
ಬೆಂಗಳೂರು (ಆ.20): ಸಿಲಿಕಾನ್ ಸಿಟಿಯಲ್ಲಿ ಮಂಗಳ ಮುಖಿಯರು ಯುವಕನ ಮೇಲೆ ಅಟ್ಟಹಾಸ ಮೆರೆದಿರುವ ಘಟನೆ ನಡೆದಿದೆ. ಟೀ ಅಂಗಡಿಯಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾತನನ್ನು ಲಿಂಗ ಪರಿವರ್ತನೆ ಮಾಡಿ ಭಿಕ್ಷಾಟನೆಗೆ ಒತ್ತಾಯಿಸಿದ ಘಟನೆ ನಡೆದಿದೆ.
ಬಲವಂತವಾಗಿ ಇಂಜೆಕ್ಷನ್ ಕೊಟ್ಟು ಮಂಗಳ ಮುಖಿಯರು ಗಂಡು ಹುಡುಗನನ್ನ ಲಿಂಗ ಪರಿವರ್ತನೆ ಮಾಡಿದ್ದಾರೆ. ಅಕ್ರಮವಾಗಿ ಲಿಂಗ ಪರಿವರ್ತನೆ, ಅಶ್ಲೀಲ ಪೋಟೊ ತೆಗೆದುಕೊಂಡು ಬ್ಲಾಕ್ ಮೇಲ್ ಮಾಡಿದ್ದಲ್ಲದೆ ಮನಬಂದಂತೆ ಥಳಿಸಿ ಚಿತ್ರ ಹಿಂಸೆ ಕೊಟ್ಟಿದ್ದಾರೆ.
ಟಿಬಿ ಡ್ಯಾಂ ಪ್ರಾಧಿಕಾರದಲ್ಲಿ ಆಂಧ್ರದ್ದೇ ಪ್ರಾಬಲ್ಯ, ಕಾಯಂ ಅಧಿಕಾರಿ ನೇಮಕಕ್ಕೆ ರಾಜ್ಯ ಸರ್ಕಾರ ಧ್ವನಿ ಎತ್ತಲಿ
ಭಿಕ್ಷಾಟನೆ ಮಾಡುವಂತೆ ದೈಹಿಕ ಹಲ್ಲೆ, ಮಾನಸಿಕ ಹಿಂಸೆ ನೀಡಿ ನಾಲ್ವರು ಮಂಗಳಮುಖಿಯರು ಹುಡುಗನ ಲಿಂಗ ಪರಿವರ್ತನೆ ಮಾಡಿದ್ದು, ಗಂಡಸಾಗಿ ಭಿಕ್ಷಾಟನೆ ಮಾಡಿದ್ರೆ ದಿನಕ್ಕೆ ಒಂದು ಸಾವಿರ ಸಂಪಾದನೆ ಮಾಡ್ತಾರೆ. ಇನ್ನು ನೀನು ಹೆಣ್ಣಾಗಿ ಭಿಕ್ಷಾಟನೆ ಮಾಡಿದ್ರೆ ಇನ್ನೇಷ್ಟು ಮಾಡ್ತೀಯಾ ಅಂತ ಧಮ್ಕಿ ಹಾಕಿದ್ದಾರೆ.
ಫ್ರೇಜರ್ ಟೌನ್ ನಲ್ಲಿ ಘಟನೆ ನಡೆದಿದ್ದು, ಚಿತ್ರಾ, ಪ್ರೀತಿ, ಕಾಜಲ್, ಅಶ್ವಿನಿ,ಮುಗಿಲಿ ಎನ್ನುವ ಐದು ಮಂದಿ ವಿರುದ್ಧ ಕಸೀಪಾ ಅಲಿಯಾಸ್ ಮೊಹಮ್ಮದ್ ಅಬೂಬಕ್ಕರ್ ಸೇಠ್ ಪುಲಿಕೇಶಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
5 ಪುಟಗಳ ಡೆತ್ ನೋಟ್ ಬರೆದಿಟ್ಟು ದಂಪತಿ ಸಾವಿಗೆ ಶರಣು, 16 ಮಂದಿ ವಿರುದ್ಧ ದೂರು!
ದೂರಿನ ಸಂಕ್ಷಿಪ್ತ ಸಾರಾಂಶ ಇಂತಿದೆ:
ನಾನು ಮೂರು ವರ್ಷಗಳ ಹಿಂದೆ ಅಂಬೇಡ್ಕರ್ ಕಾಲೇಜ್ ಬಳಿ ಬರ್ಕತ್ ಎಂಬುವವರ ಟೀ ಅಂಗಡಿಯಲ್ಲಿ ಕೆಲಸವನ್ನು ಮಾಡಿಕೊಂಡಿದ್ದೆನು. ಈ ಸಮಯದಲಿ. ಟೀ ಸ್ಮಾಲ್‌ನಲ್ಲಿ ಟೀ ಕುಡಿಯಲು ಬರುತ್ತಿದ್ದ ಚಿತ್ರ, ಅಶ್ವಿನಿ, ಕಾಜಲ್, ಪ್ರೀತಿ, ಮುಗಿಲ ರವರು ನನಗೆ ಪರಿಚಯವಾಗಿ ನಮ್ಮ ಜೊತೆ ಬಂದರೆ ನಿನ್ನನ್ನು ಒಳ್ಳೆಯ ಮನೆಯಲ್ಲಿರಿಸಿ ಒಳ್ಳೆಯ ಸಂಪಾದನೆಗೆ ದಾರಿ ಮಾಡಿಕೊಡುವುದಾಗಿ ಪುಸಲಾಯಿಸಿದರು ನಾನು ಒಪ್ಪದೇ ಇದ್ದಾಗ ನನ್ನನ್ನು ಹೆದರಿಸಿ ಬೆದರಿಸಿ ಅವರ ಮನೆ ಟ್ಯಾನರಿ ರಸ್ತೆಯಲ್ಲಿರುವ ಬೆಂಗಳೂರು ನಗರ ಇಲಿ ಇರಿಸಿಕೊಂಡು ನನ್ನ ಮನೆಯವರಿಗೆ ಕೊಲೆ ಮಾಡಿಸುತ್ತೇನೆಂದು ಬೆದರಿಕೆ ಒಡ್ಡಿ ನನ್ನ ಬಳಿಯಿಂದ ಮೂರು ವರ್ಷಗಳ ಕಾಲ ಭಿಕ್ಷಾಟನೆ ಮಾಡಿಸಿ ದುಡಿಸಿಕೊಂಡಿರುತ್ತಾರೆ. ಜುಲೈ 12, 2024 ರಂದು ರಾತ್ರಿ 8.30 ಗಂಟೆಗೆ, ನೀನು ಗಂಡಸಾಗಿರುವಾಗಲೇ ಪ್ರತಿ ದಿನ 2 ಸಾವಿರ ಹಣವನ್ನು ದುಡಿದು ಕೊಡುತ್ತೀಯ ಹೆಣ್ಣಾದರೆ ಇನ್ನೂ ಎಷ್ಟು ಹಣವನ್ನು ದುಡಿದುಕೊಡುತ್ತೀಯ ಎಂದು ಹೇಳಿ ಹೆಣ್ಣಾಗು ಎಂದು ಹೇಳಿ ನನ್ನ ಇಚ್ಛೆಗೆ ವಿರುದ್ಧವಾಗಿ ಚಿತ್ರ, ಆಶ್ವಿನಿ, ಕಾಜಲ್, ಪ್ರೀತಿ, ಮುಗಿಲ ಎಂಬುವವರು ಗಾಂಜಾ ಸೇವಿಸಿ, ಮಧ್ಯಪಾನ ಮಾಡಿಕೊಂಡು ಒರ್ವ ಹೆಂಗಸರನ್ನು ಕರೆದುಕೊಂಡು ನನಗೆ ಯಾವುದೋ ಇಂಜೆಕ್ಷನ್ ಅನ್ನು ಕೊಡಲು ಬಂದಾಗ ನಾನು ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದಾಗ ಐದು ಜನ ನನ್ನನ್ನು ಹಿಡಿದುಕೊಂಡು ನನಗೆ ಬಲವಂತವಾಗಿ ಬಗ್ಗಿಸಿ ಬೆನ್ನಿಗೆ ಇಂಜೆಕ್ಷನ್ ನೀಡಿ ಪ್ರಜ್ಞೆ ತಪ್ಪಿಸಿ ಮರ್ಮಾಂಗವನ್ನು ಕತ್ತರಿಸಿರುತ್ತಾರೆ.
ನಾನು ಎಚ್ಚರವಾದಾಗ ನನ್ನ ಮರ್ಮಾಂಗದ ಬಳಿ ರಕ್ತಗಾಯವಾಗಿದ್ದು ಪೈಪನ್ನು ಅಳವಡಿಸಿರುತ್ತಾರೆ. ನಂತರ ಆಗಸ್ಟ್ 3 ರವರೆಗೆ ಮನೆಯಲ್ಲಿಯೇ ಕೂಡಿ ಹಾಕಿ, ಮನೆ ಮೇಲೆ ಕರೆದುಕೊಂಡು ಹೋಗಿ ಯಾವುದೋ ಪೂಜೆ ಮಾಡಿಸಿರುತ್ತಾರೆ. ನಂತರ ನನ್ನನ್ನು ಭಿಕ್ಷಾಟನೆ ಮಾಡಿಕೊಂಡು ಬರುವಂತೆ ಹಾಗೂ ಲೈಂಗಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುವಂತೆ ಒತ್ತಾಯಿಸಿ ಐದು ಲಕ್ಷ ಕೊಡುವಂತೆ ಬೆದರಿಸಿದರು. ನಂತರ ಹೇಗೋ ನಾನು ತಪ್ಪಿಸಿಕೊಂಡು ಬಂದು ದೂರನ್ನು ನೀಡುತ್ತಿದ್ದು ನನಗೆ ಬಲವಂತವಾಗಿ ಮರ್ಮಾಂಗ ಕತ್ತರಿಸಿ ಗಾಯಮಾಡಿ ಶಾಶ್ವತ ಹೂನ ಮಾಡಿ ಮನೆಯಲ್ಲಿ ಕೂಡಿ ಹಾಕಿದ್ದ ಚಿತ್ರ, ಅಶ್ವಿನಿ, ಕಾಜಲ್, ಪ್ರೀತಿ, ಮುಗಿಲ ಎಂಬುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ