ಮಾದಕ ವಸ್ತು ದಂಧೆ: ನೈಜೀರಿಯಾ ಪ್ರಜೆ ಸೇರಿ 15 ಮಂದಿ ಬಂಧನ

By Kannadaprabha NewsFirst Published Jul 27, 2020, 9:05 AM IST
Highlights

ವಿದ್ಯಾರ್ಥಿಗಳೇ ಟಾರ್ಗೆಟ್‌: ನೈಜೀರಿಯಾ ಪ್ರಜೆ ಸೇರಿ 15 ಡ್ರಗ್ಸ್‌ ದಂಧೆಕೋರರ ಸೆರೆ|ಹೋಟೆಲ್‌ನಲ್ಲಿ ರೂಂ ಮಾಡಿಕೊಂಡು ಗಾಂಜಾ ಪಾರ್ಟಿ ಮಾಡುತ್ತಿದ್ದವರ ಬಂಧನ| ವಿದ್ಯಾರ್ಥಿಗಳಿಗೆ ಇವರು ಮನೆ ಬಾಗಿಲಿಗೆ ಮಾದಕ ವಸ್ತು ತಲುಪಿಸುವುದಾಗಿ ಪುಸಲಾಯಿಸುತ್ತಿದ್ದ ಖದೀಮರು|

ಬೆಂಗಳೂರು(ಜು.27): ಮಾದಕ ವಸ್ತು ದಂಧೆಕೋರರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ಪೂರ್ವ ವಿಭಾಗದ ಪೊಲೀಸರು ನೈಜೀರಿಯಾ ಪ್ರಜೆ ಸೇರಿ 15 ಮಂದಿಯನ್ನು ಬಂಧಿಸಿದ್ದಾರೆ.

ಮಾದಕ ವಸ್ತು ಮಾರಾಟದ ಸುಳಿವು ಮೇರೆಗೆ ಶನಿವಾರ ರಾತ್ರಿ ಕಾರ್ಯಾಚರಣೆ ನಡೆಸುವಂತೆ ವಿಭಾಗದ ಎಲ್ಲ ಠಾಣಾಧಿಕಾರಿಗಳಿಗೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ ನೈಜೀರಿಯಾ ಪ್ರಜೆ ಸೇರಿ 15 ಮಂದಿಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಡಾ.ಎಸ್‌.ಡಿ.ಶರಣಪ್ಪ ಹೇಳಿದ್ದಾರೆ.

ಸಿಗರೆಟ್‌ ವಿತರಕನಿಂದ 45 ಲಕ್ಷ ದೋಚಿದ್ದ ದರೋಡೆಕೋರರ ಬಂಧನ

ದಂಧೆಕೋರರು ಪ್ರತ್ಯೇಕವಾಗಿ ವಾಟ್ಸಪ್‌ ಗ್ರೂಪ್‌ ಮಾಡಿಕೊಂಡಿದ್ದರು. ಮನೆಯಲ್ಲಿದ್ದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮನೆ ಬಾಗಿಲಿಗೆ ಹೋಗಿ ಮಾದಕ ವಸ್ತು ಕೊಟ್ಟು ಬರುತ್ತಿದ್ದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮನೆಯಲ್ಲೇ ಕುಳಿತಿದ್ದ ವಿದ್ಯಾರ್ಥಿಗಳಿಗೆ ಇವರು ಮನೆ ಬಾಗಿಲಿಗೆ ಮಾದಕ ವಸ್ತು ತಲುಪಿಸುವುದಾಗಿ ಪುಸಲಾಯಿಸಿದ್ದರು. 

ಈ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಮೊದಲಿಗೆ ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ನೈಜೀರಿಯಾ ಪ್ರಜೆಯನ್ನು ಬಂಧಿಸಿ ಈತನಿಂದ 5 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಯಿತು. ಹೆಣ್ಣೂರು ಠಾಣೆ ಪೊಲೀಸರು ಆನಂದ ಎಂಬುವನನ್ನು ಬಂಧಿಸಿ 600ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಕೆ.ಜೆ.ಹಳ್ಳಿ ಠಾಣೆ ಪೊಲೀಸರು ಸೈಯದ್‌ ನಾಜೀಮ್‌ ಎಂಬುವನಿಂದ 1 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ. ಅಲ್ಲದೆ, ಹೋಟೆಲ್‌ನಲ್ಲಿ ರೂಂ ಮಾಡಿಕೊಂಡು ಗಾಂಜಾ ಪಾರ್ಟಿ ಮಾಡುತ್ತಿದ್ದವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

click me!