ವರ್ತೂರ್‌ ಸಂತೋಷ್‌ ವಿಲಾಸಿ ಜೀವನ, ಅರಮಾಗಿ ಓಡಾಡ್ಕೊಂಡು ಇದ್ದ: ವಕೀಲರ ಪ್ರತಿಕ್ರಿಯೆ

Published : Oct 23, 2023, 03:50 PM ISTUpdated : Oct 24, 2023, 10:42 AM IST
ವರ್ತೂರ್‌ ಸಂತೋಷ್‌ ವಿಲಾಸಿ ಜೀವನ, ಅರಮಾಗಿ ಓಡಾಡ್ಕೊಂಡು ಇದ್ದ: ವಕೀಲರ ಪ್ರತಿಕ್ರಿಯೆ

ಸಾರಾಂಶ

ಹುಲಿ ಉಗುರಿನ ಲಾಕೆಟ್‌ ಧರಿಸಿದ ಆರೋಪದಲ್ಲಿ ಬಂಧನವಾಗಿರುವ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ರಾತ್ರಿ 8 ಗಂಟೆಗೆ ಅರೆಸ್ಟ್ ಮಾಡಿದ್ದರು ಎಂದು ಏಷ್ಯಾನೆಟ್ ಸುವರ್ಣನ್ಯೂಸ್ ಗೆ ಸಂತೋಷ್ ದೊಡ್ಡಪ್ಪ ರಮೇಶ್ ಹೇಳಿಕೆ ನೀಡಿದ್ದಾರೆ.

ಬೆಂಗಳೂರು (ಅ.23): ಹುಲಿ ಉಗುರಿನ ಲಾಕೆಟ್‌ ಧರಿಸಿದ ಆರೋಪದಲ್ಲಿ ಬಂಧನವಾಗಿರುವ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಪ್ರಕರಣಕ್ಕೆ ಸಂಬಂಧಿಸಿದಂತೆ ಏಷ್ಯಾನೆಟ್ ಸುವರ್ಣನ್ಯೂಸ್ ಗೆ ಸಂತೋಷ್ ದೊಡ್ಡಪ್ಪ ರಮೇಶ್ ಮತ್ತು ಸಂತೋಷ್‌ ಪರ ವಕೀಲ ನಟರಾಜ್‌ ಹೇಳಿಕೆ ನೀಡಿದ್ದಾರೆ. ರಾತ್ರಿ 8 ಗಂಟೆಗೆ ಅರೆಸ್ಟ್ ಮಾಡಿದ್ದಾರೆ ಅನ್ನೋದು ಗೊತ್ತಾಯ್ತು. ನಿನ್ನೆ ರಾತ್ರಿ 10 ಗಂಟೆ ನಂತರ ಸಂತೋಷ್ ರನ್ನು ಕರೆತಂದ್ರು. ನಮ್ಮನ್ನು ಬೆಳಗ್ಗೆ ಬರೋದಕ್ಕೆ ಅಧಿಕಾರಿಗಳು ಹೇಳಿದ್ರು. ಸಂತೋಷ್ ಚೆನ್ನಾಗೇ ಇದ್ರು ಏನು ಭಯ ಬಿದ್ದಿರ್ಲಿಲ್ಲ. ಊಟ ತಂದಿದ್ವಿ ಊಟ ಮಾಡಿದ್ರು. ನಂಗೆ ಏನು ವಿಷಯ ಗೊತ್ತಿಲ್ಲ ಅಧಿಕಾರಿಗಳೂ ಕರೆದ್ರು ನಾನು ಬಂದೆ ಅಂತ ನನ್ನ ಬಳಿ ಸಂತೋಷ್‌ ಹೇಳಿದ  ಎಂದು ದೊಡ್ಡಪ್ಪ ಪ್ರತಿಕ್ರಯೆ ನೀಡಿದ್ದಾರೆ.

ಹುಲಿ ಉಗುರು ಧರಿಸಿದ್ಧ ವರ್ತೂರು ಸಂತೋಷ್ ಬಂಧನ, ಬಿಗ್ ಬಾಸ್ ಇತಿಹಾಸದಲ್ಲೇ ಇದು ಮೊದಲು!

ಅವನು ಪೆಂಡೆಂಟ್ ಹಾಕಿದ್ದನ್ನು ನಾನು ಯಾವತ್ತೂ ನೋಡೆ ಇಲ್ಲ ಇವತ್ತು ನೋಡಿದೆ. ಯಾವುದೇ ಫಂಕ್ಷನ್ ನಲ್ಲೂ ಹಾಕಿದ್ದನ್ನು ನಾನು ನೋಡಿಲ್ಲ. ಒಡವೆ ಹಾಕುತ್ತಿದ್ದ, ಆದ್ರೆ ಈ ಪೆಂಡೆಂಟ್ ಹಾಕಿದ್ದು ನಾನು ನೋಡಿಲ್ಲ. ಇದು ಹಾಕೋದು ತಪ್ಪು ಅಂತ ಅವ್ನಿಗೆ ಗೊತ್ತಿಲ್ಲ. ಗೊತ್ತಿದ್ರೆ ಅವ್ನು ಹಾಕ್ತಾ ಇರ್ಲಿಲ್ಲ. ಅವನು ಮನಸಲ್ಲಿ ಏನು ಇಟ್ಕೋಳೊಲ್ಲ ಧೈರ್ಯವಾಗಿ ಮಾತಾಡ್ತಾನೆ. ಜಡ್ಜ್ ಬಳಿ ಪ್ರೊಡ್ಯೂಸ್ ಮಾಡ್ತಾರೆ ಅಂತ ಹೇಳಿದಾರೆ. ಏನು ಗೊತ್ತಿಲ್ಲದೆ ಹುಡುಗ ಅರೆಸ್ಟ್ ಆದ್ನಲ್ಲ ಅಂತ ಬೇಜಾರಿದೆ. ಗೊತ್ತೊ ಗೊತ್ತಿಲ್ದೆನೋ ಮಾಡವ್ನೆ ಏನ್ ಮಾಡೋದು. ಇದು ಕಾನೂನಿನ‌ ವಿರುದ್ದದ ತಪ್ಪು ಅನ್ನೋದು ಗೊತ್ತಿರ್ಲಿಲ್ಲ ಎಂದಿದ್ದಾರೆ.

3 ವರ್ಷಗಳ ಹಿಂದೆ ಹುಲಿ ಉಗುರು ಖರೀದಿಸಿದ ಬಗ್ಗೆ ಬಿಗ್‌ಬಾಸ್‌ ವರ್ತೂರ್‌ ಸಂತೋಷ್‌ ತಪ್ಪೊಪ್ಪಿಗೆ

ಇನ್ನು ವರ್ತೂರು ಸಂತೋಷ್ ಪರ ವಕೀಲ ನಟರಾಜ್ ಏಷ್ಯಾನೆಟ್ ಸುವರ್ಣನ್ಯೂಸ್ ಗೆ ಪ್ರತಿಕ್ರಿಯೆ ನೀಡಿ, ರಾತ್ರಿ 10.30 ಕ್ಕೆ ನನಗೆ ಅವರ ದೊಡ್ಡಪ್ಪ ಕರೆ ಮಾಡಿ ತಿಳಿಸಿದ್ರು. ಈ ರೀತಿ ಕಗ್ಗಲೀಪುರ ಅರಣ್ಯಾಧಿಕಾರಿಗಳು ಬಂಧನ ಮಾಡಿದ್ದಾರೆ ಅಂತ ತಿಳಿಸಿದರು. ರಾತ್ರಿಯೇ ತನಿಖಾಧಿಕಾರಿಯನ್ನು ಭೇಟಿ ಮಾಡಿದೆ. ಬೆಳಗ್ಗೆ 10.30 ಗೆ ಬನ್ನಿ ಅಂದ್ರು. ರಾತ್ರಿ ಸಂತೋಷ್ ರನ್ನು ಭೇಟಿ ಮಾಡಿದ್ದೆ. ವೈಲ್ಡ್‌ ಲೈಫ್ ಪ್ರೊಟೆಕ್ಷನ್ ಆಕ್ಟ್ ಅಡಿಯಲ್ಲಿ ಜಾಮೀನು ರಹಿತ ಸೆಕ್ಷನ್ ಆಗಿದೆ. ಎರಡು ದಿನ ಕೋರ್ಟ್ ರಜೆ ಇದೆ ಹೀಗಾಗಿ ಜಡ್ಜ್ ಮನೆಗೆ ಪ್ರೊಡ್ಯೂಸ್ ಮಾಡ್ತಾರೆ. ಬೆಂಗಳೂರು ಎಸಿಜೆಂಎಂ ಕೋರ್ಟ್ ನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸುತ್ತಾರೆ.

ನಾನು 25 ವರ್ಷದಿಂದಲೂ ಫ್ಯಾಮಿಲಿ ಫ್ರೆಂಡ್ ಕೂಡ ಹೌದು. ಈ ಹಿಂದೆ ಯಾವುದೇ ಪ್ರಕರಣಗಳಿಲ್ಲ. ವಿಲಾಸಿ ಜೀವನ ಇವನದ್ದು ಅರಮಾಗಿ ಓಡಾಡ್ಕೊಂಡು ಇದ್ದ. ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ತಕ್ಷಣವೇ ನಾವು ಕೂಡ ಬೇಲ್ ಗೆ ಅಪ್ಲೈ ಮಾಡುತ್ತೇವೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ
Actor Dileep Case: ಖ್ಯಾತ ನಟಿ ಮೇಲಿನ ಅ*ತ್ಯಾಚಾರ ಆರೋಪ; 8 ವರ್ಷಗಳ ಹೋರಾಟ, ನಟ ದಿಲೀಪ್‌ಗೆ ನಿರಾಳ!