
ಬೆಂಗಳೂರು, (ನ.26): ಹೆಂಡತಿಯನ್ನೇ ಕೊಚ್ಚಿ ಕೊಲೆ ಮಾಡಿ ಬಳಿಕ ಪತಿ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ತಡ ರಾತ್ರಿ ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ನಡೆದಿದೆ.
ಮೊದಲಿಗೆ ಚಾಕುವಿನಿಂದ ಪತ್ನಿ ವಸಂತಾಳ ಕತ್ತುಕೊಯ್ದು ಬಳಿಕ ಪತಿ ಮುರಗೇಶ ನೇಣಿಗೆ ಶರಣಾಗಿದ್ದಾನೆ. ಇವರು ಮೂಲತಃ ತಮಿಳುನಾಡಿನವರಾಗಿದ್ದು ಹದಿನೈದು ವರ್ಷದ ಹಿಂದೆ ಮದುವೆಯಾಗಿದ್ದರು.
ಅತ್ತಿಗೆಯೊಂದಿಗೆ ಚಕ್ಕಂದವಾಡುತ್ತಿದ್ದವನನ್ನು ಹತ್ಯೆಗೈದ ಮೈದುನ..!
ವಸಂತಾ ಹಾಗೂ ಮುರುಗೇಶ್ ಬೆಂಗಳೂರಿನಲ್ಲಿ ವಾಸವಿದ್ದರು. ಆದ್ರೆ, ವಸಂತಾ ಬೇರೆಯೊಬ್ಬನ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆಂದು ಮುರುಗೇಶ್ ಅನುಮಾನ ವ್ಯಕ್ತಪಡಿಸಿತ್ತಿದ್ದ.
ಇದೇ ವಿಚಾರವಾಗಿ ಮನೆಯಲ್ಲಿ ಪದೆ-ಪದೆ ಮನೆಯಲ್ಲಿ ಪತಿ-ಪತ್ನಿ ನಡುವೆ ಜಗಳವಾಗುತ್ತಿತ್ತು. ಇದರಿಂದ ಬೇಸತ್ತು ಕೊನೆಗೆ ಮುರೇಶ್ ಚಾಕುವಿನಿಂದ ಪತ್ನಿ ವಸಂತಾಳ ಕತ್ತು ಕತ್ತುಕೊಯ್ದು ಹತ್ಯೆ ಮಾಡಿದ್ದಾನೆ.
ಇದಾದ ಬಳಿಕ ಮುರುಗೇಶ್ ಸಹ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಬಗ್ಗೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದೆ.
ಅನುಮಾನ ಸಂಬಂಧದೊಳಗೆ ಅಸಮಾಧಾನವನ್ನು ಉಂಟು ಮಾಡುತ್ತದೆ. ಅದರಲ್ಲೂ ಸಂಗಾತಿ ಮೇಲಿನ ಅನುಮಾನ ಗಂಡನನ್ನು ಒಮ್ಮೆ ಆವರಿಸಿದರೆ ಆದು ಸುಲಭವಾಗಿ ಹೋಗುವುದಿಲ್ಲ. ಅನುಮಾನಕ್ಕೆ ಔಷಧಿಯೇ ಇಲ್ಲ ಎನ್ನುವ ಗಾದೇ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ