ್ದರು.
ಪಲ್ಸರ್ ಬೈಕ್ ಮಾತ್ರ ಕಳ್ಳತನ ಮಾಡೋ ವಿಶೇಷ ಕಳ್ಳರಿವರು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ