ATM ಹಲ್ಲೆಕೋರನಿಗೆ ಕೊನೆಗೂ ಶಿಕ್ಷೆ ಪ್ರಕಟ.. ಘೋರ ಅಪರಾಧಕ್ಕೆ ಎಷ್ಟು ವರ್ಷ?

By Suvarna NewsFirst Published Feb 2, 2021, 5:33 PM IST
Highlights

ಕಾರ್ಪೊರೇಷನ್ ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ ಕೇಸ್ ಆರೋಪಿ ಮಧುಕರ್ ರೆಡ್ಡಿಗೆ 12 ವರ್ಷ ಜೈಲು ಶಿಕ್ಷೆ /ಸಿಸಿಹೆಚ್ 65 ನೇ ಕೋರ್ಟ್ ನ್ಯಾ ರಾಜೇಶ್ವರ ಅವರಿಂದ  ಶಿಕ್ಷೆ ಪ್ರಕಟ/ 2013 ರ ನ.19 ರಂದು ನಡೆದಿದ್ದ ಹಲ್ಲೆ ಪ್ರಕರಣ/ ಎಟಿಎಂ ಒಳಗೆ ಏಕಾಏಕಿ ನುಗ್ಗಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಮಧುಕರ್ ರೆಡ್ಡಿ/ ಹಣ ನೀಡಲು ನಿರಾಕರಿಸಿದ್ದ ಜ್ಯೋತಿ ಉದಯ್ ಮೇಲೆ ಮಾರಣಾಂತಿಕ ಹಲ್ಲೆ / ಹಲ್ಲೆ ಮಾಡಿ ಮೂರು ವರ್ಷ ತಲೆ ಮರೆಸಿಕೊಂಡಿದ್ದ ಮಧುಕರ್ ರೆಡ್ಡಿ 

ಬೆಂಗಳೂರು (ಫೆ 02) ಕೊನೆಗೂ ಎಟಿಎಂ ಹಲ್ಲೆ ಕೋರನಿಗೆ ಶಿಕ್ಷೆ ಪ್ರಕಟ ಆಗಿದೆ.  ಎಟಿಎಂನಲ್ಲಿ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಮೇಲೆ 7 ವರ್ಷಗಳ ಹಿಂದೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದ ಮಧುಕರ್ ರೆಡ್ಡಿ ದೋಷಿ ಎಂದು ಈ ಹಿಂದೆ ತೀರ್ಪು ನೀಡಲಾಗಿದ್ದು ಈಗ ಶಿಕ್ಷೆ ಪ್ರಕಟ  ಮಾಡಲಾಗಿದೆ. 

3 ವರ್ಷದ ಹಿಂದೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಮಧುಕರ್ ರೆಡ್ಡಿ ಅಪರಾಧಿ ಎಂದು ಘೋಷಣೆ ಮಾಡಿದ ಸಿಟಿ ಸಿವಿಲ್ ಕೋರ್ಟ್​ ರೆಡ್ಡಿಗೆ 12 ವರ್ಷಗಳ ಕಾಲ ಜೈಲು ಶಿಕ್ಷೆ  ಪ್ರಕಟಿಸಿದೆ.

2013ರ ನ. 19 ರಂದು ಬೆಂಗಳೂರಿನ ಕಾರ್ಪೋರೇಷನ್ ಸರ್ಕಲ್​ನಲ್ಲಿದ್ದ ಎಟಿಎಂನಲ್ಲಿ ಈ ಹಲ್ಲೆ ನಡೆದಿತ್ತು. ಹಣ ಡ್ರಾ ಮಾಡಲು ಎಟಿಎಂಗೆ ತೆರಳಿದ್ದ ಜ್ಯೋತಿ ಉದಯ್ ಎಂಬ ಮಹಿಳೆ ಮೇಲೆ ಹಲ್ಲೆ ನಡೆದಿತ್ತು. ಎಟಿಎಂನ ಶೆಲ್ಟರ್​ ಎಳೆದುಕೊಂಡು  ಹಲ್ಲೆ ಮಾಡಿದ್ದ ದೃಶ್ಯಾವಳಿ ಲಭ್ಯವಾಗಿತ್ತು. ಈ ಘಟನೆ ನಂತರ ಎಟಿಎಂ ಸೆಕ್ಯೂರಿಟಿಗೆ ಸಂಬಂಧಿಸಿ ಅನೇಕ ಪ್ರಶ್ನೆಗಳು ಎದ್ದಿದ್ದವು.

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಎಟಿಎಂ ಹಲ್ಲೆ ಪ್ರಕರಣ; ಟೈಮ್ ಲೈನ್

2017 ರಲ್ಲಿ ಆಂಧ್ರದ ಮದನಪಲ್ಲಿಯಲ್ಲಿ ರೆಡ್ಡಿಯನ್ನು ಬಂಧಿಸಿ ಕರೆತರಲಾಗಿತ್ತು. ಎಸ್.ಜೆ.ಪಾರ್ಕ್ ಪೊಲೀಸರು  ಚಾರ್ಜ್ ಶೀಟ್ ಸಲ್ಲಿಸಿದ್ದರು. ವಿಚಾರಣೆ ಮುಗಿಸಿದ್ದ ಕೋರ್ಟ್  ಮಧುಕರ್ ಅಪರಾಧಿ ಎಂದು ತೀರ್ಪು ನೀಡಿತ್ತು ಮಧುಕರ್ ರೆಡ್ಡಿಗೆ 12 ವರ್ಷ ಜೈಲು ಶಿಕ್ಷೆ ಘೋಷಿಸಲಾಗಿದ್ದು ಸರ್ಕಾರದ ಪರ ಎಂ.ವಿ.ತ್ಯಾಗರಾಜ್ ವಾದ ಮಂಡಿಸಿದ್ದರು.

ಸೆ.201 ಸಾಕ್ಷಿ ನಾಶ ಪಡಿಸಿದ ಹಿನ್ನೆಲೆಯಲ್ಲಿ ಎರಡು ವರ್ಷ,  ಸೆ.307 ಕೊಲೆ ಯತ್ನ ಪ್ರಕರಣಕ್ಕೆ  10 ವರ್ಷ ಶಿಕ್ಷೆ ವಿಧಿಸಲಾಗಿದೆ. ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಿರುವ ಹಿನ್ನೆಲೆ  7 ವರ್ಷ ಜೈಲಿ ಶಿಕ್ಷೆ ಅನುಭವಿಸಬೇಕಿದೆ ರೆಡ್ಡಿ.

ಆರೋಪಿ ಪತ್ತೆಗೆ ಲಕ್ಷಾಂತರ ರುಪಾಯಿ ವೆಚ್ಚ:  ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಎಸ್‌ಜೆ ಪಾರ್ಕ್ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಸಾಕಷ್ಟುಹುಡುಕಾಟ ನಡೆಸಿದ್ದರು. ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಶೋಧ ಕಾರ್ಯ ನಡೆಸಿದ್ದರು.  4 ಲಕ್ಷ ಖರ್ಚು ಮಾಡಿ ಪ್ರಯತ್ನ ನಡೆಸಿದರೂ ಆರೋಪಿಯ ಹೆಸರು, ಗುರುತು ಯಾವುದೂ ಪತ್ತೆಯಾಗದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಈ ಹಿಂದೆ ‘ಸಿ’ ರಿಪೋರ್ಟ್‌ ಸಲ್ಲಿಸಿದ್ದರು. ಆರೋಪಿ ಪತ್ತೆ ಹಚ್ಚುವ ಹಠಕ್ಕೆ ಬಿದ್ದಿದ್ದ ಪೊಲೀಸ್‌ ಇಲಾಖೆಯು ಸುಳಿವು ನೀಡಿದವರಿಗೆ  12 ಲಕ್ಷ ರು. ಬಹುಮಾನ ನೀಡುವುದಾಗಿ ಘೋಷಣೆ ಮಾಡಿತ್ತು.

click me!