Bengaluru: 2 ಕೋಟಿ ಬೆಲೆಯ 171 ದುಬಾರಿ ವಾಚ್‌ ಕದ್ದಿದ್ದವ ಅರೆಸ್ಟ್‌

By Kannadaprabha News  |  First Published Jan 14, 2022, 6:38 AM IST

*   10 ವರ್ಷದಿಂದ ದುಬಾರಿ ವಾಚ್‌ಗಳನ್ನೇ ಕದಿಯುತ್ತಿದ್ದ
*   ದಶಕಗಳಿಂದ ವಾಚ್‌ ಕದಿಯುತ್ತಿದ್ದ ಗ್ಯಾಂಗ್‌
*   ಬಿಹಾರ ಓರ್ವನ ಬಂಧನ,  ನಾಲ್ವರು ನಾಪತ್ತೆ
 


ಬೆಂಗಳೂರು(ಜ.14):  ಇಂದಿರಾನಗರದ ನೂರು ಅಡಿ ರಸ್ತೆಯ ವಾಚ್‌ ಶೋರೂಮ್‌ವೊಂದಕ್ಕೆ ನುಗ್ಗಿ ಬೆಲೆಬಾಳು ವಾಚ್‌ಗಳ(Watch) ಕಳವು ಮಾಡಿದ್ದ ಬಿಹಾರ(Bihar) ಮೂಲದ ಆರೋಪಿಯನ್ನು ಇಂದಿರಾನಗರ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ಮಂಗಮ್ಮನ ಪಾಳ್ಯದ ಮದೀನಾನಗರ ನಿವಾಸಿ ಅಖ್ತರ್‌(37) ಬಂಧಿತ. ಆರೋಪಿಯಿಂದ(Accused) ದುಬಾರಿ ಬೆಲೆಯ ರಾರ‍ಯಡೋ, ಲಾಂಗಿನ್ಸ್‌, ಓಮೇಗಾ ಕಂಪನಿಯ ಸುಮಾರು 2 ಕೋಟಿ ಮೌಲ್ಯದ 171 ವಾಚ್‌ಗಳನ್ನು ಜಪ್ತಿ ಮಾಡಲಾಗಿದೆ. ಜ.5ರಂದು ಇಲ್ಲಿನ ನೂರಡಿ ರಸ್ತೆಯ ಜಿಮ್ಸನ್‌ ಟೈಮ್ಸ್‌ ಪ್ರೈ ಲಿ. ಹೆಸರಿನ ಶೋ ರೂಮ್‌ಗೆ ನುಗ್ಗಿ ದುಬಾರಿ ದರ ವಾಚ್‌ಗಳನ್ನು ಕಳವು(Theft) ಮಾಡಲಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ(Arrest). ಈ ಕಳವು ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tap to resize

Latest Videos

undefined

Theft Cases: ಜೇಬಿಗೆ ಕತ್ತರಿ ಹಾಕಿ ಚಿನ್ನಾಭರಣ ಕದ್ದಿದ್ದ 3 ಖದೀಮರ ಬಂಧನ

ಶೋ ರೂಮ್‌ಗಳೇ ಟಾರ್ಗೆಟ್‌!

ಆರೋಪಿಗಳು ಹಗಲು ವೇಳೆಯಲ್ಲಿ ವಾಚ್‌, ಕ್ಯಾಮರಾ, ಮೊಬೈಲ್‌ ಶೋ ರೂಮ್‌ಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ಬಾಗಿಲು ಮೀಟಿ ಕಳವು ಮಾಡುತ್ತಿದ್ದರು. ಬಿಹಾರ ಮೂಲದ ಈ ಗ್ಯಾಂಗ್‌ ಕಳ್ಳತನ ಮಾಡುವ ಸಲುವಾಗಿ ಮಹಾನಗರಗಳಲ್ಲಿ ಬಾಡಿಗೆ ಮನೆ ಮಾಡಿ ಉಳಿದುಕೊಳ್ಳುತ್ತಿದ್ದರು. ಗ್ರಾಹಕರ(Customers) ಸೋಗಿನಲ್ಲಿ ಐಷಾರಾಮಿ ಶೋ ರೂಮ್‌ಗಳಿಗೆ ಭೇಟಿ ನೀಡಿ ಅಲ್ಲಿನ ಭದ್ರತಾ ವ್ಯವಸ್ಥೆ, ಡೋರ್‌ ಸೇರಿದಂತೆ ಪ್ರತಿಯೊಂದನ್ನೂ ಕೂಲಂಕಷವಾಗಿ ಪರಿಶೀಲಿಸುತ್ತಿದ್ದರು. ಬಳಿಕ ಕಳ್ಳತನಕ್ಕೆ ಸ್ಕೆಚ್‌ ಸಿದ್ಧಪಡಿಸಿ, ರಾತ್ರಿ ವೇಳೆ ಕಳವು ಮಾಡಿ ಪರಾರಿಯಾಗುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೇಪಾಳ ಗಡಿಯಲ್ಲಿ ಸೇಲ್‌

ಆರೋಪಿಗಳು ಕದ್ದ ಎಲೆಕ್ಟ್ರಾನಿಕ್‌ ಉಪಕರಣಗಳು, ವಾಚ್‌ಗಳು ಹಾಗೂ ಮೊಬೈಲ್‌ಗಳನ್ನು ಬಿಹಾರ ಹಾಗೂ ನೇಪಾಳದ ಗಡಿಯಲ್ಲಿ(Nepal Border) ಗಿರಾಕಿ ಹುಡುಕಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಆರೋಪಿಗಳು ಕಳ್ಳತನವನ್ನೇ ವೃತ್ತಿ ಮಾಡಿಕೊಂಡು ಬೆಂಗಳೂರು(Bengaluru) ಮಾದರಿಯಲ್ಲಿ ದೇಶದ ವಿವಿಧ ನಗರಗಳಲ್ಲಿ ಕಳವು ಕೃತ್ಯ ಎಸಗಿರುವ ಸಾಧ್ಯತೆಯಿದೆ. ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಬಂಧನದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

ದಶಕದ ಹಿಂದಿನ ಪ್ರಕರಣ ಬೆಳಕಿಗೆ!

ಆರೋಪಿಗಳು 2011 ಮತ್ತು 2012ರಲ್ಲಿ ಅಶೋಕನಗರ, ಕಬ್ಬನ್‌ ಪಾರ್ಕ್ ಮತ್ತು ಕೋರಮಂಗಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್‌ ಮತ್ತು ಕ್ಯಾಮರಾ ಶೋ ರೂಮ್‌ಗೆ ನುಗ್ಗಿ ಲಕ್ಷಾಂತರ ರು. ಮೌಲ್ಯದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಪತ್ತೆಯಾಗಿರಲಿಲ್ಲ. ಈ ಪ್ರಕರಣದ ವಿಚಾರಣೆ ವೇಳೆ ದಶಕದ ಹಿಂದಿನ ಕಳವು ಪ್ರಕರಣಗಳು(Theft Cases) ಪತ್ತೆಯಾಗಿವೆ.

Credit Card Theft: 1 ಲಕ್ಷ ಕಳಕೊಂಡ ಗ್ರಾಹಕನಿಂದ ಸುಲಿಗೆ ಮಾಡಿದ ಬ್ಯಾಂಕಿಗೆ 10 ಸಾವಿರ ರು. ದಂಡ

ಮನೆಗಳುವು ಮಾಡುತ್ತಿದ್ದ ಮೂವರು ಜೈಲ್‌ ಫ್ರೆಂಡ್ಸ್‌ ಮತ್ತೆ ಜೈಲು ಪಾಲು..!

ಜೈಲಿನಲ್ಲಿ(Jail) ಸ್ನೇಹಿತರಾಗಿ ಜಾಮೀನಿನ(Bail) ಮೇಲೆ ಹೊರಬಂದ ಬಳಿಕ ಒಟ್ಟಾಗಿ ನಗರದ ವಿವಿಧೆಡೆ ಮನೆಗಳವು ಮಾಡುತ್ತಿದ್ದ ಮೂವರು ಆರೋಪಿಗಳು(Accused) ಮಾಗಡಿ ರಸ್ತೆ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅಂಧ್ರಪ್ರದೇಶ(Andhra Pradesh) ಮೂಲದ ವೆಂಕಟರಮಣ, ಕೃಷ್ಣಮೂರ್ತಿ ಹಾಗೂ ಬಾಗೇಪಲ್ಲಿ ಮೂಲದ ರಮೇಶ್‌ ಬಂಧಿತರು(Arrest). ಆರೋಪಿಗಳಿಂದ 16.65 ಲಕ್ಷ ಮೌಲ್ಯದ 333 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ಮಾಗಡಿ ರಸ್ತೆ ಪೊಲೀಸ್‌ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಮಹಿಳೆಯೊಬ್ಬರು ಬೆಳಗ್ಗೆ 11.30ರ ಸುಮಾರಿಗೆ ಒಡವೆ ಬಿಚ್ಚಿ ಟೇಬಲ್‌ ಮೇಲಿರಿಸಿ ಸ್ನಾನಕ್ಕೆ ತೆರಳಿದ್ದರು. ಬಳಿಕ ಸ್ನಾನ ಮುಗಿಸಿ ಬಂದು ನೋಡಿದಾಗ ಒಡೆವೆಗಳು ಕಳವುವಾಗಿದ್ದವು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.

click me!