
ಬೆಂಗಳೂರು: ಗಂಡ, ವೆಡ್ಡಿಂಗ್ ಆನಿವರ್ಸರಿಗೆ ಗಿಫ್ಟ್ ನೀಡಿಲ್ಲ ಅನ್ನೋ ಕಾರಣಕ್ಕೆ ಪತ್ನಿ ಆತನಿಗೆ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗೃಹಿಣಿಯೊಬ್ಬರು ಪತಿ, ವಿವಾಹ ವಾರ್ಷಿಕೋತ್ಸವದ ಉಡುಗೊರೆಯನ್ನು ನೀಡದ ಹಿನ್ನೆಲೆಯಲ್ಲಿ ಕಾರಿಡಾರ್‌ನಲ್ಲಿ ಮಲಗಿದ್ದ ಪತಿಗೆ ಚಾಕುವಿನಿಂದ ಇರಿದಿದ್ದಾರೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಫೆ.27ರಂದು ಈ ಘಟನೆ ನಡೆದಿದೆ. ರಾತ್ರಿ 1.30ಕ್ಕೆ ಗೃಹಿಣಿಯಾಗಿರುವ 35 ವರ್ಷದ ಮಹಿಳೆ, ಅಡುಗೆ ಕೋಣೆಯಲ್ಲಿರುವ ಚಾಕು ತೆಗೆದುಕೊಂಡು ಗಂಡನಿಗೆ ಇರಿದಿದ್ದಾಳೆ. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ, ನಾನು ರಾತ್ರಿ ಮಲಗಿದ್ದಾಗ ಹೆಂಡತಿ ಬಂದು ಕೈಗೆ ಚಾಕುವಿನಿಂದ ಇರಿದಿದ್ದಾಗಿ ತಿಳಿಸಿದ್ದಾನೆ. ತಕ್ಷಣ ನಿದ್ದೆಯಿಂದ ಎಚ್ಚೆತ್ತ ವ್ಯಕ್ತಿ, ಪತ್ನಿಯನ್ನು ದೂರ ತಳ್ಳಿದ ಕಾರಣ ಹೆಚ್ಚಿನ ಅಪಾಯ ತಪ್ಪಿದ್ದಾಗಿ ತಿಳಿಸಿದ್ದಾನೆ. ಕಿರುಚಾಟ ಕೇಳಿ ಸ್ಥಳಕ್ಕೆ ತಲುಪಿದ ಸ್ಥಳೀಯರು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವ್ಯಕ್ತಿ ದೇಹದಲ್ಲಿ ಚಾಕು ಇರಿತದ ಗಾಯವಿದ್ದ ಕಾರಣ ವೈದ್ಯರ ತಂಡ ಪೊಲೀಸರಿಗೆ ಮಾಹಿತಿ ನೀಡಿದೆ.
ಗಂಡನಿಗೆ ಮದುವೆ ಆನಿವರ್ಸರಿ ಡೇಟ್ ನೆನಪಿರುವಂತೆ ಮಾಡಲು ಏನು ಮಾಡಬಹುದು ?
ಗಂಡನಿಗೆ ಚಾಕು ಇರಿದ ಪತ್ನಿಯ ವಿರುದ್ಧ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾರ್ಚ್ 1ರಂದು ದೂರನ್ನು ದಾಖಲಿಸಿಕೊಳ್ಳಲಾಗಿದ್ದು, ಈ ಬಗ್ಗೆ ವಿಚಾರಣೆ ನಡೀತಿದೆ. 'ಇದು ಕೌಟುಂಬಿಕ ಸಮಸ್ಯೆಯಾಗಿರುವ ಕಾರಣ, ಪತಿ-ಪತ್ನಿ ಈ ಬಗ್ಗೆ ಮಾತನಾಡಿ ನಂತರ ಮಾಹಿತಿ ನೀಡುವಂತೆ ತಿಳಿಸಿದ್ದೇವೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ವಿಚಾರಣೆ ನಡೆಸಿದಾಗ, ಗಂಡನ ಅಜ್ಜ ತೀರಿಕೊಂಡಿದ್ದ ಕಾರಣ ಆತ ಪತ್ನಿಗೆ ವೆಡ್ಡಿಂಗ್ ಆನಿವರ್ಸರಿ ಗಿಫ್ಟ್ ತಂದುಕೊಟ್ಟಿಲ್ಲ. ಆದರೆ ವಿವಾಹ ವಾರ್ಷಿಕೋತ್ಸವಕ್ಕೆ ಮೊದಲ ಬಾರಿಗೆ ಗಿಫ್ಟ್ ನೀಡದೇ ಇದ್ದ ಕಾರಣ ಪತ್ನಿ ವಿಪರೀತ ಸಿಟ್ಟುಕೊಂಡಿದ್ದಳು. ಹೀಗಾಗಿ ಈ ಕೃತ್ಯ ಎಸಗಿದ್ದಾಗಿ ತಿಳಿದುಬಂದಿದೆ. ಈ ಬಗ್ಗೆ ಮಾತನಾಡಿರುವ ಪತಿ, 'ಪತ್ನಿ ಹಲವು ವೈಯುಕ್ತಿಕ ವಿಚಾರಗಳಿಂದ ಡಿಸ್ಟರ್ಬ್‌ಗೊಂಡಿದ್ದು, ಆಕೆಗೆ ಕೌನ್ಸೆಲಿಂಗ್ ಅಗತ್ಯವಿದೆ' ಎಂದು ತಿಳಿಸಿದ್ದಾನೆ.
90 ವರ್ಷಗಳ ಸುದೀರ್ಘ ದಾಂಪತ್ಯ: ಗ್ರಾನೈಟ್ ವಿವಾಹ ವಾರ್ಷಿಕೋತ್ಸವ ಆಚರಿಸಿದ ವಿಶ್ವದ ಏಕೈಕ ಜೋಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ