Bengaluru: ವಿಜಯನಗರ ಸಂಚಾರಿ ಪೊಲೀಸ್ ಹೃದಯಾಘಾತಕ್ಕೆ ಬಲಿ: ಇಲ್ಲಿದೆ ನೋವಿನ ನುಡಿ..

By Sathish Kumar KH  |  First Published Aug 5, 2023, 6:21 PM IST

ವಿಜಯನಗರ ಸಂಚಾರಿ ಪೊಲೀಸ್‌ ಠಾಣೆಯ ಹೆಡ್‌ ಕಾನ್ಸ್‌ಸ್ಟೇಬಲ್‌ ಶುಕ್ರವಾರ ಕೆಲಸ ಮುಗಿಸಿಕೊಂಡು ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.


ಬೆಂಗಳೂರು (ಆ.05): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಪೊಲೀಸರ ಸಂಖ್ಯೆ ಹೆಚ್ಚಳ ಆಗುತ್ತಿದೆ. ಶುಕ್ರವಾರ ಕೆಲಸ ಮುಗಿಸಿಕೊಂಡು ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿಯೇ ವಿಜಯನಗರ ಸಂಚಾರಿ ಪೊಲೀಸ್‌ ಠಾಣೆಯ ಹೆಡ್‌ ಕಾನ್ಸ್‌ಸ್ಟೇಬಲ್‌ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮತ್ತೊಬ್ಬ ಪೊಲೀಸ್ ನಿಧನವಾಗಿದ್ದಾರೆ. ವಿಜಯ ನಗರ ಸಂಚಾರಿ ಠಾಣೆಯ ಮುಖ್ಯ ಪೇದೆ ನವೀನ್ ಕುಮಾರ್ ಮೃತ ವ್ಯಕ್ತಿಯಾಗಿದ್ದಾರೆ. ಮನೆಯಲ್ಲಿ ರಾತ್ರಿ ಮಲಗಿದ್ದ ವೇಳೆ ಹೃದಯಾಘಾವಾಗಿರುವ ಸಾಧ್ಯತೆಯಿದೆ. ಹಾಸನ ಮೂಲದ ಹೆಡ್ ಕಾನ್ಸ್ ಟೇಬಲ್ ನವೀನ್ ಕುಮಾರ್ ಸಾವಿನ ಬಗ್ಗೆ, ಮರಣೋತ್ತರ ಪರೀಕ್ಷೆ ಬಳಿಕ ನಿಖರ  ಕಾರಣ ತಿಳಿಯಲಿದೆ. ಅತ್ತಿಗುಪ್ಪೆ ಮನೆಯಲ್ಲಿ ಮಲಗಿದ್ದಾಗ  ಹೃದಯಾಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. 

Latest Videos

undefined

Bengaluru: ಕರ್ತವ್ಯನಿರತ ಟ್ರಾಫಿಕ್‌ ಎಎಸ್‌ಐ ಹೃದಯಾಘಾತಕ್ಕೆ ಬಲಿ

ಮೃತ ನವೀನ್‌ ಶುಕ್ರವಾರ ಎಂದಿನಂತೆ ತಮ್ಮ ಕಾರ್ಯವನ್ನು ಮುಗಿಸಿ ಮನೆಗೆ ಹೋಗಿ ಮಲಗಿದ್ದಾರೆ. ಆದರೆ, ಈ ವೇಳೆ ಅವರೊಂದಿಗೆ ಮನೆಯಲ್ಲಿ ಯಾರೂ ಇರಲಿಲ್ಲ. ಆದ್ದರಿಂದ, ಮಲಗಿದ್ದ ಸ್ಥಿತಿಯಲ್ಲಿಯೇ ನವೀನ್‌ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಘಟನೆ ಕುರಿತು ಚಂದ್ರಲೇಔಟ್ ಪೊಲೀಸ್‌ ಠಾಣೆಯಲ್ಲಿ ಯುಡಿಆರ್ ಅಡಿ ಪ್ರಕರಣ ದಾಖಲು ಮಾಡಲಾಗಿದೆ. 

ಪೊಲೀಸರ ನೋವಿನ ನುಡಿ ಇಲ್ಲಿದೆ ನೋಡಿ: ಪೊಲೀಸರ ಸಾವಿನ ಕುರಿತು ಬರೆದುಕೊಂಡ ಸಂಭಾಷಣೆ ಎಲ್ಲರ ಮನಸ್ಸಿಗೂ ನಾಟುವಂತಿದೆ. ಪೊಲೀಸರು ಸಮಾಜದಲ್ಲಿ ಹೇಗೆಲ್ಲಾ ಕೆಲಸ ಮಾಡಿ ಕಷ್ಟ ಅನುಭವಿಸುತ್ತಾರೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. 
" ಸುರಿವ ಮಳೆಯಲ್ಲಿ ರಸ್ತೆಯಲ್ಲಿ ನಿಂತಾಗ ಸೈಡಿಗೆ ಬಾ ಎನ್ನಲಿಲ್ಲ... ಗುಡುಗು ಮಿಂಚಿನ ನಡುವೆ ಬೆದರಿ ನಡುಗುವಾಗ ಬೆಂಬಲಕ್ಕೂ ಬಾರಲಿಲ್ಲ... ಎಲ್ಲಾ ಮುಗಿದ ಮೇಲೆ Rip..ಅಂತೆ. 
ಆರೋಗ್ಯ ಕೈ ಕೊಟ್ಟಾಗ ಆಸ್ಪತ್ರೆಯಲ್ಲಿ ಆರೋಗ್ಯ ಭಾಗ್ಯ ಯೋಜನೆಯೇ ಇರಲಿಲ್ಲ, ಕುಟುಂಬದವರಿಗೆ ಕಷ್ಟವೆಂದಾಗ ಕಣ್ಣೊರೆಸಲು ಕರ್ತವ್ಯದಿಂದ ಬಿಡುಗಡೆಯೇ ಸಿಗಲಿಲ್ಲ. ಎಲ್ಲಾ ಮುಗಿದ ಮೇಲೆ Rip..ಅಂತೆ.
ವಾರಕ್ಕೊಮ್ಮೆ ಸಾರ್ವಜನಿಕ ಸಂಪರ್ಕ ಸಭೆ ನಡೆಸುವಾಗ ಪೊಲೀಸರ ಸಭೆಗೆ ಸಮಯವೇ ಇರಲಿಲ್ಲ, ಸಾರ್ವಜನಿಕವಾಗಿ ಪೊಲೀಸರ ಪರವಾಗಿ ಎಂದೂ ಧ್ವನಿ ಎತ್ತಲಿಲ್ಲ, ಎಲ್ಲಾ ಮುಗಿದ ಮೇಲೆ Rip..ಅಂತೆ.
ಹೃದಯಾಘಾತವಾತವಾಗುತ್ತದೆ ಎಂದು ಸಾರಿ ಸಾರಿ ಹೇಳಿದರೂ ಕ್ಯಾಮರಾ ಧರಿಸಬೇಕಂತೆ, ಕ್ಯಾಮರಾ ಮೇಲೆ ಇಟ್ಟಿರುವ ನಂಬಿಕೆ ಪೊಲೀಸರ ಮೇಲೆ ಇಲ್ಲವಂತೆ, ಎಲ್ಲಾ ಮುಗಿದ ಮೇಲೆ Rip..ಅಂತೆ" ಎಂದು ಪೊಲೀಸರ ಸ್ನೇಹಿತನೊಬ್ಬ ಬರೆದುಕೊಂಡಿದ್ದು, ಈಗ ವೈರಲ್‌ ಆಗುತ್ತಿದೆ. 

ಕಳೆದ ತಿಂಗಳು ಟ್ರಾಫಿಕ್‌ ಎಎಸ್‌ಐ ಹೃದಯಾಘಾತಕ್ಕೆ ಬಲಿ: 
ಬೆಂಗಳೂರು (ಜು.06): ಸಿಲಿಕಾನ್‌ ಸಿಟಿ ಈಗ ಟ್ರಾಫಿಕ್‌ ಸಿಟಿಯಾಗಿಯೂ ಬೆಳೆಯುತ್ತಿದೆ. ಇಲ್ಲಿ ಸಂಚಾರಿ ಪೊಲೀಸರಾಗಿ ಕಾರ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್‌ ಎಎಸ್‌ಐ ರಾಮಾಂಜಿನಯ್ಯ ಕರ್ತವ್ಯನಿರತರಾಗಿದ್ದ ಸಮಯದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ ದುರ್ಘಟನೆ ನಡೆದಿತ್ತು. ಬೆಂಗಳೂರಿನಲ್ಲಿ ಕರ್ತವ್ಯ ನಿರತ ಎಎಸ್ಐ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತ ಎಎಸ್ಐ ಅವರನ್ನು ರಾಮಾಂಜನಯ್ಯ ಆಗಿದ್ದಾರೆ. ಎಂದಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಟೀ ಅಂಗಡಿ ಬಳಿ ಹೋದಾಗ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದಿದ್ದಾರೆ. 

Tumakuru: ಕರ್ತವ್ಯ ನಿರತ ಎಎಸ್‌ಐ ಹೃದಯಾಘಾತದಿಂದ ಸಾವು!

ಇನ್ನು ಎಎಸ್‌ಐ ಬಿದ್ದ ಕೆಲವೇ ಕ್ಷಣಗಳಲ್ಲಿ ಸ್ಥಳದಲ್ಲಿಯೇ ಎಎಸ್‌ಐ ಸಾವನ್ನಪ್ಪಿದ್ದಾರೆ. ಇನ್ನು ಹಲಸೂರು ಗೇಟ್ ಸಂಚಾರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಾಮಾಂಜನಯ್ಯ ಕರ್ತವ್ಯದ ವೇಳೆ ದಣಿವಾದ್ದರಿಂದ ಬಸವೇಶ್ವರ ನಗರದ ಟೀ ಅಂಗಡಿ ಬಳಿಗೆ ಬಂದಿದ್ದಾರೆ. ಆದರೆ, ಅಲ್ಲಿಯೂ ನಿಂತುಕೊಳ್ಳಲಾಗದೇ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ ಇನ್ನು ಮೃತ ಸಂಚಾರಿ ಎಎಸ್‌ಐ ರಾಮಾಂಜನಯ್ಯ ಅವರು ರಾಮನಗರ ಮೂಲದವರಾಗಿದ್ದಾರೆ.

click me!