Bengaluru Crime: ಬರ್ತಡೇ ಸ್ಟೇಟಸ್‌ ಹಾಕಿಲ್ಲವೆಂದು ಅವಾಜ್‌ ಹಾಕಿದ್ದಕ್ಕೆ, ಕೊಲೆಯಾದ ಕುಖ್ಯಾತ ರೌಡಿ ಕಾರ್ತಿಕ್!

By Sathish Kumar KH  |  First Published Apr 19, 2023, 4:03 PM IST

ನೀನು ನನ್ನ ಬರ್ತಡೇ ಸೆಲಬ್ರೇಷನ್‌ ಫೋಟೋ ಹಾಕಿಲ್ಲ ಎಂದು ಅವಾಜ್‌ ಹಾಕಿದ್ದ ಒಂದೇ ಕಾರಣಕ್ಕೆ ಹಲಸೂರಿನ ಕುಖ್ಯಾತ ರೌಡಿಯನ್ನು 6 ಮಂದಿ ಸೇರಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.


ಬೆಂಗಳೂರು (ಏ.19): ಕಳೆದ ಎಂಟು ದಿನಗಳ ಹಿಂದೆ ಜೋಗುಪಾಳ್ಯದ ಮನೆಯ ಬಾಗಿಲ ಬಳಿಯೇ ಬೆಳ್ಳಂಬೆಳಗ್ಗೆ ಮಚ್ಚಿನ ಹೊಡೆತದಿಂದ ಭೀಕರವಾಗಿ ಕೊಲೆಯಾಗಿದ್ದ ಹಲಸೂರಿನ ರೌಡಿಶೀಟರ್ ಕಾರ್ತಿಕ್‌ ಕೊಲೆ ಪ್ರಕರಣದಲ್ಲಿ 6 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಕುಖ್ಯಾತ ರೌಡಿಶೀಟರ್ ವಿಲ್ಸನ್‌ ಗಾರ್ಡನ್‌ ನಾಗನ ಸಹಚರ ಹಲಸೂರಿನ ಕಾರ್ತಿಕ್‌ ಕೂಡ ದೊಡ್ಡ ರೌಡಿಶೀಟರ್‌ ಆಗಿದ್ದನು. ಈತನ ಮೇಲೆ ಅತ್ಯಾಚಾರ, ಕೊಲೆ, ಆಫ್‌ ಮರ್ಡರ್‌ ಸೇರಿದಂತೆ ಹತ್ತಕ್ಕೂ ಅಧಿಕ ಪೊಲೀಸ್‌ ಪ್ರಕರಣಗಳಿದ್ದವು. ಇನ್ನು ಚುನಾವಣೆಯ ಹಿನ್ನೆಲೆಯಲ್ಲಿ ರೌಡಿಶೀಟರ್ ಕಾರ್ತಿನನ್ನು ಪೊಲೀಸರು ಗಡಿಪಾರು ಮಾಡಬೇಕು ಎಂಬ ಸಿದ್ಧತೆಯಲ್ಲಿದ್ದರು. ಆದರೆ, ಏ.11ರ ಬೆಳಗ್ಗೆ ರೌಡಿಶೀಟರ್‌ ಕಾರ್ತಿಕ್‌ನನ್ನು ತನ್ನದೇ ಸಚರರ ರೌಡಿಗಳ ಗುಂಪು, ಜೋಗುಪಾಳ್ಯದಲ್ಲಿ ಮನೆಯ ಮುಂದೆಯೇ ಮಚ್ಚು ಬೀಸಿ ಬರ್ಬರವಾಗಿ ಕೊಲೆ ಮಾಡಿ ಬೀಡಾಸಿದ್ದರು.

Latest Videos

undefined

ಆಸ್ಪತ್ರೇಲಿ ಕ್ಯೂ ದಾಟಿಕೊಂಡು ಹೋದ ದಂಪತಿ ಮೇಲೆ ಹಲ್ಲೆ: ಮಗುವೆಂದೂ ಕರುಣೆ ತೋರಲಿಲ್ಲ!

ಆರು ಜನ ಆರೋಪಿಗಳನ್ನು ಬಂಧಿಸಿದ ಪೊಲೀಸರು: ಇನ್ನು ಬರ್ಬರ ಹತ್ಯೆ ಪ್ರಕರಣವನ್ನು ಬೇಧಿಸಿದ ಹಲಸೂರ ಠಾಣೆ ಪೊಲೀಸರಿಂದ 6 ಆರೋಪಿಗಳ ಬಂಧನ ಮಾಡಲಾಗಿದೆ. ಜಾನ್ಸನ್ , ಮಗ್ಗೇಶ್, ಕಾರ್ತಿಕ್, ಅರುಣ್ ಸೇರಿ ಆರು ಜನರ ಬಂಧನವಾಗಿದೆ. ಈ ಮೂಲಕ ವಿಲ್ಸನ್ ಗಾರ್ಡನ್ ನಾಗನ ಸಹಚರ ಕಾರ್ತಿಕ್ ಕೊಲೆ ಕೇಸ್ ಹಿಂದಿನ ರಹಸ್ಯ ಬಯಲಾದಂತಾಗಿದೆ. ರೌಡಿಶೀಟರ್ ಕಾರ್ತಿಕ್ ಕೊಲೆ ಹಿಂದೆ ಮೂರು ಕಾರಣಗಳು ಕಂಡುಬರುತ್ತಿವೆ. ಏಪ್ರಿಲ್ 8 ರಂದು ಅದ್ದೂರಿಯಾಗಿ ಬರ್ತಡೇ ಆಚರಿಸಿಕೊಂಡಿದ್ದ ಕಾರ್ತಿಕ್, ಆತನ ಸಹಚರ ಜಾನ್ಸನ್‌ ಮೇಲೆ ಮೊಬೈಲ್‌ನಲ್ಲಿ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿಲ್ಲ, ಬ್ಯಾನರ್ ಕಟ್ಟಿಲ್ಲ  ಹಲ್ಲೆ ಮಾಡಿದ್ದನು. ಇದರಿಂದ ತಿರುಗಿ ಬಿದ್ದಿದ್ದ ಜಾನ್ಸನ್ ಮಗ್ಗೆಶ್ ಹಾಗೂ ಕಾರ್ತಿಕ್ ಹೊಡೆದು ಹಾಕ್ತಿನಿ ಎಂದಿದ್ದ ಹುಡುಗರ ಜೊತೆ ಸೇರಿ ಹತ್ಯೆಗೆ ಸ್ಕೆಚ್ ಹಾಕಿ ಕೊಲೆಯನ್ನೇ ಮಾಡಿದ್ದಾರೆ.

  • ರೌಡಿಶೀಟರ್‌ ಕಾರ್ತಿಕ್‌ ಕೊಲೆಗೆ 3 ಕಾರಣಗಳು:
  • 1.ಬರ್ತಡೇ ಸ್ಟೇಟಸ್ ಹಾಕಿಲ್ಲ ಬ್ಯಾನರ್ ಕಟ್ಟಿಲ್ಲ ಅಂತ ಜಾನ್ಸನ್ ಎಂಬಾತನ  ಬೆತ್ತಲೆ ಮಾಡಿ ಹಲ್ಲೆ ಮಾಡಿ ವಿಡಿಯೋ ಮಾಡಿಕೊಂಡಿದ್ದ ಕಾರ್ತಿಕ್.
  • 2. ಈ ಹಿಂದೆ ಮಗ್ಗೇಶ್ ಎಂಬಾತನ ಜೊತೆ ಪುಟ್ಬಾಲ್ ಆಡುವಾಗ ಕಿರಿಕ್ ಆಗಿ ಆಗಲೂ ಬೆತ್ತಲೆ ಮಾಡಿ ಹಲ್ಲೆ ಮಾಡಿ ವಿಡಿಯೋ ಮಾಡಿಕೊಂಡಿದ್ದನು.
  • 3. ಜೋಗುಪಾಳ್ಯದ ಜೈಲಿನಲ್ಲಿರುವ ಕೆಲ ಹುಡುಗರನ್ನ ಹೊಡೆದಿರುವುದಾಗಿ ಹೇಳಿಕೊಂಡು ತಿರುಗಾಡ್ತಿದ್ದನು.

ಹೊಡೆದು ಹಾಕ್ತೀನಿ ಎಂದ ಹುಡುಗರೇ ಕೊಲೆ ಮಾಡಿದರು:
ಈ ಎಲ್ಲ ಕಾರಣಗಳಿಂದ ರೌಡಿಶೀಟರ್‌ ಕಾರ್ತಿಕ್‌ ನಿಮ್ಮನ್ನು ಹೊಡೆದು ಹಾಕ್ತೀನಿ ಎಂದು ಬೆದರಿಕೆಗೆ ಹಾಕಿಸಿಕೊಂಡಿದ್ದ ಜಾನ್ಸನ್, ಮಗ್ಗೆಶ್ ಹಾಗೂ ಕಾರ್ತಿಕ್ ಹಾಗೂ ಇನ್ನಿತರೆ ಕಾರ್ತಿಕ್‌ನ ವಿರೋಧಿ ಹುಡುಗರ ಜೊತೆ ಸೇರಿ ಹತ್ಯೆಗೆ ಯೋಜನೆ ರೂಪಿಸಿದ್ದಾರೆ. ಅದರಂತೆ ಏಪ್ರಿಲ್ 11 ರಂದು ಕಾರ್ತಿಕ್ ನನ್ನ ತನ್ನ ಮನೆಯ ಮುಂದೆಯೇ ಬೆಳ್ಳಂಬೆಳಗ್ಗೆ ಕೊಚ್ಚಿ ಕೊಲೆ ಮಾಡಿ ಪರಾರಿ ಆಗಿದ್ದರು. ಈ ಘಟನೆ ಕುರಿತು ಹಲಸೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

Bengaluru: ವಾಣಿ ವಿಲಾಸ ಆಸ್ಪತ್ರೆಯಿಂದ ಶಿಶು ಅಪಹರಣ ಸುಖಾಂತ್ಯ: ಮಹಿಳೆ ಸೆರೆ

ರೌಡಿಶೀಟರ್‌ ಕಾರ್ತಿಕ್‌ ಇತಿಹಾಸವೂ ಭಯಂಕರ: ಆತ ಮೈ ತುಂಬ ಕೇಸ್ ಮಾಡಿಕೊಂಡಿದ್ದ ರೌಡಿ ಆಸಾಮಿ. ರೇಪ್, ಕೊಲೆ, ಕೊಲೆಯತ್ನ, ಡಕಾಯಿತಿ ಸೇರಿದಂತೆ 11 ಕ್ಕೂ ಹೆಚ್ಚು ಪ್ರಕರಣಗಳು ಆತನ ಮೇಲಿದ್ದವು. ಎಲೆಕ್ಷನ್ ಹೊತ್ತಲ್ಲಿ ಗಡಿಪಾರು ಆದೇಶ ಕೂಡ ಮಾಡಲಾಗಿತ್ತು. ಅಷ್ಟರಲ್ಲಾಗಲೇ ಆತನ ಹೆಣ ಉರುಳಿದೆ. ಮುಖ ಗುರುತು ಸಿಗದಂತೆ ಮಾರಾಕಾಸ್ತ್ರ ಝಳಪಿಸಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ನೀರಿನಂತೆ ರಕ್ತ ಹರಿದಿದೆ. ಮನೆ ಹೊಸ್ತಿಲ ಮಂದೆಯೇ ನೆತ್ತರ ಕಲೆ ಇದೆ. ಪ್ರಾಣ ಉಳಿಸಿಕೊಳ್ಳಲು ಓಡೋಡಿ ಬಂದವನು ಮನೆ ಬಾಗಿಲ‌ ಮುಂದೆಯೇ ಉಸಿರು ಚೆಲ್ಲಿದ್ದಾನೆ. ಭೀಕರವಾಗಿ ರೌಡಿ ಶೀಟರ್‌ನ ಹತ್ಯೆ ಮಾಡಿರೊ ಆರೋಪಿಗಳು ಎಸ್ಕೇಪ್ ಆಗಿದ್ರೆ. ಪೊಲೀಸರು ಇಂಚಿಂಚು ಪರಿಶೀಲನೆ ನಡೆಸ್ತಿದ್ದು ಕೊಲೆಗಡುಕರ ಹೆಜ್ಜುಗುರುತು ಪತ್ತೆ ಹಚ್ತಿದ್ದಾರೆ.

click me!