Bengaluru: ಕಾರಿನ ಜಿಪಿಎಸ್‌ನಿಂದ ಬಯಲಾಯ್ತು ಪತ್ನಿಯ ಅನೈತಿಕ ಸಂಬಂಧ..!

By BK Ashwin  |  First Published Mar 27, 2023, 3:23 PM IST

ಈ ಜಿಪಿಎಸ್‌ ಡೇಟಾ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ತನ್ನ ಹೆಂಡತಿ ಹಾಗೂ ಆಕೆಯ ಬಾಯ್‌ಫ್ರೆಂಡ್‌ ಬೆದರಿಕೆ ಹಾಕಿದ್ದಾರೆ ಎಂದೂ ವ್ಯಕ್ತಿ ಹೇಳಿಕೊಂಡಿದ್ದಾನೆ. ನಂತರ ನ್ಯಾಯಾಲಯವು ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡಿದೆ.


ಬೆಂಗಳೂರು (ಮಾರ್ಚ್‌ 27, 2023): ತಂತ್ರಜ್ಞಾನ ಅಭಿವೃದ್ಧಿಯಾಗುತ್ತಾ ಹೋದಂತೆ ಮನುಷ್ಯನ ದಿನನಿತ್ಯ ಜೀವನ ಸುಲಭವಾಗುತ್ತಾ ಹೋಗುತ್ತಿದೆ. ಅದೇ ರೀತಿ, ಅನೇಕ ಪ್ರಕರಣಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಹ ಸುಲಭವಾಗುತ್ತಿದೆ. ಆದರೆ, ಇಲ್ಲೊಂದು ಅಪರೂಪದ ಪ್ರಕರಣದಲ್ಲಿ ಪತಿ ತನ್ನ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಪತ್ತೆ ಹಚ್ಚಿದ್ದಾನೆ. ಅದೂ, ಜಿಪಿಎಸ್‌ ಟ್ರ್ಯಾಕರ್‌ ಮೂಲಕ ಬಯಲಾಗಿದೆ. 

ಹೌದು, ಬೆಂಗಳೂರು ಮೂಲದ ಈ ವ್ಯಕ್ತಿ ಪತ್ನಿ ವಿರುದ್ಧ ನಗರದ ಮಹಾಲಕ್ಷ್ಮೀಪುರಂ ಪೊಲೀಸ್ ಠಾಣೆಯವರು ದೂರು ತೆಗೆದುಕೊಳ್ಳುವಂತೆ ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಕಾರಣ ಕುಟುಂಬದ ಕಾರಿನ ಜಿಪಿಎಸ್ ದತ್ತಾಂಶವನ್ನು ಪರಿಶೀಲಿಸಿದಾಗ ಆಕೆ ತನಗೆ ಮೋಸ ಮಾಡುತ್ತಿದ್ದಾಳೆ ಎಂಬುದು ಪತಿಗೆ ಗೊತ್ತಾಗಿದೆ ಎಂದು ಆರೋಪಿಸಲಾಗಿದೆ.

Tap to resize

Latest Videos

ಇದನ್ನು ಓದಿ: PUDUCHERRY: ಬಾಂಬ್‌ ಎಸೆದು, ಚಾಕುವಿನಿಂದ ಇರಿದು ಬಿಜೆಪಿ ನಾಯಕನ ಬರ್ಬರ ಹತ್ಯೆ

ತನ್ನ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್‌ ಆಗಿರುವ ಕಾರಿನ ಜಿಪಿಎಸ್ ಟ್ರ್ಯಾಕರ್ ತನ್ನ ಹೆಂಡತಿಯ ಅಕ್ರಮ ಸಂಬಂಧದ ಮೇಲೆ ಬೆಳಕು ಚೆಲ್ಲಲು ಸಹಾಯ ಮಾಡಿದೆ ಎಂದು ಆ ವ್ಯಕ್ತಿ ಹೇಳಿದ್ದಾನೆ. ಮತ್ತು ಹೀಗಾಗಿ ಆಕೆ ಮತ್ತು ಆಕೆಯ ಬಾಯ್‌ಫ್ರೆಂಡ್‌ ವಿರುದ್ಧ ಪೊಲೀಸರಿಗೆ ದೂರು ನೀಡಬೇಕೆಂದು ತಾನು ಬಯಸಿದ್ದೆ ಎಂದು ವ್ಯಕ್ತಿ ಕೋರ್ಟ್‌ ಮೊರೆ ಹೋಗಿರುವ ಬಗ್ಗೆ ವರದಿ ತಿಳಿಸಿದೆ.
2014 ರಲ್ಲಿ ತಾನು ಮದುವೆಯಾಗಿದ್ದೇನೆ ಮತ್ತು ನಮಗೆ 6 ವರ್ಷದ ಮಗಳಿದ್ದಾಳೆ ಎಂದು ಅವರು ಹೇಳಿದ್ದಾರೆ. ತಾನು, ನಗರದ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದೆ. ತಮ್ಮ ಕಾರಿನಲ್ಲಿರುವ ಜಿಪಿಎಸ್ ಡೇಟಾವನ್ನು ನೋಡುವವರೆಗೂ ನಮ್ಮ ಕುಟುಂಬದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿತ್ತು ಎಂದು ಆ ವ್ಯಕ್ತಿ ಹೇಳಿದ್ದಾನೆ.

ತನ್ನ ಕಾರಿನಲ್ಲಿರುವ ಜಿಪಿಎಸ್ ಟ್ರ್ಯಾಕಿಂಗ್ ಸಿಸ್ಟಮ್ ಬಗ್ಗೆ ಪತ್ನಿ ಸೇರಿದಂತೆ ಯಾರಿಗೂ ಮಾಹಿತಿ ನೀಡಿರಲಿಲ್ಲ ಎಂದೂ ಆತ ಹೇಳಿದ್ದಾನೆ. "ಕಳೆದ ವರ್ಷ ಒಂದು ದಿನ, ನಾನು ಕಚೇರಿಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಕಾರನ್ನು ಯಾರೋ ಹೊರತೆಗೆದಿದ್ದಾರೆ ಎಂದು ನಾನು ಕಂಡುಕೊಂಡೆ. ಜಿಪಿಎಸ್‌ನಲ್ಲಿ ಈ ಬಗ್ಗೆ ವಿವರವಾದ ಅಧ್ಯಯನ ಮಾಡಿದಾಗ, ಮಧ್ಯರಾತ್ರಿಯ ವೇಳೆಗೆ ಕಾರುಕೆಂಪೇಗೌಡ ಏರ್‌ಪೋರ್ಟ್‌ ದಿಕ್ಕಿನಲ್ಲಿ ಚಲಿಸಿ ಹೋಟೆಲ್‌ನ ಹೊರಗೆ ನಿಂತಿದೆ ಎಂದು ತೋರಿಸಿದೆ. ಬಳಿಕ, ಬೆಳಿಗ್ಗೆ 5 ಗಂಟೆಯ ನಂತರ ಮನೆಗೆ ಕಾರು ವಾಪಸ್‌ ಬಂದಿದೆ. ಈ ಬಗ್ಗೆ ಅನುಮಾನಗೊಂಡು ನಾನು ಆ ಹೋಟೆಲ್‌ಗೆ ಹೋಗಿ ವಿಚಾರಿಸಿದಾಗ, ನನ್ನ ಹೆಂಡತಿ ಮತ್ತು ಆಕೆಯ ಬಾಯ್‌ಫ್ರೆಂಡ್‌ ತಮ್ಮ ಮತದಾರರ ಗುರುತಿನ ಚೀಟಿಗಳನ್ನು ಬಳಸಿ ರೂಮ್‌ ಬುಕ್‌ ಮಾಡಿದ್ದರು ಎಂಬುದನ್ನು ಕಂಡುಕೊಂಡೆ’’ ಎಂದೂ ಆ ವ್ಯಕ್ತಿ ಹೇಳಿಕೊಂಡಿದ್ದಾನೆ. 

ಇದನ್ನೂ ಓದಿ: ಹೋಂ ವರ್ಕ್‌ ಮಾಡದಿದ್ದಕ್ಕೆ 7 ವರ್ಷದ ವಿದ್ಯಾರ್ಥಿಗೆ ಹೊಡೆದು ಸಾಯಿಸಿದ ವಸತಿಶಾಲೆ ಮಾಲೀಕ..!

ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಸಾರಿಗೆ ವಾಹನಗಳಿಗೆ ಸ್ಥಳ ಟ್ರ್ಯಾಕಿಂಗ್ ಸಾಧನಗಳು ಮತ್ತು ತುರ್ತು ಪ್ಯಾನಿಕ್ ಬಟನ್‌ಗಳನ್ನು ಸ್ಥಾಪಿಸಲು ರಾಜ್ಯ ಕ್ಯಾಬಿನೆಟ್ ಕಳೆದ ವರ್ಷದ ಕೊನೆಯಲ್ಲಿ ಅನುಮೋದನೆ ನೀಡಿತ್ತು. ಈ ಯೋಜನೆಯನ್ನು ಕೇಂದ್ರದ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿದ್ದು, ಅದು 60 ರಷ್ಟು ಹಣವನ್ನು ನೀಡುತ್ತದೆ ಮತ್ತು ಕರ್ನಾಟಕ ಸರ್ಕಾರವು ಉಳಿದ 40% ಹಣವನ್ನು ನೀಡುತ್ತದೆ ಎಂದು ತಿಳಿದುಬಂದಿದೆ.

ಇನ್ನು, ಈ ಜಿಪಿಎಸ್‌ ಡೇಟಾ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ತನ್ನ ಹೆಂಡತಿ ಹಾಗೂ ಆಕೆಯ ಬಾಯ್‌ಫ್ರೆಂಡ್‌ ಬೆದರಿಕೆ ಹಾಕಿದ್ದಾರೆ ಎಂದೂ ವ್ಯಕ್ತಿ ಹೇಳಿಕೊಂಡಿದ್ದಾನೆ. ನಂತರ ನ್ಯಾಯಾಲಯವು ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡಿದೆ. ಈ ಹಿನ್ನೆಲೆ ಸೆಕ್ಷನ್ 417 (ವಂಚನೆ), 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಯನ್ನು ಪ್ರೇರೇಪಿಸುವುದು), 506 (ಅಪರಾಧ ಬೆದರಿಕೆ) ಮತ್ತು 120 ಬಿ (ಅಪರಾಧದ ಪಿತೂರಿ) ಸೇರಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಮಹಿಳೆ ಪ್ರಸ್ತುತ ರಾಜ್ಯದ ದೂರದ ಪ್ರದೇಶದಲ್ಲಿ ವಾಸಿಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕೆಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ: ವಿವಾಹಿತ ಸೋದರಿಯನ್ನೇ ಕೊಂದು ನದಿಗೆಸೆದ ಸೋದರರು!

click me!