ಬೆಂಗಳೂರಿನಲ್ಲಿ ಕೇಕ್ ದುರಂತ: ಅಪ್ಪ ತಂದುಕೊಟ್ಟ ಬರ್ತಡೇ ಕೇಕ್ ತಿಂದು ಪ್ರಾಣಬಿಟ್ಟ ಮಗು; ತಂದೆ-ತಾಯಿ ಗಂಭೀರ!

By Sathish Kumar KHFirst Published Oct 7, 2024, 4:08 PM IST
Highlights

ಬೆಂಗಳೂರಿನಲ್ಲಿ ಬರ್ತಡೇ ಆಚರಣೆ ದುರಂತಕ್ಕೆ ಕಾರಣವಾಗಿದೆ. ಕೇಕ್ ತಿಂದ ಬಳಿಕ ಮಗು ಸಾವನ್ನಪ್ಪಿದ್ದು, ತಂದೆ-ತಾಯಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು (ಅ.07): ಮಗನ ಬರ್ತಡೇ ದಿನ ಅಪ್ಪ ಬೇಕರಿಯಿಂದ ತಂದುಕೊಟ್ಟ ಕೇಕ್ ಕತ್ತರಿಸಿ ಖುಷಿಯಿಂದ ತಿಂದ ಮಗು ಪ್ರಾಣವನ್ನೇ ಬಿಟ್ಟಿದೆ. ಇನ್ನು ಅಪ್ಪ, ಅಮ್ಮನೂ ಈ ಕೇಕ್ ತಿಂದಿದ್ದು, ಇಬ್ಬರೂ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕೇಕ್ ತಿಂದು ಒಂದೇ ಕುಟುಂಬದ ಮೂರು ಜನ ಅಸ್ವಸ್ಥ. ಕೆ.ಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರೋ ಘಟನೆಯಾಗಿದೆ. ತಂದೆ, ತಾಯಿ, ಮಗು ಮೂರು ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲು. ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ ವ್ಯಕ್ತಿ. ಮನೆಗೆ ಕೇಕ್‌ ತೆಗೆದು ಕೊಂಡು ಹೋಗಿದ್ದ. ಮನೆಯಲ್ಲಿ ಪತ್ನಿ ಮತ್ತು ಮಗುವಿನ ಜೊತೆ ಸೇರಿ ಕೇಕ್ ತಿಂದಿದ್ದರು. ಈ ಕೇಕ್ ತಿಂದ ನಂತರ ಮೂವರ ಆರೋಗ್ಯದಲ್ಲಿ ಅಸ್ಥವ್ಯಸ್ಥವಾಗಿದೆ. ಮೂವರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾರಂಭಿಸಿದೆ. ಆದರೆ, ಮೂವರ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

Latest Videos

ಇದನ್ನೂ ಓದಿ: ನೀವು ಬೆಂಗಳೂರು ನಿವಾಸಿಗಳಾಗಿದ್ದು, ನಿಮ್ಮನೆ ಬಳಿ ಪಾರಿವಾಳ ಬಂತೆಂದರೆ ಎಚ್ಚರವಾಗಿರಿ!

ಒಂದೇ ಕುಟುಂಬದ ಮೂವರು ತೀವ್ರ ಅಸ್ತವ್ಯಸ್ಥಗೊಂಡು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಆಗ, ಸ್ಥಳೀಯ ಕೆ.ಪಿ. ಅಗ್ರಹಾರ ಠಾಣೆ ಪೊಲೀಸರಿಂದ ಘಟನೆ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಕೇಕ್ ತಂದಿದ್ದು ಯಾವ ಬೇಕರಿಯಿಂದ, ಕೇಕ್ ನಲ್ಲಿರೋ ಅಂಶಗಳಿಂದ ಅಸ್ವಸ್ಥರಾಗಿದ್ದಾರಾ.? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ವೈದ್ಯರ ರಿಪೋರ್ಟ್ ಗಾಗಿ ಪೊಲೀಸರು ಕಾಯುತ್ತಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು ತೀವ್ರ ಗಂಭೀರ ಸ್ಥಿತಿಗೆ ತಲುಪಿ, ಚಿಕಿತ್ಸೆಗೆ ಸ್ಪಂದಿಸದೇ ಪ್ರಾಣವನ್ನೇ ಬಿಟ್ಟಿದೆ.

ಬರ್ತಡೇ ಬಾಯ್ ಆಗಿ ಅಪ್ಪ ತಂದುಕೊಟ್ಟ ಕೇಕ್ ಕತ್ತರಿಸಿ ಅದನ್ನು ತಿಂದ ಮಗ ಧೀರಜ್ (5) ಸಾವನ್ನಪ್ಪಿದೆ. ತಂದೆ ಬಾಲರಾಜ್ , ತಾಯಿ ನಾಗಲಕ್ಷ್ಮಿ ಅಸ್ವಸ್ಥರಾಗಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಕಿಮ್ಸ್ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಕೆ.ಪಿ.ಅಗ್ರಹಾರದ ಭುವನೇಶ್ವರಿ ನಗರದ ಮನೆಯಲ್ಲಿ ನಡೆದಿದೆ. ಸದ್ಯ ಪುಡ್ ಪಾಯ್ಸನ್ ನಿಂದ ಸಾವು ಸಂಭಿಸಿರೋ ಬಗ್ಗೆ ಶಂಕೆ ವ್ಯಕ್ತಪಡಿಸಿರೋ ಪೊಲೀಸರು, ಕಿಮ್ಸ್ ಆಸ್ಪತ್ರೆಯಿಂದ ಎಂಎಲ್ ಸಿ ವರದಿ ಬಂದ ಬಳಿಕ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಲಿದ್ದಾರೆ.

ಇದನ್ನೂ ಓದಿ: ಆರ್‌ಜಿ ಕರ್ ಘಟನೆ ಸಾಮೂಹಿಕ ಬಲತ್ಕಾರವಲ್ಲ, ಆರೋಪಿ ಸಂಜಯ್ ಕೃತ್ಯ ಚಾರ್ಜ್‌ಶೀಟ್‌ನಲ್ಲಿ ಬಯಲು!

ಸದ್ಯಕ್ಕೆ ಘಟನೆ ಬಗ್ಗೆ ವಿವರ ನೀಡಬೇಕಾದ ತಂದೆ, ತಾಯಿ ಕೂಡ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಪೊಲೀಸರಿಗೆ ದೂರು ಕೊಡಲು ಅಥವಾ  ಘಟನೆ ಹೇಗೆ ನಡೆದಿದೆ ಎಂಬ ಬಗ್ಗೆ ಹೇಳಲು ಯಾರೂ ಇಲ್ಲವಾಗಿದ್ದಾರೆ. ಘಟನೆ ಹೀಗೆ ಆಗಿದೆ ಎಂಬ ಬಗ್ಗೆ  ಸ್ಪಷ್ಟ ಮಾಹಿತಿ ಇಲ್ಲ. ಕೇಕ್ ತಿಂದ ತಂದೆ ತಾಯಿ ಇಬ್ಬರಿಗೂ ಪ್ರಜ್ಞೆ ಬಂದ ಬಳಿಕ ಘಟನೆ ಬೆಳಕಿಗೆ ಬರೋ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

click me!