ಬಳ್ಳಾರಿ ಜೈಲಿನಲ್ಲಿ ಡೆವಿಲ್ ದರ್ಶನ್‌ಗೆ ಕಾಡ್ತಿದ್ಯಾ ರೇಣುಕಾಸ್ವಾಮಿ ಆತ್ಮ? ಅಸಲಿ ಸತ್ಯ ಇಲ್ಲಿದೆ

By Mahmad Rafik  |  First Published Oct 7, 2024, 1:05 PM IST

ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ಗೆ ರಾತ್ರಿ ನಿದ್ದೆ ಬರುತ್ತಿಲ್ಲ ಎಂದು ವರದಿಯಾಗಿದೆ. ದಿನವಿಡೀ ನಿದ್ದೆ ಮಾಡುವ ದರ್ಶನ್ ರಾತ್ರಿಯಾಗುತ್ತಿದ್ದಂತೆ ಭಯದಿಂದ ಎಚ್ಚರಗೊಳ್ಳುತ್ತಾರೆ ಎಂದು ಹೇಳಲಾಗಿದೆ.


ಬೆಂಗಳೂರು: ಬಳ್ಳಾರಿ ಜೈಲಿನಲ್ಲಿರುವ ಕೊಲೆ ಆರೋಪಿ, ನಟ ದರ್ಶನ್‌ಗೆ ರಾತ್ರಿ ರೇಣುಕಾಸ್ವಾಮಿಯ ಆತ್ಮ ಕಾಡ್ತಿದೆ ಎಂಬ ಸುದ್ದಿಯೊಂದು ವೈರಲ್ ಆಗುತ್ತಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆರಾಮವಾಗಿದ್ದ ಆರೋಪಿ ದರ್ಶನ್ ಕಳ್ಳಾಟ ಬಯಲಾಗುತ್ತಿದ್ದಂತತೆ ಬಳ್ಳಾರಿಗೆ ಶಿಫ್ಟ್ ಆಯ್ತು.  ಪರಪ್ಪನ ಸೆರೆಮನೆಯನ್ನು ಅರಮನೆ ಮಾಡ್ಕೊಂಡ ಆರೋಪದಲ್ಲಿ ಬಳ್ಳಾರಿಗೆ ದರ್ಶನ್ ಎತ್ತಂಗಡಿ ಆಗಿದ್ದಾಯ್ತು. ಬೆಂಗಳೂರಲ್ಲಿ ಜೈಲಿನಲ್ಲಿಯೂ ಪಟಾಲಂ ಕಟ್ಟಿಕೊಂಡು ದರ್ಶನ್ ಬಿಂದಾಸ್ ಆಗೇ ಇದ್ದ. ಆದ್ರೆ ಬಳ್ಳಾರಿ ಜೈಲಲ್ಲಿ ಹಾಗಿಲ್ಲ. ಕುಟುಂಬಸ್ಥರೋ, ಸ್ನೇಹಿತರೋ ಬಂದಾಗ ಭೇಟಿಯಾಗಿ ಮಾತಾಡಬಹುದು. ಅದನ್ನ ಬಿಟ್ಟರೆ ಯಾರ ಭೇಟಿಗೂ ಅಲ್ಲಿ ಅವಕಾಶವಿಲ್ಲ. ಇತ್ತ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಜೈಲಿನಲ್ಲಿ ಒಂಟಿತನದಿಂದ ಬಳಲುತ್ತಿರೋ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕೊಲೆ ಆರೋಪಿಯಾಗಿ ಜೈಲು ಸೇರಿದಾಗಿನಿಂದಲೂ ದರ್ಶನ್ ನನಗೆ ಜೈಲೂಟ ಸೇರ್ತಿಲ್ಲಾ ಅಂತಿದ್ದ. ಜೊತೆಗೆ ರಾತ್ರಿ ನಿದ್ರೆ ಬರ್ತಿಲ್ಲ. ಮಲಗೋಕೆ ಹಾಸಿಗೆ ಕೊಡಿ ಅಂತಲೂ ಕೋರ್ಟ್​ ಮೆಟ್ಟಿಲು ಹತ್ತಿದ್ದ. ಆದ್ರೆ ಕೋರ್ಟ್ ಆ ಅರ್ಜಿ ವಿಚಾರಣೆ ಮುಂದೆ ಹಾಕುತ್ತಿದೆ. 

Tap to resize

Latest Videos

undefined

ಬಳ್ಳಾರಿ ಜೈಲಿನಲ್ಲಿ ದರ್ಶನ್​ ಮಾನಸಿಕ ನೋವಿಗೆ ಒಳಗಾಗ್ತಿದ್ದಾನಂತೆ. ತನ್ನ ಭೇಟಿಗೆ ಬಂದಾಗಲೆಲ್ಲಾ ಪತ್ನಿ ವಿಜಯಲಕ್ಷ್ಮೀ ಬಳಿ ನೋವು ಕೇಳಿಕೊಳ್ತಿದ್ದಾನೆ. ರಾತ್ರಿ ನಿದ್ರೆ ಬರುತ್ತಿಲ್ಲ. ರೇಣುಕಾಸ್ವಾಮಿ ಹೇಗೆಲ್ಲಾ ತನ್ನನ್ನ ಕಾಡ್ತಿದ್ದಾನೆ ಅಂತ ಪತ್ನಿ ಬಳಿ ದರ್ಶನ್ ಹೇಳಿಕೊಂಡಿದ್ದಾನೆ ಅನ್ನೋ ಮಾತು ಕೇಳಿ ಬರುತ್ತಿದೆ. ರಾತ್ರಿಯಾದ್ರೆ ಹೆದರುತ್ತಿರೋ, ಬೆಚ್ಚಿ ಬೀಳ್ತೀರೋ ಗಂಡನಿಗೆ ಧೈರ್ಯ ತುಂಬಕ್ಕೆ ಒಂದಿಷ್ಟು ವಸ್ತುಗಳನ್ನ ತಂದು ಕೊಟ್ಟಿದ್ದಾರೆ ಎನ್ನಲಾಗ್ತಿದೆ. 

ಸರ್ಫಲ್ಲಿ ಒಗೆದ ಬಟ್ಟೆಯಲ್ಲಿ ಸಾಕ್ಷ್ಯ ಸಿಕ್ಕಿದ್ದು ಹೇಗೆ: ದರ್ಶನ್ ಸಿಕ್ಕಿಸಲು ಕಲ್ಪಿತ ಕತೆ ಕಟ್ಟಲಾಗಿದೆ ಎಂದ ವಕೀಲ

ದರ್ಶನ್ ಬೆಂಗಳೂರು ಜೈಲಿನಲ್ಲಿದ್ದಾಗ ಪತ್ನಿ ವಿಜಯಲಕ್ಷ್ಮೀ  ಹೇಗೆ ಪದೇ ಪದೇ  ಅಲ್ಲಿಗೆ ಹೋಗಿ ಭೇಟಿ ಆಗ್ತಿದ್ರೋ, ಅದೇ ರೀತಿ ದೂರದ ಬಳ್ಳಾರಿ ಜೈಲಿಗೂ ಆಗಾಗಾ ಭೇಟಿ ಕೊಡ್ತಲೇ ಇದ್ದಾರೆ. ಹೀಗೆ ದರ್ಶನ್ ನೋಡೋಕೆ ಹೋದಾಗ, ಬೇಕಾದ ಕೆಲ ಅಗತ್ಯ ವಸ್ತುಗಳು, ಒಂದಿಷ್ಟು ತಿಂಡಿ –ತಿನಿಸುಗಳ ಜೊತೆಗೆ ದೇವಸ್ಥಾನಗಳ ವಿಭೂತಿ, ಕುಂಕುಮ ಹಾಗೂ ಕೆಂಪುದಾರವನ್ನು ಕೊಟ್ಟಿದ್ದಾರಂತೆ. ದಿನವಿಡೀ ನಿದ್ದೆಗೆ ಜಾರುವ ದರ್ಶನ್ ರಾತ್ರಿ ಎಚ್ಚರವಾಗಿ ಕುಳಿತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ರಾತ್ರಿ ಎಚ್ಚರವಾಗಿ ಕುಳಿತಿರುವಾಗ ಪಾಪಪ್ರಜ್ಞೆ ಏನಾದರೂ ಡೆವಿಲ್‌ಗೆ ಕಾಡ್ತಿದೆಯಾ ಎಂಬ ಪ್ರಶ್ನೆಯೊಂದು ಮೂಡಿದೆ. ಇಡೀ ದಿನ ಒಂಟಿಯಾಗಿ ಕುಳಿತಾಗ ರೇಣುಕಾಸ್ವಾಮಿ ಪ್ರಕರಣದ ದೃಶ್ಯಗಳು ಕಣ್ಮುಂದೆ ಬಂದಿರಬಹುದು.  

ಜೈಲಲ್ಲಿ ದಿನ ದೂಡೋದೇ  ದಾಸನಿಗೆ ಕಷ್ಟವಾಗಿದೆ. ಈ ಮಧ್ಯೆ ರಾತ್ರಿ ಕಣ್ಮುಚಿದ್ರು ಹೊಸ ಸಂಕಷ್ಟ ಶುರುವಾಗಿದೆ. ಹೀಗಾಗಿ, ಏನಾದ್ರೂ ಮಾಡಿ ದರ್ಶನ್​ನ ಸೆರೆಮನೆಯಿಂದ ಹೊರ ತರೋಕೆ ಎಲ್ಲಿಲ್ಲದ ಪ್ರಯತ್ನಗಳು ನಡೆಯುತ್ತಿವೆ.

ದರ್ಶನ್‌ ಕೇಸ್ ತನಿಖೆ ಅರೇಬಿಯನ್ ನೈಟ್ಸ್ ಕತೆಯಂತಿದೆ: ವಕೀಲ ಸಿ.ವಿ.ನಾಗೇಶ್ ವಾದ!

click me!