ಇಬ್ಬರು ಹೆಣ್ಣು ಮಕ್ಕಳನ್ನು ಮಾತ್ರ ಹೊಂದಿದ್ದ ತಂದೆ ಮಗನನ್ನು ಹೊಂದಲು ಸ್ಥಳೀಯ ಮಾಂತ್ರಿಕನ ಮೊರೆ ಹೋದರು. ಮತ್ತು ಅವರ ಸಲಹೆಯ ಮೇರೆಗೆ ಸ್ವಂತ ಹೆಣ್ಣು ಮಕ್ಕಳನ್ನೇ ರೇಪ್ ಮಾಡಿದ್ದಾರೆ.
ಪಾಟ್ನಾ (ಸೆಪ್ಟೆಂಬರ್ 16, 2023): ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಇನ್ನು, ತಂದೆಯೇ ಮಕ್ಕಳ ಮೇಲೆ ರೇಪ್, ಲೈಂಗಿಕ ಕಿರುಕುಳದಂತಹ ನೀಚ ಪ್ರಕರಣಗಳು ಸಹ ವರದಿಯಾಗ್ತಿರುತ್ತದೆ. ಇದೇ ರೀತಿ, ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಸತತ 10 ವರ್ಷ ತಂದೆ ಅತ್ಯಾಚಾರ ಮಾಡಿರುವ ಘೋರ ಘಟನೆ ಬಿಹಾರದಲ್ಲಿ ನಡೆದಿದೆ.
ಗಂಡು ಮಗು ಆಗ್ಲಿ ಅಂತ ಮಾಂತ್ರಿಕರೊಬ್ಬರ ಸಲಹೆಯ ಮೇರೆಗೆ ವ್ಯಕ್ತಿಯೊಬ್ಬ ತನ್ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ವರ್ಷಗಳ ಕಾಲ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ನಡೆದಿದೆ. ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ಈ ಪ್ರಕರಣ ವರದಿಯಾಗಿದ್ದು, ಸಾಮಾಜಿಕ ವಿಜ್ಞಾನಿಗಳು ಈ ಬಗ್ಗೆ ಆತಂಕಗೊಂಡಿದ್ದಾರೆ.
ಇನ್ನು, ಈ ಪ್ರಕರಣ ಹಳೆಯದಾಗಿದ್ದು, ಬಕ್ಸಾರ್ ಜಿಲ್ಲೆಯ ಸ್ಥಳೀಯ POCSO ನ್ಯಾಯಾಲಯವು ಆರೋಪಿ ತಂದೆ ಬಿನೋದ್ ಕುಮಾರ್ ಸಿಂಗ್ ಮತ್ತು ತಂತ್ರಿ ಅಜಯ್ ಕುಮಾರ್‌ಗೆ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೆ, ಅತ್ಯಾಚಾರಕ್ಕೆ ಪ್ರೇರೇಪಿಸಿದ ಸಂತ್ರಸ್ತ ಹೆಣ್ಣುಮಕ್ಕಳ ತಾಯಿ ಹಾಗೂ ಚಿಕ್ಕಮ್ಮನಿಗೆ 20 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಇದನ್ನು ಓದಿ: ಬ್ರೇಕಪ್ಗೆ ಒಪ್ಪದಿದ್ದಕ್ಕೆ ಪ್ರಿಯಕರನ ಹತ್ಯೆ: ವಿಷ ನೀಡಿದ್ದ ಗ್ರೀಷ್ಮಾ ಕಾಟಕ್ಕೆ ಬೇಸತ್ತ ಕೈದಿಗಳು!
ಕಳೆದ ಒಂದು ದಶಕದಿಂದ ಅಪ್ರಾಪ್ತ ಸಹೋದರಿಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿತ್ತು. ಬಳಿಕ ಸಂತ್ರಸ್ತ ಬಾಲಕಿಯರು ಕೊನೆಗೂ ಪೊಲೀಸರಿಗೆ ವಿಷಯ ತಿಳಿಸಿದ್ದು, ನಂತರ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು, ಈ ಬಗ್ಗೆ ಗುರುವಾರ ಪ್ರತಿಕ್ರಿಯೆ ನೀಡಿದ ಸಾಮಾಜಿಕ ವಿಜ್ಞಾನಿ ಪ್ರೊಫೆಸರ್ ಸಚೀಂದ್ರ ನಾರಾಯಣ್, ಇಂತಹ ಘಟನೆ ಸಾಕಷ್ಟು ಆತಂಕಕಾರಿಯಾಗಿದ್ದು, ಸೂಕ್ತ ಕ್ರಮ ಕೈಗೊಳ್ಳದ ಹೊರತು ಧಾರ್ಮಿಕ ಸಾಮಾಜಿಕ ಮೌಲ್ಯಗಳನ್ನು ನಾಶಪಡಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪಿತೃಪ್ರಧಾನ ಮೌಲ್ಯ ವ್ಯವಸ್ಥೆಗೆ ಮಹಿಳೆಯರು ಸಾಕಷ್ಟು ಸವಾಲು ಹಾಕುವವರೆಗೂ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. "ಇದು (ಘಟನೆ) ಲಿಂಗ ತಾರತಮ್ಯವಲ್ಲ; ಬದಲಿಗೆ ಇದು ಅಸ್ತಿತ್ವದಲ್ಲಿರುವ ಪಿತೃಪ್ರಭುತ್ವದ ವ್ಯವಸ್ಥೆಯ ಫಲಿತಾಂಶವಾಗಿದೆ, ಮತ್ತು ಇದನ್ನು ಮಹಿಳೆಯರೇ ಪ್ರಶ್ನಿಸುವವರೆಗೆ, ಅಂತಹ ವಿಷಯಗಳು ಮುಂದುವರಿಯುತ್ತವೆ" ಎಂದು ಮತ್ತೊಬ್ಬ ಸಾಮಾಜಿಕ ವಿಜ್ಞಾನಿ ಪ್ರೊಫೆಸರ್ ಬಿ. ಎನ್. ಪ್ರಸಾದ್ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಅರೇಬಿಕ್ ಕಾಲೇಜಲ್ಲಿ ಉಗ್ರ ತರಬೇತಿ: ದೇಶದ 30 ಸ್ಥಳಗಳಲ್ಲಿ ಎನ್‌ಐಎ ರೇಡ್; ಡಿಎಂಕೆ ಕೌನ್ಸಿಲರ್ ಮನೆ ಮೇಲೂ ಶೋಧ
ಹೆಣ್ಣುಮಕ್ಕಳು ಬೇರೆಯವರ ಸಂಪತ್ತು ಮತ್ತು ಸಂಪನ್ಮೂಲಗಳನ್ನು ಕ್ಷೀಣಿಸುತ್ತಾರೆ. ಆದರೆ ಪುತ್ರರು ತಂದೆಯ ಆಸ್ತಿಯ ನೈಸರ್ಗಿಕ ವಾರಸುದಾರರು ಎಂಬುದು ಸಾಮಾನ್ಯ ನಂಬಿಕೆಯಾಗಿದೆ. ಹಾಗೂ, ಪುತ್ರರು ತಂದೆಯ ಆಸ್ತಿಯ ನೈಸರ್ಗಿಕ ವಾರಸುದಾರರು ಮತ್ತು ಅವರ ಹೆತ್ತವರ ಚಿತೆಗೆ ಬೆಂಕಿ ಇಡುವ ವಿಶೇಷ ಹಕ್ಕನ್ನು ಹೊಂದಿದ್ದಾರೆ ಎಂದು ಪರಿಗಣಿಸುತ್ತಾರೆ ಎಂದೂ ಬಿ. ಎನ್. ಪ್ರಸಾದ್ ಗಮನಿಸಿದರು.
ಇಬ್ಬರು ಹೆಣ್ಣು ಮಕ್ಕಳನ್ನು ಮಾತ್ರ ಹೊಂದಿದ್ದ ಆರೋಪಿ ತಂದೆ 2012ರಲ್ಲಿ ಮಗನನ್ನು ಹೊಂದಲು ಸ್ಥಳೀಯ ಮಾಂತ್ರಿಕನ ಮೊರೆ ಹೋದರು. ಮತ್ತು ಅವರ ಸಲಹೆಯ ಮೇರೆಗೆ ಸ್ವಂತ ಹೆಣ್ಣು ಮಕ್ಕಳನ್ನೇ ರೇಪ್ ಮಾಡಿದ್ದಾರೆ. ಬಳಿಕ, ಗಂಡು ಮಗು ಆದರೂ ಸಹ, ಆತನ ಜೀವಕ್ಕೆ ಆತಂಕ ಇದೆ. ಈ ಹಿನ್ನೆಲೆ ರೇಪ್ ಮಾಡೋದ್ನು ಮುಂದುವರಿಸಬೇಕೆಂದು ಮಾಂತ್ರಿಕ ಸಲಹೆ ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ, ಮಾಂತ್ರಿಕ ಸಹ ಹುಡುಗಿಯರ ಮೇಲೆ ಅತ್ಯಾಚಾರ ಮಾಡಲು ಪ್ರಾರಂಭಿಸಿದನು.
ಇದನ್ನೂ ಓದಿ: ಹೆಂಡ್ತಿ ಮೇಲೆ ಅನುಮಾನ: ಗರ್ಭಿಣಿ ಪತ್ನಿ, ಮಗಳನ್ನೇ ಕೊಲೆ ಮಾಡಿದ ಯೋಧ
ಬೇಸತ್ತ ಸಹೋದರಿಯರು ಕಳೆದ ವರ್ಷ ಮೇ ತಿಂಗಳಲ್ಲಿ ತಮ್ಮ ಮನೆಯಿಂದ ಓಡಿಹೋದರು ಮತ್ತು ಸ್ಥಳೀಯ ಪೊಲೀಸರಿಗೆ ವಿಷಯ ಮುಟ್ಟಿಸಿದರು. ಅಂತಿಮವಾಗಿ ಎಲ್ಲಾ ಆರೋಪಿಗಳನ್ನು ಜೈಲಿಗೆ ಹಾಕಲಾಗಿದೆ.
ಇದನ್ನೂ ಓದಿ: ವಿಮಾನದ ಲೈಟ್ ಆಫ್ ಆಗ್ತಿದ್ದಂತೆ ಮಹಿಳೆಗೆ ಲೈಂಗಿಕ ಕಿರುಕುಳ: ಅಸಭ್ಯವಾಗಿ ಮುಟ್ತಿದ್ದ ಕಾಮಪಿಶಾಚಿ