
ಬೆಂಗಳೂರು (ಮೇ 10): ರಾಜ್ಯ ರಾಜಧಾನಿ ಬೆಂಗಳೂರಿನ ನ್ಯಾಯಾಲಯದಲ್ಲಿ ಕೆಲಸ ಮಾಡುವ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯ ಕೊಡಿಸುವಂತೆ ನೆರವು ಕೇಳಿದ ಕಕ್ಷಿದಾರ ಮಹಿಳೆಯನ್ನೇ ಮಂಚಕ್ಕೆ ಕರೆದಿರುವ ಘಟನೆ ನಡೆದಿದೆ.
ಹೌದು, ಬೆಂಗಳುರಿನಲ್ಲಿ ಸರ್ಕಾರದಿಂದ ನೇಮಕ ಮಾಡಲಾದ ಪಬ್ಲಿಕ್ ಪ್ರಾಸಿಕ್ಯೂಟರ್ ಕಕ್ಷಿದಾರ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪಬ್ಲಿಕ್ ಪಾಸಿಕ್ಯೂಟರ್ ಶ್ರೀರಾಮ್ ಅವರನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಮಹಿಳೆ ನೀಡಿದ್ದ ಹಳೆಯ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಮಂಜೂರಾಗಿತ್ತು. ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಲು, ಮಹಿಳೆ ಪಬ್ಲಿಕ್ ಪ್ರಾಸಿಕ್ಯೂಟರ್ ಬಳಿ ಹೋಗಿ ಕೇಸಿನ ಆದೇಶ ಪ್ರತಿ ಕೇಳಿದ್ದಾಳೆ. ಆಗ, ಆದೇಶ ಪ್ರತಿ ಕೊಡುವುದಾಗಿ ಪ್ರಾಸಿಕ್ಯೂಟರ್ ಶ್ರೀರಾಮ್ ಮಹಿಳೆಯನ್ನು ತಾವಿರುವ ಕಾಟನ್‌ಪೇಟೆ ಸ್ಥಳಕ್ಕೆ ಬರುವುದಕ್ಕೆ ತಿಳಿಸಿದ್ದಾರೆ.
ಬೆಂಗಳೂರು ಒಂಟಿ ಮಹಿಳೆಯರೇ ಎಚ್ಚರ; ಕೊರಳಲ್ಲಿರುವ ಗೋಲ್ಡ್ ಚೈನ್ ಕದಿಯಲು, ಮಹಿಳೆ ಕತ್ತನ್ನೇ ಹಿಸುಕಿ ಕೊಂದರು!
ಕಾಟನ್‌ಪೇಟೆಗೆ ಮಹಿಳೆಯನ್ನು ಕರೆಸಿಕೊಂಡ ಪ್ರಾಸಿಕ್ಯೂಟರ್, ಅಲ್ಲಿಂದ ಪಕ್ಕದಲ್ಲಿಯೇ ಇದ್ದ ಲಾಡ್ಜ್ ಒಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ತಾನು ಬರುವುದಿಲ್ಲ ಎಂದು ಮಹಿಳೆ ಹೇಳಿದರೂ ಕೇಸ್ ಬಗ್ಗೆ ಮಾತಾಡೋಣ ಅಂತ ಬಲವಂತವಾಗಿ ಕರೆದೊಯ್ದಿದ್ದಾನೆ. ನಂತರ ಲಾಡ್ಜ್ ರೂಂ ಒಳಗೆ ಕರೆದು ಲೈಂಗಿಕವಾಗಿ ಸಹಕರಿಸಲು ಕೋರಿದ್ದಾನೆ. ಈ ವೇಳೆ ಪ್ರಾಸಿಕ್ಯೂಟರ್ ವರ್ತನೆ ಪ್ರತಿರೋಧ ತೋರಿದ್ದ ಮಹಿಳೆ, ಕೂಡಲೆ ಗಂಡನಿಗೆ ಕರೆ ಮಾಡಿ ಪ್ರಾಸಿಕ್ಯೂಟರ್ ಅಸಭ್ಯ ವರ್ತನೆ ಬಗ್ಗೆ ತಿಳಿಸಿದ್ದಾರೆ.
ಸಂಸದ ಪ್ರಜ್ವಲ್, ನಿತ್ಯಾನಂದ ಸ್ವಾಮಿ ದೇಶಕ್ಕೆ ಸೇರಲು ಪ್ರಯತ್ನಿಸುತ್ತಿದ್ದಾರೆ; ಮೈಸೂರು ಲಕ್ಷ್ಮಣ್!
ಇನ್ನು ಮಹಿಳೆಯ ಗಂಡ ದೂರವಿದ್ದ ಕಾರಣ, ಮಹಿಳೆಯರ ಗಂಡನ ಸ್ನೇಹಿತ ತಕ್ಷಣವೇ ಮಹಿಳೆಯಿದ್ದ ಲಾಡ್ಜ್‌ನ ಸ್ಥಳಕ್ಕೆ ತೆರಳಿ ಸಹಾಯಕ್ಕೆ ಮುಂದಾಗಿದ್ದಾರೆ. ಲಾಡ್ಜ್‌ನ ಒಳಗೆ ಹೋಗಿ ಜಗಳ ಮಾಡುತ್ತಾ ಅವರನ್ನು ಕರೆದುಕೊಂಡು ಬಂದಿದ್ದಾರೆ. ಲಾಡ್ಜ್ ಹೊರಗೆ ಬಂದ ನಂತರ ಪ್ರಾಸಿಕ್ಯೂಟರ್ ವರ್ತನೆಯ ಬಗ್ಗೆ ಮಹಿಳೆಯ ಗಂಡನ ಸ್ನೇಹಿತ ವಿವರವಾಗಿ ವಿಡಿಯೋ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಜೊತೆಗೆ, ಮಹಿಳೆ ಲೈಂಗಿಕವಾಗಿ ಕಿರುಕುಳ ನೀಡಿದ ದೂರು ನೀಡಿದ ಹಿನ್ನೆಲೆಯಲ್ಲಿ ಕಾಟನ್‌ಪೇಟೆ ಪೊಲೀಸರು ಆರೋಪಿ ಶ್ರೀರಾಮ್‌ನನ್ನ ಬಂಧಿಸಿ ಕೋರ್ಟ್ ಹಾಜರು ಪಡಿಸಿದ್ದಾರೆ. ಇನ್ನು ನ್ಯಾಯಾಲಯವು ಕೂಡ ಆರೋಪಿ ಶ್ರೀರಾಮ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ