ಪ್ರೀತಿಸಿ ಕೈಕೊಟ್ಟ ಶಬ್ನಮ್, ಆಕೆ ಕೊಂದು ತಾನೂ ಸುಸೈಡ್ ಮಾಡಿಕೊಂಡ!

Published : May 31, 2021, 04:11 PM IST
ಪ್ರೀತಿಸಿ ಕೈಕೊಟ್ಟ ಶಬ್ನಮ್, ಆಕೆ ಕೊಂದು ತಾನೂ ಸುಸೈಡ್ ಮಾಡಿಕೊಂಡ!

ಸಾರಾಂಶ

* ಮಾಜಿ ಗೆಳತಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಪಾಗಲ್ ಪ್ರೇಮಿ  *  ಗೆಳತಿ ಕೆಲವೇ ದಿನದ ಹಿಂದೆ ಬೇರೆ ವ್ಯಕ್ತಿಯ ಜತೆ ಮದುವೆಯಾಗಿದ್ದರು *  ನವದಂಪತಿ ತೆರಳುತ್ತಿದ್ದ ಕಾರು ಅಡ್ಡ ಹಾಕಿದ

ಪಾಟ್ನಾ(ಮೇ 31)  ಬೇರೆ ಹುಡುಗನ ಮದುವೆಯಾದ ಮಾಜಿ ಪ್ರೇಯಸಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಪ್ರೇಮಿ ತಾನೂ ಶೂಟ್ ಮಾಡಿಕೊಂಡಿದ್ದಾನೆ.

ಭಾನುವಾರ ಸಂಜೆ ಘಟನೆ ನಡೆದಿದೆ. ಪ್ರೇಯಸಿ ಇತ್ತೀಚೆಗೆ ಬೇರೆ ಹುಡುಗನ ಮದುವೆಯಾಗಿದ್ದಳು. ಬಿಹಾರದ ನಳಂದಾ ಜಿಲ್ಲೆಯ ರಾಹುಯಿ ಪೊಲೀಸ್ ಠಾಣೆಯ ಭಾಗನ್ ಬಿಘಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.  

ಲಿವ್ ಇನ್ ಸಂಗಾತಿಯನ್ನೂ ಪಬ್ಲಿಕ್ ಟಾಯ್ಲೆಟ್ ನಲ್ಲೇ ಹತ್ಯೆ ಮಾಡಿದ

ಮೃತರನ್ನು ರಾಜ್‌ಪಾಲ್ ಪಾಸ್ವಾನ್ ಅಲಿಯಾಸ್ ರೆಹಾನ್ (25) ಪಾಗಲ್ ಪ್ರೇಮಿ. ಮಾಜಿ ಗೆಳತಿ ಶಬ್ನಮ್ ಕುಮಾರಿ (23)  ಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾನೆ.  ಶಬ್ನಮ್ ಅವರು ಮೇ 26 ರಂದು (ಬುಧವಾರ) ಶಹಪುರ್ ಗ್ರಾಮದ ವಿಕಾಸ್ ಎಂಬಾತನನ್ನು  ಮದುವೆಯಾಗಿದ್ದರು.

ಭಾನುವಾರ ಹೊಸ ಜೋಡಿ ಕಾರಿನಲ್ಲಿ ತೆರಳುತ್ತಿದ್ದಾಗ ಅವರನ್ನು ಪಾಗಲ್ ಪ್ರೇಮಿ ಅಡ್ಡ ಹಾಕಿದ್ದಾನೆ.  ಶಬ್ನಮ್  ಮೇಲೆ ಒತ್ತಡ ಹಾಕಿದ್ದು ನೀನು ನನ್ನ ಜತೆ ಬಾ ಎಂದು ಒತ್ತಾಯ ಮಾಡಿದ್ದಾನೆ. ಆಕೆ ಒಪ್ಪದಿದ್ದಾಗ ಶೂಟ್ ಮಾಡಿದ್ದಾನೆ. ಈ ಹಿಂದೆ ಇಬ್ಬರು ಒಬ್ಬರನ್ನೊಬ್ಬರು ಪ್ರೇಮಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ವೇಳೆಗಾಗಲೇ ಶಬ್ನಮ್ ಮೃತಪಟ್ಟಿದ್ದಳು.  ರಾಜ್‌ಪಾಲ್  ನನ್ನು ಪಾಟ್ನಾಕ್ಕೆ ಕರೆದೊಯ್ಯುವ ಯತ್ನ ಮಾಡಿದರೂ ಆತ ಸಹ ದಾರಿಯಲ್ಲೇ ಪ್ರಾಣ ಬಿಟ್ಟ. ಪೊಲೀಸರು ಘಟನಾ ಸ್ಥಳದಿಂದ ದೇಸಿ ನಿರ್ಮಿತ ಪಿಸ್ತೂಲ್ ವಶಕ್ಕೆ  ಪಡೆದುಕೊಂಡಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾತ್ರಿಯೆಲ್ಲಾ ನಿದ್ದೆಗೆಡಿಸುತ್ತಿದ್ದ ಭೂತ: ದೆವ್ವದ ಕಾಟ ತಾಳದೇ ಠಾಣೆಗೆ ಬಂದು ಕೊ*ಲೆಗಾರ ಶರಣು
ನನ್​ ಹೆಂಡ್ತಿಗೆ ಈಗ್ಲೇ 7 ಮದ್ವೆಯಾಗಿದೆ, ಕಾಪಾಡಿ ಎಂದು ಹೈಕೋರ್ಟ್​ಗೆ ಬಂದ ಪತಿ- ಏನಿದು ಶಾಕಿಂಗ್​ ಸ್ಟೋರಿ