
ವಿಜಯನಗರ (ಜು. 22): ತಾನು ಇಷ್ಟಪಟ್ಟಿದ್ದ ಯುವತಿಯ ಮದುವೆಗೆ ಆಕೆಯ ಮನೆಯವರು ಒಪ್ಪದ್ದಕ್ಕೆ ವಿವಾಹಿತ ಪಾಗಲ್ ಪ್ರೇಮಿಯೋರ್ವ ಮನೆಗೆ ನುಗ್ಗಿ ಅವಳ ರುಂಡ ಕಡಿದು ಪೊಲೀಸ್ ಠಾಣೆಗೆ ತಂದು ಶರಣಾದ ಘಟನೆ ವಿಜಯ ನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ ಸಮೀಪದ ಕನ್ನಿಬೊರಯ್ಯನಹಟ್ಟಿಯಲ್ಲಿ ಗುರುವಾರ ಮಧ್ಯಾಹ್ನ ನಡೆದಿತ್ತು. ಇಂದು ಪೊಲೀಸರ ಉಪಸ್ಥಿತಿಯಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಯುವತಿಯ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಕನ್ನಿಬೋರಯ್ಯನಹಟ್ಟಿಗ್ರಾಮದ ಚೇರ್ಮನ್ ಬಸಣ್ಣ ಪುತ್ರಿ ನಿರ್ಮಲಾ(23) ಕೊಲೆಯಾದವಳು. ಅದೇ ಗ್ರಾಮದ ಭೋಜರಾಜ ಕೊಲೆಗಾರ.
ಪೊಲೀಸ್ ಠಾಣೆಯಲ್ಲಿದ್ದ ಆರೋಪಿಯನ್ನು ನಮಗೊಪ್ಪಿಸಿ ಎಂದು ನಿನ್ನೆ ಪೊಲೀಸ್ ಠಾಣೆಯ ಎದುರು ಹೈಡ್ರಾಮ ಕೂಡ ನಡೆದಿತ್ತು. ಭೋಜರಾಜನನ್ನು ತಮ್ಮ ವಶಕ್ಕೆ ನೀಡದಿದ್ದರೆ ಸಾಯುತ್ತೇನೆ ಎಂದು ನಿರ್ಮಲಾ ಸಹೋದರ ಶ್ರೀಕಾಂತ್ ಠಾಣೆ ಮುಂದೆ ಆಕ್ರೋಶ ವ್ಯಕ್ತಪಡಿಸಿ ಪೆಟ್ರೋಲ್ ಸುರಿದುಕೊಂಡಿದ್ದರು. ತಕ್ಷಣವೇ ಪೊಲೀಸರು ತಡೆದರು.
ನಿನ್ನೆ ರಾತ್ರಿ 8 ಗಂಟೆಗೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಮೃತದೇಹ ಒಯ್ದಿದ್ದರು. ಇಂದು ಬೆಳಗ್ಗೆ ಕೂಡ ಗ್ರಾಮಸ್ಥರು ಪಂಚಾಯಿತಿ ಮಾಡಿದ್ದರು. ಆರೋಪಿಯನ್ನು ನಮಗೆ ಒಪ್ಪಿಸಿ ಎಂದು ಪಟ್ಟು ಹಿಡಿದಿದ್ದರು. ಆದರೆ ಇಂದು ಪೊಲೀಸರ ಉಪಸ್ಥಿತಿಯಲ್ಲಿ ಕೊನೆಗೂ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಇದನ್ನೂ ಓದಿ: ನಾನು ಬೇರೆ ಹುಡ್ಗಿ ಮದ್ವೆ ಆಗ್ಬಹುದು, ಆದ್ರೆ ಆಕೆ ಬೇರೆಯವರನ್ನ ನೋಡೋ ಹಾಗಿಲ್ಲ!
ಪ್ರಕರಣ ಏನು?: ನಿರ್ಮಲಾ ಹಾಗೂ ಸಂಬಂಧಿಕರೂ ಆಗಿದ್ದರು. ಯುವತಿ ಬಿಎಸ್‌ಸಿ ನರ್ಸಿಂಗ್ ಕೊನೆಯ ವರ್ಷ ಓದುತ್ತಿದ್ದಳು. ಭೋಜರಾಜ ಅವರದ್ದೇ ಟ್ರ್ಯಾಕ್ಟರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. 2-3 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇವರ ಮದುವೆಗೆ ಯುವತಿ ಮನೆಯವರು ಒಪ್ಪಿರಲಿಲ್ಲ. ಹೀಗಾಗಿ ಎರಡು ತಿಂಗಳ ಹಿಂದಷ್ಟೇ ಆತ ಬೇರೊಬ್ಬಳೊಂದಿಗೆ ವಿವಾಹವಾಗಿದ್ದ.
ನಿರ್ಮಲಾ 3 ದಿನದ ಹಿಂದೆ ಸ್ವಗ್ರಾಮಕ್ಕೆ ಬಂದಿದ್ದಳು. ನಿರ್ಮಲಾ ಪೋಷಕರು ಕೆಲಸಕ್ಕೆ ತೆರಳಿದ್ದರು. ಬೆಳಗ್ಗೆ 11.30ಕ್ಕೆ ಲಾಂಗ್ ಹಿಡಿದುಕೊಂಡು ಮನೆಗೆ ನುಗ್ಗಿದ ಭೋಜರಾಜ, ನಿರ್ಮಲಾಳ ರುಂಡ ಕಡಿದು, ಅದನ್ನು ಬೈಕ್ ಮೇಲಿಸಿ 10 ಕಿ.ಮೀ. ದೂರದ ಹೊಸಹಳ್ಳಿ ಠಾಣೆಗೆ ತಂದು, ಪೊಲೀಸರಿಗೆ ಶರಣಾಗಿದ್ದಾನೆ. ಎಂದು ನಿರ್ಮಲಾ ಸಹೋದರ ಶ್ರೀಕಾಂತ್ ಠಾಣೆ ಮುಂದೆ ಆಕ್ರೋಶ ವ್ಯಕ್ತಪಡಿಸಿ ಪೆಟ್ರೋಲ್ ಸುರಿದುಕೊಂಡ. ತಕ್ಷಣವೇ ಪೊಲೀಸರು ತಡೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ