ಜಮೀನಿನಲ್ಲಿ ಮಲಗಿದ್ದ ವೇಳೆ ಶಿವಯೋಗಪ್ಪನ ಕುತ್ತಿಗೆ ಕೊಯ್ದು ಪರಾರಿಯಾದ ದುಷ್ಕರ್ಮಿಗಳು. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದಲ್ಲಿ ನಡೆದ ಘಟನೆ.
ಇಂಡಿ(ಸೆ.16): ಜಮೀನಿನಲ್ಲಿ ಮಲಗಿದ್ದ ವೃದ್ಧನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಶಿವಯೋಗಪ್ಪ ಬಡಿಗೇರ (55) ಹತ್ಯೆಯಾದ ವ್ಯಕ್ತಿ. ಜಮೀನಿನಲ್ಲಿ ಮಲಗಿದ್ದ ವೇಳೆ ಶಿವಯೋಗಪ್ಪನ ಕುತ್ತಿಗೆ ಕೊಯ್ದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಕಿರುಕುಳ ತಾಳದೇ ತವರುಮನೆ ಸೇರಿದ್ದ ಪತ್ನಿಯನ್ನ ಗುಂಡು ಹಾರಿಸಿ ಕೊಂದ ಪತಿ!
ಹತ್ಯೆಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಕುರಿತು ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.