82 ವರ್ಷದ ತಂದೆ​ಯನ್ನೇ ಮನೆ​ಯಿಂದ ಹೊರ ಹಾಕಿದ ಮಗ - ಸೊಸೆ!

By Gowthami K  |  First Published Mar 27, 2023, 1:52 PM IST

ಹೆತ್ತ ಮಗನೇ ತಂದೆ​ಯನ್ನು ಮನೆ​ಯಿಂದ ಹೊರ ದಬ್ಬಿದ್ದು, ಇದೀಗ ತಂದೆ ನ್ಯಾಯ​ಕ್ಕಾಗಿ ಪೊಲೀಸ್‌ ಠಾಣೆ ಮೆಟ್ಟ​ಲೇ​ರಿ​ರುವ ಘಟನೆ ಕನಕಪುರದ ಗೆಂಡೇಕೆರೆ ಗ್ರಾಮದಲ್ಲಿ ನಡೆದಿದೆ. 82 ವರ್ಷದ ಮುದ್ದೇಗೌಡ ತನ್ನ ಮಗ - ಸೊಸೆ ಹಾಗೂ ಮೊಮ್ಮಗನಿಂದ ಅನ್ಯಾಯಕ್ಕೆ ಒಳಗಾದವರು.


ಕನಕಪುರ (ಮಾ.27): ಹೆತ್ತ ಮಗನೇ ತಂದೆ​ಯನ್ನು ಮನೆ​ಯಿಂದ ಹೊರ ದಬ್ಬಿದ್ದು, ಇದೀಗ ತಂದೆ ನ್ಯಾಯ​ಕ್ಕಾಗಿ ಪೊಲೀಸ್‌ ಠಾಣೆ ಮೆಟ್ಟ​ಲೇ​ರಿ​ರುವ ಘಟನೆ ತಾಲೂ​ಕಿನ ಗೆಂಡೇಕೆರೆ ಗ್ರಾಮದಲ್ಲಿ ನಡೆದಿದೆ. 82 ವರ್ಷದ ಮುದ್ದೇಗೌಡ ತನ್ನ ಮಗ - ಸೊಸೆ ಹಾಗೂ ಮೊಮ್ಮಗನಿಂದ ಅನ್ಯಾಯಕ್ಕೆ ಒಳಗಾದವರು. ತಮಗೆ ಅನ್ಯಾಯವಾಗಿರುವ ಸಂಬಂಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಮಗನ ವಿರುದ್ಧ ದೂರು ನೀಡಿದ್ದಾರೆ.

ತಮಗೆ ಇಬ್ಬರು ಗಂಡು ಮಕ್ಕಳಿದ್ದು ಇಬ್ಬರಿಗೂ ಆಸ್ತಿಯಲ್ಲಿ ಭಾಗ ಮತ್ತು ಪ್ರತ್ಯೇಕ ಮನೆಯನ್ನು ಕೊಟ್ಟಿದ್ದು ಅವರೆಲ್ಲರೂ ಬೇರೆಯಾಗಿ ವಾಸಿಸುತ್ತಿದ್ದಾರೆ ಎಂದು ಮುದ್ದೇ​ಗೌಡ ತಿಳಿಸಿದ್ದಾರೆ. ತಾವು ಒಂದು ಮನೆಯನ್ನು ಉಳಿಸಿಕೊಂಡಿದ್ದು ಪತ್ನಿ ತೀರಿಕೊಂಡಿರುವುದರಿಂದ ಒಬ್ಬಂಟಿಯಾಗಿ ರಾಮನಗರದಲ್ಲಿರುವ ಮಗಳ ಮನೆಯಲ್ಲಿ ಊಟ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ. ಅದನ್ನು ಸಹಿಸದೆ ದೊಡ್ಡಮಗ ಲಿಂಗರಾಜು ಮತ್ತು ಆತನ ಪತ್ನಿ ಹಾಗೂ ಆತನ ಪುತ್ರ ಪ್ರತಿದಿನ ಚಿತ್ರಹಿಂಸೆ ಕೊಡುತ್ತಿರುವುದಾಗಿ ಅವರು ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Tap to resize

Latest Videos

ಮಧ್ಯಸ್ಥರ ಮೂಲಕ ನ್ಯಾಯ ಪಂಚಾಯಿತಿ ಮಾಡಿ ನನ್ನ ವಿಚಾರಕ್ಕೆ ಬರುವುದಿಲ್ಲವೆಂದು ಹೇಳಿದ ಮಗ ಈಗ ಪಂಪು ಮೋಟಾರ್‌ ವಿಚಾರಕ್ಕೆ ಗಲಾಟೆ ಮಾಡಿ ಮನೆಯ ಬಾಗಿಲು ಒಡೆದು, ಮನೆಯಲ್ಲಿ ಚಿನ್ನಾಭರಣ, ಹಣ ತೆಗೆದುಕೊಂಡು ಬೇರೆ ಬೀಗ ಹಾಕಿಕೊಂಡು ಮನೆಗೆ ಹೋಗದಂತೆ ಮಾಡಿದ್ದಾನೆ. ವಯಸ್ಸಾದ ನನಗೆ ನೆಮ್ಮದಿಯಾಗಿ ಜೀವನ ಮಾಡಲು ಬಿಡುತ್ತಿಲ್ಲ. ಮಗನ ದೌರ್ಜನ್ಯ ಹೆಚ್ಚಾಗಿದ್ದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅವನಿಂದ ತಮಗೆ ರಕ್ಷಣೆ ಬೇಕಿದೆ ಎಂದು ಅವರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಗ್ರಾಮಾಂತರ ಪೊಲೀಸ್‌ ಠಾಣೆಗೆ ಮಾ.20ರಂದು ದೂರು ನೀಡಿದ್ದು ಅವರು ನನಗೆ ನ್ಯಾಯ ಕೊಡಿಸುತ್ತಿಲ್ಲವೆಂದು ಆರೋಪಿಸಿದ್ದಾರೆ.

Yadgir: ಬಟ್ಟೆ ಅಂಗಡಿಯಲ್ಲಿ ದಂಪತಿ ಸಜೀವ ದಹನ, ಮಕ್ಕಳು ಸೇರಿ ನಾಲ್ವರು ಪಾರು

ಬೆಟ್ಟದ ಮೇಲಿಂದ ಬಿದ್ದು ಪ್ರೇಮಿಗಳು ಆತ್ಮ​ಹತ್ಯೆ ಯತ್ನ:
ರಾಮನಗರ: ಪ್ರೀತಿಗೆ ಪೋಷ​ಕರು ವಿರೋಧ ವ್ಯಕ್ತ​ಪ​ಡಿ​ಸಿದ ಹಿನ್ನೆ​ಲೆ​ಯಲ್ಲಿ ಪ್ರೇಮಿ​ಗಳಿಬ್ಬರು ರಾಮ​ದೇ​ವರ ಬೆಟ್ಟದ ನಿರ್ಜನ ಪ್ರದೇ​ಶ​ದಲ್ಲಿ ಆತ್ಮ​ಹ​ತ್ಯೆಗೆ ಯತ್ನಿ​ಸಿ​ರುವ ಘಟನೆ ಶುಕ್ರ​ವಾರ ನಡೆ​ದಿದೆ. ಬೆಂಗ​ಳೂರು ಕತ್ತ​ರಿ​ಗುಪ್ಪೆ ನಿವಾ​ಸಿ​ಗ​ಳಾದ ಚೇತನ್‌(19), ಸಾಹಿತ್ಯ(19) ಆತ್ಮ​ಹ​ತ್ಯೆಗೆ ಯತ್ನಿಸಿ ಗಾಯ​ಗೊಂ​ಡ​ವ​ರು. ​ಇ​ವ​ರನ್ನು ರಾಜ​ರಾ​ಜೇ​ಶ್ವರಿ ಆಸ್ಪ​ತ್ರೆಗೆ ದಾಖ​ಲಿ​ಸ​ಲಾ​ಗಿದೆ. ರವೀಂದ್ರಚಾರ್‌ ಪುತ್ರ ಚೇತನ್‌ ಮತ್ತು ಮುನಿ​ರಾಜು ಪುತ್ರಿ ಸಾಹಿತ್ಯ ಪ್ರಥಮ ವರ್ಷದ ಬಿಎ ವ್ಯಾಸಂಗ ಮಾಡು​ತ್ತಿ​ದ್ದು, ಇಬ್ಬರು ಪರ​ಸ್ಪರ ಪ್ರೀತಿ​ಸು​ತ್ತಿ​ದ್ದರು.

Bengaluru: ಆಶ್ಲೀಲ‌ ವೆಬ್‌ಸೈಟ್‌ಗೆ ಮಗಳ ಫೋಟೋ ಅಪ್ಲೋಡ್ ಮಾಡುವ ಬೆದರಿಕೆ, 

ಈ ಪ್ರೀತಿಯ ವಿಷಯ ತಿಳಿದ ಪೋಷ​ಕ​ರು ವಿರೋಧ ವ್ಯಕ್ತ​ಪ​ಡಿ​ಸಿ​ದ್ದಾರೆ. ಇದ​ರಿಂದ ಮನ​ನೊಂದ ಇಬ್ಬರು ಆತ್ಮ​ಹ​ತ್ಯೆ ಮಾಡಿ​ಕೊ​ಳ್ಳು​ವು​ದಾಗಿ ​ಪೋ​ಷ​ಕ​ರಿಗೆ ಪೋನ್‌ ಮಾಡಿ ತಿಳಿಸಿದ್ದಾರೆ. ಬೆಂಗ​ಳೂ​ರಿ​ನಿಂದ ರಾಮ​ನ​ಗ​ರದ ರಾಮ​ದೇ​ವರ ಬೆಟ್ಟಕ್ಕೆ ಆಗ​ಮಿ​ಸಿ​ರುವ ಇಬ್ಬರು ಬೆಟ್ಟದ ನಿರ್ಜನ ಪ್ರದೇ​ಶ​ದಲ್ಲಿ ಬಂಡೆ ಮೇಲಿಂದ ಕೆಳಗೆ ಬಿದ್ದಿ​ದ್ದಾರೆ. ಸ್ಥಳೀ​ಯರು ತಕ್ಷಣ ಇಬ್ಬ​ರನ್ನು ರಕ್ಷಣೆ ಮಾಡಿ ಆಸ್ಪ​ತ್ರೆಗೆ ಸಾಗಿ​ಸಿ​ದ್ದಾರೆ. ಯುವ​ಕನ ಸ್ಥಿತಿ ಗಂಭೀ​ರ​ವಾ​ಗಿ​ದ್ದರೆ, ಯುವ​ತಿಗೆ ಸಣ್ಣ​ಪುಟ್ಟಗಾಯ​ಗ​ಳಾ​ಗಿವೆ. ಘಟನಾ ಸ್ಥಳಕ್ಕೆ ಎಎಸ್‌ಐ ರುದ್ರೇಶ್‌ ಭೇಟಿ ನೀಡಿ ಪರಿ​ಶೀ​ಲಿಸಿ​ದರು. ರಾಮ​ನ​ಗರ ಗ್ರಾಮಾಂತರ ಠಾಣೆ​ಯಲ್ಲಿ ಪ್ರಕ​ರಣ ದಾಖ​ಲಾ​ಗಿದೆ.

click me!