
ಬೆಂಗಳೂರು (ಜು. 22): ಕುಖ್ಯಾತ ಬೈಕ್ ಕಳ್ಳರ ಗ್ಯಾಂಗ್‌ವೊಂದನ್ನು (Bike Thieves) ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ತನಿಳುನಾಡು ಮೂಲದ ನೆಡುಚೆಲಿಯನ್, ತಿರುಪತಿ , ವಲ್ಲರಸು ಬಂಧಿತ ಆರೋಪಿಗಳು. ಬಂಧಿತರಿಂದ 26 ಬೈಕುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಡಿಯೋ ಬೈಕ್‌ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ. ತಮಿಳುನಾಡಿನಿಂದ ಆರೋಪಿಗಳು ಬಸ್ಸಿನಲ್ಲಿ ಬಂದು, ರಾತ್ರಿ ಹೊತ್ತು ರಸ್ತೆಗಳಲ್ಲಿ ಒಂಟಿಯಾಗಿ ನಿಲ್ಲುತ್ತಿದ್ದ ಬೈಕ್‌ಗಳನ್ನು ಟಾರ್ಗೆಟ್ ಮಾಡುತ್ತಿದ್ದರು.
ಓರ್ವ ಬೈಕ್ ಹತ್ತಿರ ಬಂದು ಲಾಕ್ ಮುರಿದು ಡೈರೆಕ್ಟ್ ಮಾಡುತಿದ್ದ, ಮತ್ತೊಬ್ಬ ಸ್ವಲ್ಪ ದೂರದಲ್ಲಿ ನಿಂತು ಸಿಗ್ನಲ್ ನೀಡುತ್ತಿದ್ದ. ಇತ್ತ ಇನ್ನೊಬ್ಬ ಇನ್ನೂ ಸ್ವಲ್ಪ ದೂರದಲ್ಲಿ ನಿಂತು ಯಾರಾದರೂ ಬರ್ತಿದ್ದಾರಾ ಅಂತಾ ನೋಡಿಕೊಳ್ಳುತ್ತಿದ್ದ. ಬಳಿಕ ಬೈಕ್ ಕದ್ದು ಅದೇ ಬೈಕಲ್ಲಿ ಈ ಮೂವರೂ ರಾತ್ರೊ ರಾತ್ರಿ ತಮಿಳುನಾಡಿಗೆ ಪರಾರಿಯಾಗುತ್ತಿದ್ದರು. ತಮಿಳುನಾಡಿನಲ್ಲಿ 10 ರಿಂದ 15 ಸಾವಿರಕ್ಕೆ ಬೈಕ್ ಮಾರಾಟ ಮಾಡುತ್ತಿದ್ದರು.
ಇದೇ ರೀತಿ ಬೈಕ್ ಕದ್ದು ತಮಿಳುನಾಡಿತ್ತ ತೆರಳುತ್ತಿದ್ದ ಆರೋಪಿಗಳು, ಬೀಟ್ ಪೊಲೀಸರನ್ನು ನೋಡಿ ಬೈಕ್ ಯೂಟರ್ನ್ ಮಾಡಿದ್ದರು, ಈ ವೇಳೆ ಚೇಸ್ ಮಾಡಿ ಹಿಡಿದು ವಿಚಾರಣೆ ನಡೆಸಿದಾಗ ಬೈಕ್ ಕಳ್ಳತನ ಮಾಡುತ್ತಿದ್ದಿದ್ದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೊಮ್ಮನಹಳ್ಳಿ ಪೊಲೀಸರು ತಮಿಳುನಾಡಿಗೆ ತೆರಳಿದ್ದು, ರಾತ್ರೋ ರಾತ್ರಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಬಂಧಿಸಿದ್ದಾರೆ.
ಇದನ್ನೂ ಓದಿ: ಪಲ್ಸರ್ ಬೈಕ್ ಮಾತ್ರ ಕಳ್ಳತನ ಮಾಡೋ ವಿಶೇಷ ಕಳ್ಳರಿವರು!
ಮೈಕೊ ಲೇಔಟ್ ಪೊಲೀಸರಿಂದ ಕುಖ್ಯಾತ ಬೈಕ್ ಕಳ್ಳನ ಬಂಧನ: ಇನ್ನು ಮತ್ತೊಂದು ಪ್ರಕರಣದಲ್ಲಿ ಮೈಕೊ ಲೇಔಟ್ ಪೊಲೀಸರು ಕುಖ್ಯಾತ ಬೈಕ್ ಕಳ್ಳನನ್ನು ಬಂಧಿಸಿದ್ದಾರೆ. ಹರಿಹರ ಮೂಲದ ಸುಹೈಲ್ ಬಂಧಿತ ಆರೋಪಿ. ಆರೋಪಿ ಬೈಕ್ ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದು ಹೆಚ್ಚಾಗಿ ಡಿಯೋ ಬೈಕುಗಳನ್ನೇ ಕಳವು ಮಾಡುತಿದ್ದ.
ಬೈಕ್ ಕಳವು ಮಾಡಿ 2 ದಿನ ಅದರಲ್ಲೇ ವೀಲಿಂಗ್ ಮಾಡಿ ಶೋಕಿ ಮಾಡ್ತಿದ್ದ, ನಂತರ ಕಡಿಮೆ ಬೆಲೆಗೆ ಬೈಕ್ ಮಾರುತ್ತಿದ್ದ. ಆರೋಪಿ ಒಂದೇ ವೀಲ್ನಲ್ಲಿ 11 ಕಿಮೀ ಬೈಕ್ ರೈಡ್ ಮಾಡುತ್ತಿದ್ದ. 2019ರಲ್ಲಿ ಜೆಪಿ ನಗರದಲ್ಲಿ ಮೊದಲ ಸಲ ಕಳವು ಮಾಡಿದ್ದ. ಆಗಿನಿಂದ ಇಲ್ಲಿವರೆಗೆ ಒಮ್ಮೆಯೂ ಅರೆಸ್ಟ್ ಆಗಿರಲಿಲ್ಲ. 4 ವರ್ಷಗಳಿಂದ ಖದೀಮ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ. 50 ಬೈಕ್ ಕಳವು ಮಾಡಿದ ನಂತರ ಈಗ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.
ರಸ್ತೆಮೇಲೆ ವಿಲಿಂಗ್ ಇನ್‌ಸ್ಟಾಗ್ರಾಂನಲ್ಲಿ ಡಿಲೀಂಗ್: ಇನ್ನು ಈ ಬಗ್ಗೆ ಮಾತನಾಡಿದ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ ರಾವ್ "ಆಗ್ನೇಯ ವಿಭಾಗದಲ್ಲಿ ಒಟ್ಟು 76 ಬೈಕ್ ಗಳನ್ನ ರಿಕವರಿ ಮಾಡಿದ್ದಾರೆ, 58 ಲಕ್ಷ ಮೌಲ್ಯದ ಬೈಕ್‌ಗಳನ್ನು ಆರೋಪಿಗಳಿಂದ ರಿಕವರಿ ಮಾಡಲಾಗಿದೆ. ಮೈಕೋ ಲೇಔಟ್ ಆರೋಪಿ ಸುಹೈಲ್ ಕಳ್ಳತನ ಮಾಡಿದ ಬೈಕ್ ಗಳನ್ನ ವಿಲಿಂಗ್ ಮಾಡುತ್ತಿದ್ದ, ಬಳಿಕ ಇನ್‌ಸ್ಟಾಗ್ರಾಮಿನಲ್ಲಿ ಪೊಸ್ಟ್ ಮಾಡಿ ಅದಕ್ಕೆ ಹೆಚ್ಚಿನ ಬೇಡಿಕೆ ಇದೆ ಎಂದು ಮಾಲೀಕರಿಗೆ ತೋರಿಸುತ್ತಿದ್ದ, ಆರೋಪಿ ಸುಹೈಲ್ ರಸ್ತೆಮೇಲೆ ವಿಲಿಂಗ್ ಇನ್‌ಸ್ಟಾಗ್ರಾಂನಲ್ಲಿ ಡಿಲೀಂಗ್ ಮಾಡುತ್ತಿದ್ದ, ಆಂಧ್ರ ಮತ್ತು ತಮಿಳುನಾಡಿನಲ್ಲಿ ಕದ್ದ ಬೈಕ್‌ಗಳನ್ನು 5 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ, ಮಾಲೀಕರಿಗೆ ಸ್ವಲ್ಪ ಸಮಯದ ನಂತರ ದಾಖಲೆ ನೀಡುತ್ತೇನೆ ಎಂದು ಹೇಳಿ ವಂಚಿಸುತ್ತಿದ್ದ" ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ