ಕುವೆಂಪು ಮನೆಗೆ ಪಿಕ್‌ನಿಕ್‌ ಹೊರಟು ಪಥ ಬದಲಿಸಿದ ಬೆಂಗಳೂರು ಟೆಕ್ಕಿ ನೀರಲ್ಲಿ ಮುಳುಗಿ ದಾರುಣ ಸಾವು

By Gowthami K  |  First Published Aug 23, 2024, 4:15 PM IST

ಶಿವಮೊಗ್ಗದ ಸಾಗರ ತಾಲೂಕಿನಲ್ಲಿ 22 ವರ್ಷದ ಬೆಂಗಳೂರು ಮೂಲದ ಎಂಜಿನಿಯರ್ ಕುಶಾಲ್ ಸ್ನೇಹಿತರೊಂದಿಗೆ ಪಿಕ್ನಿಕ್‌ಗೆ ತೆರಳಿದ್ದಾಗ ಚಂಪಕ ಸರಸುವಿನಲ್ಲಿ ಈಜುವಾಗ ಮುಳುಗಿ  ಮೃತಪಟ್ಟಿದ್ದಾರೆ.


ಸಾಗರ (ಆ.23): ಶಿವಮೊಗ್ಗದ ಸಾಗರ ತಾಲೂಕಿನಲ್ಲಿ ದುರಂತವೊಂದು ಸಂಭವಿಸಿದ್ದು, ಪಿಕ್ನಿಕ್‌ಗೆ ತೆರಳಿದ್ದ ಬೆಂಗಳೂರಿನ ಯುವ ಎಂಜಿನಿಯರ್‌ ಪ್ರಾಣ ಕಳೆದುಕೊಂಡಿದ್ದಾರೆ. 22 ವರ್ಷದ ಕುಶಾಲ್ ಎಂಬುವವರು ಆನಂದಪುರದ ಬಳಿಯ ಚಂಪಕ ಸರಸುವಿನಲ್ಲಿ ಸ್ನೇಹಿತರೊಂದಿಗೆ ರಜಾ ದಿನ ಕಳೆಯಲು ಪ್ರಯಾಣಿಸಿದ್ದರು. ಕುಶಾಲ್ ಅವರ ಸ್ನೇಹಿತರಾದ ಸಾಯಿ ರಾಮ್ ಮತ್ತು ಯಶವಂತ್ ಬೆಂಗಳೂರಿನಿಂದ ರಾಷ್ಟ್ರಕವಿ ಕುವೆಂಪು ಅವರ ಮನೆಗೆ ಪ್ರವಾಸವನ್ನು ಆಯೋಜಿಸಿದ್ದರು. ಶಿವಮೊಗ್ಗವನ್ನು ಸಮೀಪಿಸುತ್ತಿದ್ದಂತೆ, ಆನಂದಪುರ ಸಮೀಪ ಚಂಪಕ ಸರಸು ಎಂಬ ಉತ್ತಮ ಸ್ಥಳವಿದೆ ನೋಡಿಕೊಂಡು ಬನ್ನಿ ಎಂದು ಸ್ಥಳೀಯರು ಹೀಗಾಗಿ ಅಲ್ಲಿಗೆ ತೆರಳಿದರು.

ಬೆಂಗಳೂರಲ್ಲಿ ನಿರ್ಮಾಣವಾಗಲಿದೆ ಏಷ್ಯಾದ ಅತಿ ಎತ್ತರದ ಸ್ಕೈಡೆಕ್, ಏನೆಲ್ಲಾ ಸೌಲಭ್ಯಗಳಿರಲಿದೆ?

Tap to resize

Latest Videos

undefined

ಆ ಪ್ರದೇಶಕ್ಕೆ ಹೋದ ಬಳಿಕ ಗುಂಪು ಫೋಟೋ ಶೂಟ್‌ನಲ್ಲಿ ತೊಡಗಿತು ಮತ್ತು ಚಂಪಕ ಸರಸುವಿನಲ್ಲಿ ಕೆಲ ಸ್ಥಳೀಯ ಯುವಕರು ಈಜಾಡುತ್ತಿದ್ದನ್ನು ಕಂಡು  ಇದರಿಂದ ಪ್ರೇರಿತರಾದ ಕುಶಾಲ್ ಈಜಲು ಹೋಗಿದ್ದಾನೆ. ಆದರೆ, ಸ್ವಲ್ಪ ಸಮಯದ ನಂತರ ಕಣ್ಮರೆಯಾಗಿದ್ದಾನೆ. ಇದು ಸ್ನೇಹಿತರಲ್ಲಿ ಆತಂಕವನ್ನು ಉಂಟುಮಾಡಿತು.

ಏನೋ ತಪ್ಪಾಗಿದೆ ಎಂದು ಅರಿತ ಅವರು ತಕ್ಷಣ  ಆನಂದಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದವರು ಶೋಧ ಕಾರ್ಯ ನಡೆಸಿದ್ದು, ಅಂತಿಮವಾಗಿ ಕುಶಾಲ್ ಅವರ ಮೃತದೇಹವನ್ನು ಸರೋವರದಿಂದ ಹೊರತೆಗೆದರು.

ಮಹಿಳೆಯರಿಗೆ ತಾಲಿಬಾನ್‌ನಿಂದ ಹೊಸ ನಿರ್ಬಂಧ, ಮಾತನಾಡುವಂತಿಲ್ಲ, ಮುಖ ತೋರಿಸುವಂತಿಲ್ಲ!

ಆನಂದಪುರ ಪೊಲೀಸರು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ದುರ್ಘಟನೆಯು ಯುವ ಎಂಜಿನಿಯರ್ ಮತ್ತು ಅವರ ಸ್ನೇಹಿತರಿಗೆ ಸಂತೋಷದ ಟ್ರಿಪ್ ಆಗಿರಬೇಕಿತ್ತು. ಆದರೆ ಈ ಘಟನೆ ಅವರ ಜೀವನದಲ್ಲಿ ಕಹಿ ಘಟನೆಯಾಗಿ ಉಳಿಯುವಂತೆ ಮಾಡಿದೆ.

click me!