ಚಾಲಕ ನಿಯಂತ್ರಣ ತಪ್ಪಿ ಮೈಲು ಗಲ್ಲಿಗೆ ಡಿಕ್ಕಿ ಹೊಡೆದ ದಿಬ್ಬಣದ ಲಾರಿ| ಮೂರು ಜನ ಮಹಿಳೆರು ಸ್ಥಳದಲ್ಲಿಯೇ ಸಾವು| ಚನ್ನಗಿರಿ ತಾಲೂಕಿನ ಮಾವಿಕಟ್ಟೆ ಗ್ರಾಮದ ಬಳಿ ಘಟನೆ.
ದಾವಣಗೆರೆ, [ಜ.29]: ಮದುವೆಗೆ ಹೊರಟಿದ್ದ ಕ್ಯಾಂಟರ್ ಲಾರಿ ಪಲ್ಟಿಯಾಗಿ ಸ್ಥಳದಲ್ಲೇ ಮೂವರು ಮಹಿಳೆಯರು ಮೃತಪಟ್ಟಿದ್ದು, 17ಕ್ಕೂ ಹೆಚ್ಚು ಜನರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ದುರ್ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾವಿನಕಟ್ಟೆ ಮತ್ತು ಹಂಚಿನಸಿದ್ದಾಪುರದ ಮಧ್ಯೆ ಘಡನೆ ನಡೆದಿದೆ. ಆಂಧ್ರಪ್ರದೇಶದ ಹಿಂದುಪುರದ ನಾಗರತ್ನಮ್ಮ (70), ಶಿವಮೊಗ್ಗದ ವರಲಕ್ಷ್ಮೀ (60), ಅನುಷಾ (25) ಮೃತಪಟ್ಟ ದುರ್ದೈವಿಗಳು.
ಬೆಂಕಿ ಹಚ್ಚಿದ ಪ್ರಿಯತಮೆ, ಫಲಿಸದ ಚಿಕಿತ್ಸೆ : ಕೊನೆಯುಸಿರೆಳೆದ ಯುವಕ
ಆಂಧ್ರಪ್ರದೇಶದ ಹಿಂದುಪುರದಿಂದ ಶಿವಮೊಗ್ಗಕ್ಕೆ ಮದುವೆ ದಿಬ್ಬಣ ಹೋಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಮೈಲುಗಲ್ಲಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಈ ದುರಂತ ಸಂಭವಿಒಸಿದೆ.
ಘಟನಾ ಸ್ಥಳಕ್ಕೆ ಚನ್ನಗಿರಿ ಪೊಲೀಸರ ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಶವಗಳನ್ನು ಚನ್ನಗಿರಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.