Puducherry: ಬಾಂಬ್‌ ಎಸೆದು, ಚಾಕುವಿನಿಂದ ಇರಿದು ಬಿಜೆಪಿ ನಾಯಕನ ಬರ್ಬರ ಹತ್ಯೆ

ಪುದುಚೆರಿಯ ಬಿಜೆಪಿ ಕಾರ್ಯಾಧ್ಯಕ್ಷ ಸೆಂಥಿಲ್ ಕುಮಾರ್ ಅವರನ್ನು ನಿನ್ನೆ ರಾತ್ರಿ ವಿಲಿಯನೂರ್ ಮತ್ತು ಪುದುಚೇರಿ ರಸ್ತೆಯ ರಸ್ತೆ ಬದಿಯ ಅಂಗಡಿಯೊಂದರಲ್ಲಿ ಚಹಾ ಸೇವಿಸುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಮೊದಲು ಸೆಂಥಿಲ್ ಕುಮಾರ್ ಮೇಲೆ ನಾಡ ಬಾಂಬ್ ಎಸೆದಿದ್ದು ಮತ್ತು ನಂತರ ಹೋಗಿ ಚಾಕುವಿನಿಂದ ಇರಿದು ಕೊಂದಿದ್ದಾರೆ ಎಂದು ತಿಳಿದುಬಂದಿದೆ. 

bjp worker bombed hacked to death on busy road in puducherry as onlookers watch ash

ಪುದುಚೆರ್ರಿ (ಮಾರ್ಚ್‌ 27,2023): ಪುದುಚೆರ್ರಿಯಲ್ಲಿ ಜನನಿಬಿಡ ರಸ್ತೆಯಲ್ಲಿ ಸ್ಥಳೀಯರು ನೋಡುತ್ತಿದ್ದಂತೆ ಬಿಜೆಪಿ ನಾಯಕರೊಬ್ಬರನ್ನು ಬಾಂಬ್ ಸ್ಫೋಟಿಸಿ ಹತ್ಯೆ ಮಾಡಲಾಗಿದೆ. ಪುದುಚೆರ್ರಿಯ ಬಿಜೆಪಿ ಕಾರ್ಯಾಧ್ಯಕ್ಷ ಸೆಂಥಿಲ್ ಕುಮಾರ್ ಅವರನ್ನು ಭಾನುವಾರ ರಾತ್ರಿ ವಿಲಿಯನೂರ್ ಮತ್ತು ಪುದುಚೇರಿ ರಸ್ತೆಯ ಬೇಕರಿಯ ಬಳಿ ಚಹಾ ಸೇವಿಸುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಮೊದಲು ಸೆಂಥಿಲ್ ಕುಮಾರ್ ಮೇಲೆ ನಾಡ ಬಾಂಬ್ ಎಸೆದಿದ್ದು ಮತ್ತು ನಂತರ ಹೋಗಿ ಚಾಕುವಿನಿಂದ ಇರಿದು ಕೊಂದಿದ್ದರೆ. 

ಪುದುಚೆರ್ರಿಯ ಬಿಜೆಪಿ ಕಾರ್ಯಾಧ್ಯಕ್ಷ ಸೆಂಥಿಲ್ ಕುಮಾರ್ ಅವರನ್ನು ನಿನ್ನೆ ರಾತ್ರಿ ವಿಲಿಯನೂರ್ ಮತ್ತು ಪುದುಚೇರಿ ರಸ್ತೆಯ ರಸ್ತೆ ಬದಿಯ ಅಂಗಡಿಯೊಂದರಲ್ಲಿ ಚಹಾ ಸೇವಿಸುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಮೊದಲು ಸೆಂಥಿಲ್ ಕುಮಾರ್ ಮೇಲೆ ನಾಡ ಬಾಂಬ್ ಎಸೆದಿದ್ದು ಮತ್ತು ನಂತರ ಹೋಗಿ ಚಾಕುವಿನಿಂದ ಇರಿದು ಕೊಂದಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: ಹೋಂ ವರ್ಕ್‌ ಮಾಡದಿದ್ದಕ್ಕೆ 7 ವರ್ಷದ ವಿದ್ಯಾರ್ಥಿಗೆ ಹೊಡೆದು ಸಾಯಿಸಿದ ವಸತಿಶಾಲೆ ಮಾಲೀಕ..!

ದುಷ್ಕರ್ಮಿಗಳು ಬಿಜೆಪಿ ಕಾರ್ಯಾಧ್ಯಕ್ಷನ  ಮೇಲೆ ಬಾಂಬ್ ದಾಳಿ ನಡೆಸುತ್ತಿರುವುದನ್ನು ಘಟನೆಯ ವಿಡಿಯೋ ತೋರಿಸುತ್ತದೆ. ಇನ್ನು, ಬಾಂಬ್‌ ಎಸೆದಿದ್ದು, ಚಾಕುವಿನಿಂದ ಇರಿದು ಕೊಂದಿದ್ದು ಮಾತ್ರವಲ್ಲದೆ ಹಲವು ಬಾರಿ ಕೋಲಿನಿಂದ ಥಳಿಸಿದ್ದಾರೆ. ಮಾರ್ಚ್ 26 ರಂದು ರಾತ್ರಿ 9 ಗಂಟೆಗೆ ವಿಲಿಯನೂರಿನ ಕನ್ನಕಿ ಸರ್ಕಾರಿ ಪ್ರೌಢಶಾಲೆಯ ಪಕ್ಕದ ಬೇಕರಿ ಬಳಿ ನಿಂತಿದ್ದ ಸೆಂಥಿಲ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು, ಮೃತ ಬಿಜೆಪಿ ನಾಯಕ ಸೆಂಥಿಲ್ ಕುಮಾರ್ ಪುದುಚೇರಿ ಗೃಹ ಸಚಿವ ನಮಶಿವಾಯಂ ಅವರ ದೂರದ ಸಂಬಂಧಿ ಎಂದು ತಿಳಿದುಬಂದಿದೆ. ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಸೆಂಥಿಲ್‌ಕುಮಾರ್, ನಮಚಿವಾಯಂ ಜೊತೆಗೆ ಬಿಜೆಪಿಗೆ ಹೋಗಿದ್ದರು. ದಾಳಿಕೋರರನ್ನು ಬಂಧಿಸಲು ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದಾರೆ ಮತ್ತು ಪೊಲೀಸರು ಟೀ ಸ್ಟಾಲ್‌ನಿಂದ ಹತ್ತಿರದ ದೃಶ್ಯಗಳನ್ನು ಸ್ಕ್ಯಾನ್ ಮಾಡುತ್ತಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದುಷ್ಕರ್ಮಿಗಳ ಗ್ಯಾಂಗ್ ಮೊದಲು ಎರಡು ನಾಡ ಬಾಂಬ್‌ಗಳನ್ನು ಸೆಂಥಿಲ್‌ ಕುಮಾರ್ ಮೇಲೆ ಎಸೆದರು ಮತ್ತು ಕುಸಿದು ಬಿದ್ದಾಗ ಅವರು ಅವನನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕೋರ್ಟ್ ಹಾಲ್‌ನಲ್ಲೇ ಪತ್ನಿ ಮೇಲೆ ಆ್ಯಸಿಡ್ ಎರಚಿದ ಪಾಪಿ ಪತಿ..!

ಸ್ವಲ್ಪ ಸಮಯದ ನಂತರ, ಸುಮಾರು 700 ಬಿಜೆಪಿ ಕಾರ್ಯಕರ್ತರು ಮತ್ತು ಸೆಂಥಿಲ್‌ ಕುಮಾರ್ ಅವರ ಸಂಬಂಧಿಕರು ಸ್ಥಳದಲ್ಲಿ ಜಮಾಯಿಸಿದರು. ಜೊತೆಗೆ ಗೃಹ ಸಚಿವ ಎ ನಮಶಿವಾಯಂ, ಸೆಂಥಿಲ್‌ ಕುಮಾರ್ ಅವರ ಮೃತ ದೇಹವನ್ನು ನೋಡಿ ಕಣ್ಣೀರಿಟ್ಟಿದ್ದಾರೆ ಎಂದೂ ತಿಳಿದುಬಂದಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅವರು ಪ್ರದೇಶದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ವಶಪಡಿಸಿಕೊಂಡಿದ್ದಾರೆ.  ವ್ಯಕ್ತಿಯೊಬ್ಬ ಬಿಜೆಪಿ ನಾಯಕನ ಮೇಲೆ ಎರಡು ನಾಡ ಬಾಂಬ್‌ಗಳನ್ನು ಎಸೆಯುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ: ವಿವಾಹಿತ ಸೋದರಿಯನ್ನೇ ಕೊಂದು ನದಿಗೆಸೆದ ಸೋದರರು!

Latest Videos
Follow Us:
Download App:
  • android
  • ios