ಉಗ್ರಾಣ ನಿಗಮ ಅಧ್ಯಕ್ಷ ನೇಮಕ ಆದೇಶ; ಸಿಎಂ ಸಿದ್ದರಾಮಯ್ಯರ ಹೆಸರನ್ನೇ ನಕಲಿ ಮಾಡಿದ ಕಿರಾತಕರು!

By Ravi JanekalFirst Published Mar 5, 2024, 1:30 PM IST
Highlights

ಉಗ್ರಾಣ ನಿಗಮ ಅಧ್ಯಕ್ಷ ಸ್ಥಾನ ನೇಮಕ ಆದೇಶ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಹೆಸರಲ್ಲಿ ನಕಲಿ ಸಹಿ ಮಾಡಿದ ಪ್ರಕರಣ ಯಾದಗಿರಿಯಲ್ಲಿ ಬೆಳಕಿಗೆ ಬಂದಿದೆ.

ಯಾದಗಿರಿ (ಮಾ.5): ಉಗ್ರಾಣ ನಿಗಮ ಅಧ್ಯಕ್ಷ ಸ್ಥಾನ ನೇಮಕ ಆದೇಶ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಹೆಸರಲ್ಲಿ ನಕಲಿ ಸಹಿ ಮಾಡಿದ ಪ್ರಕರಣ ಯಾದಗಿರಿಯಲ್ಲಿ ಬೆಳಕಿಗೆ ಬಂದಿದೆ. ಯಾದಗಿರಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎ.ಸಿ. ಕಾಡ್ಲೂರ್ ರನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಕ ಮಾಡಿ ಆದೇಶ ಹೊರಡಿಸಿರುವಂತೆ ನಕಲಿ ಆದೇಶ ಪ್ರತಿ ಸೃಷ್ಟಿಸಿರುವ ಆರೋಪಿಗಳು. ಉಗ್ರಾಣ ನಿಗಮ ಅಧ್ಯಕ್ಷ ಹುದ್ದೆಗೆ ಸದ್ಯ ಯಾವುದೇ ಅಧಿಕೃತ ನೇಮಕ ಆದೇಶ ಇಲ್ಲ. ಆದರೂ ಸಿದ್ದರಾಮಯ್ಯರ ಹೆಸರಲ್ಲಿ ಸ್ಥಳೀಯ ನಕಲಿ ಗಿರಾಕಿಗಳು ಸೃಷ್ಟಿಸಿರುವುದು ಬಯಲಾಗಿದೆ. ಸದ್ಯ ಈ ನಕಲಿ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 ಇತ್ತೀಚೆಗಷ್ಟೇ ನಿಧನ ಹೊಂದಿದ್ದ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕರನ್ನ ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಶಾಸಕರು ನಿಧನರಾದರು. ಅವರ ನಿಧನ ಬಳಿಕ ತೆರವಾದ ಸ್ಥಾನ. ಕೇವಲ ಮೂರು ದಿನದಲ್ಲಿ ತೆರವಾದ ಸ್ಥಾನಕ್ಕೆ ಎಸಿ ಕಾಡ್ಲೂರ್ ನೇಮ ಮಾಡಿರುವ ಆದೇಶ ಬಂದಿದೆ. ಆದೇಶ ಪ್ರತಿ ನಕಲಿಯಾಗಿದ್ದು, ಸಿದ್ದರಾಮಯ್ಯ ಸಹಿ ಹೋಲುವಂತೆ ನಕಲು ಮಾಡಿರುವುದು ಆರೋಪಿಗಳು.

ಲೋಕ ಚುನಾವಣೆ ಹೊಸ್ತಿಲಲ್ಲೇ ಡಿಕೆಶಿ ವಿರುದ್ಧದ ಅಕ್ರಮ ಹಣ ವರ್ಗಾವಣೆ ಕೇಸ್ ರದ್ದು

ಮಾ. 1 ರಂದು ಉಗ್ರಾಣ ನಿಗಮ ಮಂಡಳಿಗೆ ನೇಮಕ ಮಾಡಿ ಆದೇಶ ಹೊರಡಿಸಿರುವ ನಕಲು ಪ್ರತಿ ಫುಲ್ ವೈರಲ್ ಆಗಿದೆ. ಕಳೆದ 4-5 ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿರುವ ಸಿಎಂ ನಕಲು ಆದೇಶ ಪ್ರತಿ. ಮುಖ್ಯಮಂತ್ರಿ ಸಹಿಯನ್ನೇ ಬಿಡದ ಕಿರಾತಕರು ಪ್ರಕರಣ ಸಂಬಂಧ ಆರೋಪಿಗಳನ್ನ ಬಂಧಿಸುವಂತೆ ಒತ್ತಾಯ ಕೇಳಿಬಂದಿದೆ.

click me!