ಫಾಜಿಲ್ ಹತ್ಯೆಗೆ ಸ್ಫೋಟಕ ಟ್ವಿಸ್ಟ್, ಯಾರನ್ನೋ ಟಾರ್ಗೆಟ್ ‌ಮಾಡಿ‌ ಮತ್ತಿನ್ಯಾರನ್ನೋ ಕೊಂದ ಹಂತಕರು

By Suvarna News  |  First Published Jul 30, 2022, 4:56 PM IST

ಫಾಜಿಲ್ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ 21 ಶಂಕಿತರನ್ನ ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ.


ದಕ್ಷಿಣ ಕನ್ನಡ, (ಜುಲೈ, 30): ಸುರತ್ಕಲ್ ಫಾಜಿಲ್ ಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದ್ದು, ಯಾರನ್ನೋ ಟಾರ್ಗೆಟ್ ‌ಮಾಡಿ‌ದ್ದ  ಹಂತಕರು ಮತ್ತಿನ್ಯಾರನ್ನೋ ಹತ್ಯೆ ಮಾಡಿದ್ದಾರೆ.

ಹೌದು..... ಎಸ್‌ಡಿಪಿಐ ಮುಖಂಡನ ಕೊಲೆಗೆ ಸ್ಕೆಚ್‌ ಹಾಕಿದ್ದ ಹಂತಕರು, ಆತ ಮಿಸ್ ಆಗಿದ್ದಕ್ಕೆ ಫಾಜಿಲ್ ನನ್ನು ಕೊಂದಿದ್ದಾರೆ ಎನ್ನುವ ಸ್ಫೋಟ ಅಂಶವನ್ನು ಪೊಲೀಸ್ ತನಿಖೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಫಾಜಿಲ್‌ ಹತ್ಯೆ ಹಂತಕರು ಎಸ್‌ಡಿಪಿಐ ಮುಖಂಡನ ಕೊಲೆಗೆ ಸ್ಕೆಚ್ ಹಾಕಿದ್ದರು.

Tap to resize

Latest Videos

ಫಾಝಿಲ್ ಹತ್ಯೆ: ತನಿಖೆಯಲ್ಲಿ ಲವ್ ಅಫೇರ್ ಅಂಶ ಕಂಡು ಬಂದಿಲ್ಲ: ಮಂಗಳೂರು ಕಮಿಷನರ್ ಶಶಿಕುಮಾರ್ ಸ್ಪಷ್ಟನೆ

ಆ ಎಸ್‌ಡಿಪಿಐ ಮುಖಂಡ  ಪ್ರತಿದಿನ ಅದೇ ಶಾಂಪಿಂಗ್‌ ಮಾಲ್‌ಗಳಿಗೆ ಬರುತ್ತಿದ್ದ. ಅಂದು ಎಸ್‌ಡಿಪಿಐ ಮುಖಂಡ ಬರುತ್ತಿರುವ ಮಾಹಿತಿ ಕಲೆಹಾಕಿದ್ದ ಗ್ಯಾಂಗ್, ಆತನ  ಆಗಮನಕ್ಕಾಗಿ ಕಾಯುತ್ತಿದ್ದರು.  ಆದ್ರೆ ಎಸ್‌ಡಿಪಿಐ ಮುಖಂಡ ಅಲ್ಲಿಗೆ ಬರಲಿಲ್ಲ. ಹೀಗಾಗಿ ಅಲ್ಲೇ ಇದ್ದ ಮೊಬೈಲ್‌ ಅಂಗಡಿ ಮಾಲೀಕನ ಕೊಲೆ ಮಾಡಲು ಸಜ್ಜಾಗಿದ್ದರು. ಮೊಬೈಲ್ ಅಂಗಡಿ ಮಾಲೀಕ ಕೈಗೆ ಸಿಗದ ಕಾರಣ ಪಕ್ಕದಲ್ಲೇ ಇದ್ದ ಫಾಜಿಲ್ ಹತ್ಯೆ ಮಾಡಿದ್ದಾರೆ.

ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಈಗ ದೇಶಾದ್ಯಂತ ಭಾರೀ ಸದ್ದು ಮಾಡಿದೆ.ಈ ನಡುವೆ ಜುಲೈ 28ರಂದು ಫಾಜಿಲ್ ಎನ್ನುವ ಯುವಕನನ್ನು ದುಷ್ಕರ್ಮಿಗಳ ತಂಡ ಚಾಕು ಇರಿದು ಕೊಂದಿದ್ದರು. ಪ್ರವೀಣ ಹತ್ಯೆಗೆ ಬೆಚ್ಚಿ ಬಿದ್ದಿದ್ದ ಕರಾವಳಿಯಲ್ಲಿ ಈಗ ಮತ್ತೆ ನೆತ್ತರು ಹರಿದಿತ್ತು. ಇನ್ನು ಫಾಜಿಲ್ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ 21 ಶಂಕಿತರನ್ನ ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ 21 ಶಂಕಿತರ ವಿಚಾರಣೆ ನಡೆದಿದ್ದು, ಇನ್ನುಷ್ಟು ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ.

ಒಟ್ಟಿನಲ್ಲಿ ಇನ್ಯಾರೋ ಮೇಲಿನ ಸಿಟ್ಟಿಗೆ ಫಾಜಿಲ್ ಬಲಿಯಾಗಿರುವುದು ವಿಪರ್ಯಾಸವೇ ಸರಿ.
 

click me!