ಗಾಡಿ ಪಾರ್ಕಿಂಗ್ ಮಾಡಿ ಹೋಟೆಲ್ ಒಳಗೆ ಹೋಗುವ ಮುನ್ನ ಹುಷಾರ್..!

By Web Desk  |  First Published Nov 27, 2019, 5:42 PM IST

ವಾಹನ ನಿಲ್ಲಿಸಿ ಹೋಟೆಲ್ ಅಥವಾ ಯಾವುದೇ ಅಂಗಡಿಯೊಳಗೆ ಹೋಗುವ ಮುನ್ನ ಎಚ್ಚರದಿಂದಿರಿ. ಇಲ್ಲವಾದಲ್ಲಿ ಕ್ಷಣಾರ್ಧದಲ್ಲೇ ನಿಮ್ಮ ವಾಹನ ಮಾಯವಾಗುತ್ತದೆ. ಅರೇ ಇದೇನಿದು ಅಂತ ಗಾಬರಿ ಆಯ್ತಾ..? ಇದಕ್ಕೆ ಸಾಕ್ಷಿಯಾಗಿ ಕೋಲಾರದಲ್ಲಿ ಸಿಕ್ಕಿದೆ ಸಿಸಿ ಟಿವಿ. 


ಕೋಲಾರ, (ನ.27): ಬೈಕ್ ನಿಲ್ಲಿಸಿ ಒಳಗೆ ಹೋಗಿ ಬರುವಷ್ಟರಲ್ಲಿ ವಾಹನ ಕಳುವಾಗಿದೆ. ಇಂತಹದೊಂದು ಘಟನೆ ಕೋಲಾರದ ಡೂಂ ಲೈಟ್ ವೃತ್ತದಲ್ಲಿರುವ ಹೋಟೆಲ್ ಮುಂಭಾಗದಲ್ಲಿ ನಡೆದಿದೆ.

ಕೋಲಾರದ ಡೂಂ ಲೈಟ್ ವೃತ್ತದಲ್ಲಿರುವ ಹೋಟೆಲ್ ಮುಂಭಾಗ ಈ ಘಟನೆ ನಡೆದಿದೆ. ಪಲ್ಸರ್ ಬೈಕ್ ನಿಲ್ಲಿಸಿ ಒಳಗೆ ಹೋಗಿ ಬರುವಷ್ಟರಲ್ಲಿ ವಾಹನ ಕಳುವಾಗಿದೆ. ಹಾಡಹಗಲೇ ಯಾವುದೇ ಭಯವಿಲ್ಲದೆ ಚಾಲಾಕಿ ಕಳ್ಳರು ವಾಹನವನ್ನು ಕದ್ದೊಯ್ದಿದ್ದಾರೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Tap to resize

Latest Videos

undefined

ಕೌಂಪೌಂಡ್‌ ಒಳಗಿಂದಲೇ ಬೈಕ್ ಕದ್ದೊಯ್ದ ಪೊಲೀಸರು..!

ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹೋಟೆಲ್ ಹೊರಗೆ ನಿಲ್ಲಿಸಿದ್ದ ಪಲ್ಸರ್ ಬೈಕನ್ನು ಖದೀಮರು ಕದ್ದೊಯ್ಯುತ್ತಿರುವುದು ದೃಢಪಟ್ಟಿದೆ. ಹ್ಯಾಂಡಲ್ ಲಾಕ್ ಮಾಡಿದ್ದರೂ ಲಾಕ್ ಮುರಿದು ಬೈಕ್ ಎಗರಿಸಿದ್ದಾರೆ.

ಮೊದಲು ಒಬ್ಬ ಫೋನ್ ಮೂಲಕ ಮಾಹಿತಿ ನೀಡುತ್ತಿದಂತೆ, ಮೆಕ್ಯಾನಿಕ್ ವೇಷ ಧರಿಸಿದ ಮತ್ತೊಬ್ಬ ಎಂಟ್ರಿ ಕೊಡುತ್ತಾನೆ. ಕೊನೆಗೆ ಇಬ್ಬರೂ ಸೇರಿ ಕ್ಷಣಾರ್ಧದಲ್ಲಿ ಕೆಲಸ ಮುಗಿಸಿ ಪರಾರಿಯಾಗುತ್ತಾರೆ. 

ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

click me!