* ಮಾನಸಿಕ ಅಸ್ವಸ್ಥೆ ಮೇಲೆ ನಿರ್ಭಯಾ ಮಾದರಿ ಗ್ಯಾಂಗ್‌ರೇಪ್
* 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ
* ಪ್ರಾಣಾಪಾಯದಿಂದ ಪಾರಾದ ಸಂತ್ರಸ್ತೆ
* ತನಿಖಡಗಡ ವಿಶೇಷ ಪೊಲೀಸ್ ತಂಡ
ಜೈಪುರ(ಜ. 14) ಅಪ್ರಾಪ್ತ ವಯಸ್ಸಿನ ಮಾನಸಿಕ ಅಸ್ವಸ್ಥ ಬಾಲಕಿಯ (Girl) ಮೇಲೆ ಭೀಕರ ಸರಣಿ ಅತ್ಯಾಚಾರ (Gang Rape) ನಡೆಸಿ, ಆಕೆಗೆ ಗುಪ್ತಾಂಗಗಳಿಗೆ ಹಾನಿ ಮಾಡಿರುವ ಭೀಕರ ಘಟನೆಯೊಂದು ರಾಜಸ್ಥಾನದ (Jaipur)ಅಲ್ವಾರ್‌ನಲ್ಲಿ ಬುಧವಾರ ರಾತ್ರಿ ನಡೆದಿದೆ. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ (Hospital) ದಾಖಲಾಗಿದ್ದ ಬಾಲಕಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಸದ್ಯ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ಕುರಿತು ತನಿಖೆಗೆ ಪೊಲೀಸರು ವಿಶೇಷ ತನಿಖಾ ತಂಡ ನಡೆಸಿದ್ದರೆ, ಸಿಎಂ ಅಶೋಕ್ ಗೆಹ್ಲೋಟ್ ಜಿಲ್ಲಾಧಿಕಾರಿಗಳಿಂದ ಘಟನೆ ಕುರಿತು ವರದಿ ಕೇಳಿದ್ದಾರೆ. ಮತ್ತೊಂದೆಡೆ ಬಾಲಕಿಗೆ ನ್ಯಾಯ ದೊರಕಿಸಲು ಹೋರಾಡುವ ಕುರಿತು ಬಿಜೆಪಿ ಸಮಿತಿಯೊಂದನ್ನು ರಚಿಸಿದೆ.
ಏನಾಯ್ತು?: ಬುಧವಾರ ಸಂಜೆಯಿಂದ ಮನೆಯಿಂದ ನಾಪತ್ತೆಯಾಗಿದ್ದ 15-16 ವರ್ಷದ ಬಾಲಕಿಯನ್ನು ನಾಲ್ವರ ಗುಂಪೊಂದು ಸರಣಿ ಅತ್ಯಾಚಾರ ನಡೆಸಿ ಬಳಿಕ ರಾತ್ರಿ ವೇಳೆಗೆ ಫ್ಲೈಓವರ್ ಮೇಲೆ ಇಳಿಸಿ ಹೋಗಿದೆ. ಈ ವೇಳೆ ಸ್ಥಳದಲ್ಲಿದ್ದ ಕೆಲವರು ಗಮನಿಸಿದಾಗ ಬಾಲಕಿ ರಕ್ತದ ಮಡುವಿನಲ್ಲಿ ನೋವಿನಿಂದ ಚೀರುತ್ತಾ ಮಲಗಿದ್ದು ಕಂಡುಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ವೇಳೆ ಆಕೆಯ ಗುಪ್ತಾಂಗಕ್ಕೆ ಭಾರೀ ಘಾಸಿಯಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಆಕೆಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದ್ದು, ಇದೀಗ ಆಕೆಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹುಡುಗಿ ಮಾನಸಿಕ ಅಸ್ವಸ್ಥೆಯಾಗಿರುವ ಕಾರಣ ಆಕೆಯಿಂದ ಘಟನೆಯ ವಿವರ ತಿಳಿಯುವುದು ಕಷ್ಟವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ನಡುವೆ ಸಂತ್ರಸ್ತೆಯ ಕುಟುಂಬಕ್ಕೆ ಶೀಘ್ರ ನ್ಯಾಯ ಒದಗಿಸಲಾಗುವುದು. ಅಲ್ಲಿಯ ತನಕ ಕುಟುಂಬದ ಜವಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ. ಅಪರಾಧಿಗಳನ್ನು ಪತ್ತೆ ಮಾಡಲು ವಿಶೇಷ ಪೋಲೀಸ್ ತಂಡವನ್ನು ರಚಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಪ್ರಸಾದಿ ಲಾ ಮೀನಾ ಹೇಳಿದ್ದಾರೆ.
ಘಟನೆಯಯ ನಂತರ ಸರ್ಕಾರದ ವಿರುದ್ಧ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ, ಕಾಂಗ್ರೆಸ್ ಆಡಳಿತ ಮಹಿಳೆಯರಿಗೆ ಸುರಕ್ಷಿತವಾಗಿಲ್ಲ ಎಂದಿದ್ದಾರೆ. ರಾಜಸ್ಥಾನ ಪ್ರವಾಸದಲ್ಲಿರುವ ಪ್ರಿಯಾಂಕ ಗಾಂಧಿ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ, ‘ನಿಮಗೆ (ಪ್ರಿಯಾಂಕ ಗಾಂಧಿ) ಮಕ್ಕಳ ಅಳು ಕೇಳಿಸುತ್ತಿಲ್ಲವೇ, ನೀವು ಹೇಗೆ ಶಾಂñವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
Woman Murder: ಕಿಟಕಿಯಲ್ಲಿ ಇಣುಕಿದ ಕಿರಾತಕರು, ಪ್ರಶ್ನೆ ಮಾಡಿದ್ದಕ್ಕೆ 3 ಮಕ್ಕಳ ತಾಯಿ ಕೊಂದೇ ಬಿಟ್ಟರು!
ನೈಟ್ ಕರ್ಫ್ಯೂ ವೇಳೆ ಆಟೋ ಹತ್ತಿದ್ದೇ ತಪ್ಪಾಯ್ತು... ಕಿರಾತಕ ಚಾಲಕ!:
ಕೊರೋನಾ (Coronavirus) ನಿಯಂತ್ರಣಕ್ಕೆ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ನೈಟ್ ಕರ್ಫ್ಯೂ(Night Curfew) ಜಾರಿ ಮಾಡಿವೆ. ಆದರೆ ಕಿರಾತಕನೊಬ್ಬ ಇದನ್ನೇ ತನ್ನ ಲಾಭಕ್ಕೆ
ಬಳಸಿಕೊಂಡು ಕ್ರೌರ್ಯ ಮೆರೆದಿದ್ದಾನೆ. ಚಂಡೀಗಢದಿಂದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ 35 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಚಂಡೀಗಢದ ಸೆಕ್ಟರ್ 17ರ ಜನರಲ್ ಪೋಸ್ಟ್ ಆಫೀಸ್ ಬಳಿ ಈ ಘಟನೆ ನಡೆದಿದದ್ದು ಮಹಿಳೆಯನ್ನು ಮೂವರು ಗೃಹರಕ್ಷಕರು ರಕ್ಷಿಸಿದ್ದಾರೆ.
ಆರೋಪಿಯನ್ನು ದಾರುವಾ ಗ್ರಾಮದ ನಿವಾಸಿ 27 ವರ್ಷದ ಜೈ ದೇವ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಂತ್ರಸ್ತ ಮಹಿಳೆ ಸೆಕ್ಟರ್ 17 ಬಸ್ ನಿಲ್ದಾಣಕ್ಕೆ ಆಟೋರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದಳು, ಅಲ್ಲಿಂದ ದೆಹಲಿಗೆ ಬಸ್ ತೆಗೆದುಕೊಳ್ಳಲು ಯೋಜಿಸಿದ್ದಳು ಮಹಿಳೆ ಮೌಲಿ ಜಾಗರಣದಲ್ಲಿ ತನ್ನ ಸ್ನೇಹಿತನನ್ನು ಭೇಟಿಯಾಗಲು ಬಂದಿದ್ದಳು. ಆದರೆ ಭೇಟಿ ಸಾಧ್ಯವಾಗದೆ ಹಿಂದಕ್ಕೆ ಹೊರಟಿದ್ದಳು.
ಆ ಸಮಯದಲ್ಲಿ ಯಾವುದೇ ರೈಲು ಲಭ್ಯವಿಲ್ಲದ ಕಾರಣ ರಾತ್ರಿ 10 ಗಂಟೆಗೆ ಆಟೋವನ್ನು ಸೆಕ್ಟರ್ 17 ಬಸ್ ನಿಲ್ದಾಣಕ್ಕೆ ತೆಗೆದುಕೊಂಡಿದ್ದಾಳೆ. ಆಟೋ ರಿಕ್ಷಾ ಸೆಕ್ಟರ್ 17 ತಲುಪುತ್ತಿದ್ದಂತೆ ಕಿರಾತಕ ಚಾಲಕ ಬೇರೆ ರಸ್ತೆಯಲ್ಲಿ ತೆರಳಿದ್ದಾನೆ. ಮೊದಲಿಗೆ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ. ನಂತರ ಅತ್ಯಾಚಾರ ಎಸಗಿದ್ದ.